Advertisement

ಮನೆಯಲ್ಲಿ ಅಗ್ನಿ  ಮೂಲೆ ಎಲ್ಲಿರಬೇಕು ಗೊತ್ತಾ?

03:45 AM Jun 05, 2017 | Harsha Rao |

ಅಗ್ನಿ ಮೂಲೆ ಎಂದರೆ ಪಶ್ಚಿಮ ಮತ್ತು ದಕ್ಷಿಣ ದಿಕ್ಕುಗಳು ಸಂಗಮಿಸುವ ದಿಕ್ಕನ್ನು ಗಮನಿಸಿ ಭಾರತೀಯ ವಾಸ್ತು ಶಾಸ್ತ್ರ ಗಡಿ ಹಾಕಿದೆ. ಈ ದಿಕ್ಕನ್ನು ನಮ್ಮ ಭಾರತೀಯರ ಧಾರ್ಮಿಕ ನಂಬಿಕೆಯ ಪ್ರಕಾರ ಅಗ್ನಿಯು ನಿಯಂತ್ರಿಸುತ್ತಾನೆ.
ಅಗ್ನಿಯು ಹವ್ಯವಾಹನ, ಅನಲಸೇನ ಎಂಬಿತ್ಯಾದಿ ಹೆಸರುಗಳಿಂದಲೂ ಪ್ರಸಿದ್ಧ. ಅಷ್ಟದಿಕಾ³ಲಕರಲ್ಲಿ ಅಗ್ನಿಯೂ ಒಬ್ಬ. ಜಾಗತಿಕವಾದ ಉಷ್ಣ ಪಿಂಡಗಳೆಲ್ಲ ಸಾಮಾನ್ಯವಾಗಿ ತಮ್ಮ ಸುದೀರ್ಘ‌ ಸಂವಹನದ ಪ್ರಮುಖವಾದ ಸ್ನಿಗ್ಧತೆಯನ್ನು ಈ ಮೂಲೆಯಲ್ಲಿ ಒತ್ತಿ ನಿಲ್ಲಿಸುತ್ತವೆ. ಹೀಗಾಗಿ ಇದು ಅಗ್ನಿ ಮೂಲೆ.

Advertisement

ಮನೆಯನ್ನು ಕಟ್ಟಿದಾಗ ಈಶಾನ್ಯ ಮೂಲೆಗಿಂತ ಈ ಅಗ್ನಿ ಮೂಲೆ ತನ್ನ ಸ್ತರವನ್ನು ಕೊಂಚವೇ ಆದರೂ ಎತ್ತರಿಸಿಕೊಂಡಿರಬೇಕು. ಇದು ಹೆಚ್ಚು ಅಪೇಕ್ಷಣೀಯ. ಅಗ್ನಿ ಅವಘಡದಲ್ಲಿ ಈ ಎತ್ತರಿಸಲ್ಪಟ್ಟ ಸ್ತರದಿಂದಾಗಿ ಅಗ್ನಿ ಬಾಧೆ ಮನೆಗೆ ಹೆಚ್ಚು ಆವರಿಸದಂತೆ ನೀಡುವ ರಕ್ಷಣೆಗೆ ಕಾರಣವಾಗುತ್ತದೆ. ಆದರೆ ನೈಋತ್ಯ ಮೂಲೆಗಿಂತ ಅಗ್ನಿ ಮೂಲೆ ತಗ್ಗಿನಲ್ಲಿರಬೇಕು. ಇದು ಕೂಡ ಅಗ್ನಿ ಅವಘಡದಿಂದ ರಕ್ಷಣೆ ಪಡೆಯುವಲ್ಲಿ ಸಹಕಾರಿಯಾಗಿರುತ್ತದೆ. ಈ ಮೂಲೆ ಬಹಳಷ್ಟು ವಿಸ್ತಾರವೂ ಆಗಿರಬಾರದು. ನೇರವಾದ ಮೂಲೆ, ಕೋನದಲ್ಲಿ ಸಮಾವೇಶಗೊಳ್ಳುವುದು ಅಪೇಕ್ಷಣೀಯ ಹಾಗೂ ಸುರಕ್ಷತೆಗೆ ಆಧಾರ ಕೂಡ.

ಮನೆಯ ಒಡತಿ ಸಾಮಾನ್ಯವಾಗಿ ಮನೆಯಲ್ಲಿ ಅಡಿಗೆ ಮಾಡುತ್ತಾಳೆಂಬುದು ಭಾರತೀಯ ಕುಟುಂಬ ವ್ಯವಸ್ಥೆಯಲ್ಲಿ ಸ್ವೀಕೃತಿಗೊಂಡ ವಿಚಾರ. ಹೀಗಾಗಿ ಮನೆಯೊಡತಿ ಪೂರ್ವದಿಕ್ಕನ್ನು ಗಮನಿಸುವ ಹಾಗೆ, ಅಭಿಮುಖಗೊಳ್ಳುವ ರೀತಿ ಅಡುಗೆ ಮನೆ ಇರುವುದು ಒಳ್ಳೆಯದು. ಮನೆಯ ಸದಸ್ಯರ ಪಾಲಿಗೆ ಇದು ಶುಭಕರವಾದ ವಿಚಾರ. ಹೀಗೆ ಇರದೆಯೇ, ಅಗ್ನಿ ಮೂಲೆಯ ವಿಷಯದಲ್ಲಿ ಏನಾದರೂ ವಿಭಿನ್ನವಾದ ಬದಲಾವಣೆ ಆದರೆ ಅಗ್ನಿಯ ಕಾರಣವಾದ ಅನಾಹುತಗಳಿಗೆ ಇದು ದಾರಿಯಾದೀತು. ಮಕ್ಕಳ ಮಾನಸಿಕ ಘಟಕಗಳ ಏರುಪೇರುಗಳೂ ನಡೆದೀತು. ಅಗ್ನಿ ಮೂಲೆಯಲ್ಲಿ ಮನೆಯ ಬಾವಿಯನ್ನು ಕೂಡ ಅಗೆಯ ಕೂಡದು. ಮನೆಯ ನೀರನ್ನು ಯಾಂತ್ರಿಕವಾಗಿ ಮೇಲೆತ್ತುವ, ಸಂವಹನಕ್ಕಾಗಿ ಉಪಯೋಗಿಸುವ ಮೋಟಾರ್‌ ಪಂಪುಗಳೂ ಕೂಡ ಇರಬಾರದು. ಅನೇಕ ರೀತಿಯ ದೈಹಿಕ ಕಾಯಿಲೆಗಳಿಗೆ ಇದು
ಕಾರಣವಾಗಬಹುದು. ಹೆಣ್ಣು ಮಕ್ಕಳಿಗಂತೂ ಇದು ಅಶುಭ. ಸಹೋದರರ, ಸಹೋದರಿಯರ ನಡುವೆ ಕಲಹಗಳು, ಭಿನ್ನಾಭಿಪ್ರಾಯಗಳು ಸಂಭವಿಸುತ್ತವೆ.

ಎಚ್ಚರವಿರಲಿ. ಈ ಮೂಲೆಯಲ್ಲಿ ಬೆಡ್‌ರೂಮ್‌ಗಳನ್ನು ಕಟ್ಟಲೇಬಾರದು. ದಂಪತಿಗಳ ನಡುವೆ ವಿರಸಗಳು ಬೆಳೆಯುತ್ತವೆ.
ಈ ದಿಕ್ಕಿನಲ್ಲಿ ಹಣ, ಆಭರಣ, ಉಡುಪು, ದಿರಿಸು, ಬೆಲೆಬಾಳುವ ವಸ್ತುಗಳನ್ನು ಇಡಲೇಕೂಡದು. ಇಟ್ಟಲ್ಲಿ ಅಪಾರವಾದ ನಷ್ಟಕ್ಕೆ ದಾರಿ ಮಾಡಿಕೊಟ್ಟಂತಾಗುವುದು. ಇದನ್ನು ಗಮನಿಸಬೇಕು. ಈ ಮೂಲೆಯಲ್ಲಿ ಮುಂಬಾಗಿಲ ದ್ವಾರ ಕೂಡ ಇಡಬಾರದು. ಇದರಿಂದ ಮನೆಯಲ್ಲಿನ ಗಂಡು ಮಕ್ಕಳು, ಪುರುಷರು ತೊಂದರೆಗೆ ಸಿಲುಕಬಲ್ಲರು. ಅಗ್ನಿ ಮೂಲೆಯನ್ನು ಯುಕ್ತವಾಗಿ ರೂಪಿಸಿದಲ್ಲಿ ಮನೆಯಲ್ಲಿ ಮಂಗಲ ಕಾರ್ಯಗಳೆಲ್ಲ ಸುಸೂತ್ರವಾಗಿ ನಡೆದು, ಇದರ ಫ‌ಲವಾದ ಜೀವನದ
ಸಂಬಂಧವಾದ ಶುಭ ಫ‌ಲಗಳು ಕೂಡಿ ಬರುತ್ತವೆ. ಯಶಸ್ಸು ಮನೆಯನ್ನು ಆವರಿಸಿರುತ್ತದೆ. ನಗು, ಕೇಕೆ, ಸಂತೋಷ, ಉತ್ತಮವಾದ ಆರೋಗ್ಯಕ್ಕೆ ಪೂರಕವಾದ ಸ್ಪಂದನಗಳು ಮನೆಯಲ್ಲಿರುತ್ತವೆ. 

– ಅನಂತಶಾಸ್ತ್ರಿ

Advertisement
Advertisement

Udayavani is now on Telegram. Click here to join our channel and stay updated with the latest news.

Next