ದಿನವಿಡೀ ಫೋನ್‌ನಲ್ಲಿ ಮಾತಾಡುವುದಷ್ಟೇ ಪ್ರೀತಿಯಲ್ಲ. ಪೊಳ್ಳು ಮಾತಿನ ಮೆಸೇಜ್‌ನಲ್ಲಿಯೇ ಮುಳುಗಿರುವುದು ಪ್ರೀತಿಯಲ್ಲ. ಕಾಲ್ ಮಾಡಲಿಲ್ಲ, ಮೆಸೇಜ್‌ಗೆ ಸರಿಯಾಗಿ ರಿಪ್ಲೆ„ ಕೊಡಲಿಲ್ಲ ಅಂದಮಾತ್ರಕ್ಕೆ ಪ್ರೀತಿ ಕಡಿಮೆಯಾಯ್ತು ಅಂತ ಅರ್ಥವಲ್ಲ.
ನೀನು ಚಂದವಳ್ಳಿಯ ತೋಟದಲ್ಲಿ ಅರಳಿರುವ ಹೂವು. ನೀ ಸೇರುವ ಸ್ಥಾನ ನನ್ನ ಹೃದಯ ಅಂತ ನಂಬಿಕೆಯಲ್ಲಿ ಕಾಯುತ್ತಿರುವವನು ನಾನು. ಸ್ನೇಹದ ಸಂಗಡದಲ್ಲಿ ಒಂದಾದ ನಾವಿಬ್ಬರೂ ಇಂದು ಪ್ರೀತಿಯ ಗೂಡಿನಲ್ಲಿ ಜೋಡಿಹಕ್ಕಿಗಳಾಗಿದ್ದೇವೆ. ಸ್ನೇಹದ ಕುಲುಮೆಗೆ ಸಿಕ್ಕ ಸಂಬಂಧ ಈಗ ಪ್ರೀತಿಯ ಹಂತಕ್ಕೆ ಬಡ್ತಿ ಪಡೆದಿದೆ.
ಬಡ್ತಿ ಸಿಕ್ಕಿದೆ ಅಂದ್ಮೇಲೆ ನಮ್ಮ ಜವಾಬ್ದಾರಿಗಳೂ ಹೆಚ್ಚಿವೆ ಅಂತ ತಾನೇ ಅರ್ಥ? ಪ್ರೀತಿಯನ್ನು ಪೋಷಿಸಿಕೊಂಡು ಹೋಗಲು ನಾವಿಬ್ಬರೂ ಮತ್ತಷ್ಟು ಪ್ರಬುದ್ಧರಾಗಬೇಕು. ನಂಬಿಕೆಯನ್ನೇ ದೇವರು ಅಂತ ಪೂಜಿಸುವ ನಾವಿಬ್ಬರೂ ಹಠ ಮತ್ತು ಅಹಂಕಾರವನ್ನು ಬಿಟ್ಟು ಪ್ರೀತಿಯ ಬಳ್ಳಿಯನ್ನು ಹಬ್ಬಿಸೋಣ, ಸರೀನಾ?
ನೀನು ನನ್ನ ಜೊತೆ ಇದ್ದಾಗ ನಾನೆಷ್ಟು ಸಂತೋಷವಾಗಿರುತ್ತೇನೆ ಗೊತ್ತಾ? ಅದ್ಯಾವ ಶಕ್ತಿ ನಿನ್ನಲ್ಲಿದೆಯೋ ಗೊತ್ತಿಲ್ಲ. ಆದರೆ, ನಾನು ಬಯಸುವ ಎಲ್ಲ ಗುಣಗಳೂ ನಿನ್ನಲ್ಲಿವೆ. ಆ ಗುಣಗಳೇ ತಾನೇ ನಮ್ಮಿಬ್ಬರನ್ನು ಹತ್ತಿರವಾಗಿಸಿದ್ದು? ಆದರೂ, ನಿಂಗೊಂದಷ್ಟು ಮಾತುಗಳನ್ನು ಹೇಳಬೇಕು. ಅದೇನು ಅಂತ ಕೇಳಿಸಿಕೋ…
ದಿನವಿಡೀ ಫೋನ್‌ನಲ್ಲಿ ಮಾತಾಡುವುದಷ್ಟೇ ಪ್ರೀತಿಯಲ್ಲ. ಪೊಳ್ಳು ಮಾತಿನ ಮೆಸೇಜ್‌ನಲ್ಲಿಯೇ ಮುಳುಗಿರುವುದು ಪ್ರೀತಿಯಲ್ಲ. ಕಾಲ್ ಮಾಡಲಿಲ್ಲ, ಮೆಸೇಜ್‌ಗೆ ಸರಿಯಾಗಿ ರಿಪ್ಲೆ„ ಕೊಡಲಿಲ್ಲ ಅಂದಮಾತ್ರಕ್ಕೆ ಪ್ರೀತಿ ಕಡಿಮೆಯಾಯ್ತು ಅಂತ ಅರ್ಥವಲ್ಲ. ಹಾಗಾದ್ರೆ, ಇನ್ಮೆàಲಿಂದ ಫೋನು, ಮೆಸೇಜ್ ಮಾಡಬಾರದಾ ಅಂತ ಕೇಳ್ಬೇಡ. ಅವೆಲ್ಲವುಗಳ ಹಿಡಿತವಿದ್ದರೆ ಮಾತ್ರ ಪ್ರೀತಿಯ ಸೆಳೆತ ಬಲಿಷ್ಠವಾಗಿರುತ್ತದೆ. ಮಾತಿನ ಮಧ್ಯ, ಮತ್ತೆ ಮತ್ತೆ ಅಂತ ಪದಗಳಿಗಾಗಿ ತಡಕಾಡ್ತಾ ಇದ್ದೀವಿ ಅಂದರೆ, ನೀನೇ ಅರ್ಥ ಮಾಡ್ಕೊà. ನಿಜವಾದ ಪ್ರೀತಿ ಅಂದ್ರೆ ಏನಂತ ಗೊತ್ತಾ ನಿನಗೆ? ಹೇಳ್ತೀನಿ ಕೇಳು, ಎರಡು ಮನಸ್ಸುಗಳು ಎಷ್ಟು ದೂರವಿರುತ್ತವೆಯೋ ಪ್ರೀತಿ ಅಷ್ಟು ಬಲವಾಗಿರುತ್ತದೆ. ದೂರವಿದ್ದರೂ ಹತ್ತಿರವಿರುವುದೇ ಪ್ರೀತಿ.
“ನೀನು ಯಾವಾಗ್ಲೂ ನನ್ ಜೊತೆಗೇ ಇರಬೇಕು’ ಅಂತ ಬಯಸುವ ಹಠಮಾರಿ ಮನಸ್ಸು ನಿನ್ನದು ಅಂತ ನನಗೆ ಗೊತ್ತು. ನೀನು ಇಷ್ಟಪಟ್ಟಿದ್ದನ್ನು ಪಡೆಯುವುದು ನಿನ್ನ ಹಠವಾದರೆ, ನೀನು ಇಷ್ಟಪಟ್ಟಿದ್ದನ್ನು ನೀಡುವುದು ನನ್ನ ಹಠ. ಈ ಹಠಗಳ ಮಧ್ಯ ಬದುಕಿನ ಪಾಠವೂ ಹಸುರಾಗಿರಲಿ ಅಂತ ಇಷ್ಟೆಲ್ಲಾ ಹೇಳಬೇಕಾಯ್ತು.
ರೇವಣ್ಣಾ ಅರಳಿ