Advertisement

“ಕೆಜಿಎಫ್’ಟ್ರೈಲರ್‌ಗೆ ದಂಗಾದ ಸ್ಟಾರ್‌ಗಳು ಹೇಳಿದ್ದೇನು ಗೊತ್ತಾ?

03:30 PM Nov 10, 2018 | Team Udayavani |

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ “ಕೆಜಿಎಫ್’ ಚಿತ್ರ ಈಗಾಗಲೇ ಭಾರತೀಯ ಚಿತ್ರರಂಗದಲ್ಲಿ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿದ್ದು, ಶುಕ್ರವಾರವಷ್ಟೇ ಚಿತ್ರದ ಟ್ರೈಲರ್ ಐದು ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಅಲ್ಲದೇ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಲಕ್ಷಗಟ್ಟಲೆ ಸಿನಿರಸಿಕರು ಟ್ರೈಲರ್ ವೀಕ್ಷಣೆ ಮಾಡಿದ್ದು, ಭಾರತೀಯ ಚಿತ್ರರಂಗದಲ್ಲೇ “ಕೆಜಿಎಫ್’ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುವ ಎಲ್ಲ ಲಕ್ಷಣಗಳೂ ಗೋಚರಿಸುತ್ತಿವೆ.

Advertisement

ಏತನ್ಮಧ್ಯೆ ಚಿತ್ರದ ಟ್ರೈಲರ್ ಗೆ ಕೇವಲ ಅಭಿಮಾನಿಗಳು ಮಾತ್ರವಲ್ಲ, ಕನ್ನಡ ಸೇರಿದಂತೆ ಬೇರೆ ಬೇರೆ ಭಾಷೆಯ ನಟ, ನಿರ್ದೇಶಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ನಿರ್ದೇಶಕರಾದ ಶಶಾಂಕ್‌, ರಾಮ್‌ಗೋಪಾಲ್‌ ವರ್ಮಾ, ರಾಣಾ ದಗ್ಗುಭಾಟಿ, ಸುದೀಪ್‌, ಧನಂಜಯ್‌, ಜಗ್ಗೇಶ್‌, ಶ್ರೀಮುರಳಿ, ದಾನಿಶ್‌ ಸೇಠ್, ರಶ್ಮಿಕಾ ಮಂದಣ್ಣ, ಹರಿಪ್ರಿಯಾ ಸೇರಿದಂತೆ ಅನೇಕರು ಟ್ವೀಟ್‌ ಮೂಲಕ ಶುಭ ಕೋರಿದ್ದಾರೆ.

ನವರಸನಾಯಕ ಜಗ್ಗೇಶ್: ಕನ್ನಡ ಚಿತ್ರರಂಗದ ಕಿರೀಟಕ್ಕೊಂದು ನವಿಲುಗರಿ. ಭಾರತದ ದಶದಿಕ್ಕು ತಲುಪಲಿ ಕನ್ನಡಿಗರ ಕಾಯಕ. 

ಶ್ರೀಮುರಳಿ: ಒಂದೊಳ್ಳೆ ಅನುಭವಕ್ಕಾಗಿ ಕೆಜಿಎಫ್ ನೋಡಿ. ನಾನೂ ಕೂಡಾ ಸಿನಿಮಾ ನೋಡಲು ಕಾಯುತ್ತಿದ್ದೇನೆ.

ರಾಣಾ ದಗ್ಗುಬಾಟಿ: “ಕೆಜಿಎಫ್’ ಚಿತ್ರತಂಡಕ್ಕೆ ಶುಭಾಶಯಗಳು.

Advertisement

ಹರಿಪ್ರಿಯಾ: ಟ್ರೈಲರ್ ಅದ್ಭುತವಾಗಿದೆ. ಸಿನಿಮಾ ನೋಡಲು ಕಾತುರಳಾಗಿದ್ದೇನೆ.

ರಶ್ಮಿಕಾ ಮಂದಣ್ಣ: ಓ ಮೈ ಗಾಡ್.. ಓ ಮೈ ಗಾಡ್.. ಓ ಮೈ ಗಾಡ್.. ಅದ್ಭುತ ಟ್ರೈಲರ್. 

ರಾಮ್‍ಗೋಪಾಲ್ ವರ್ಮಾ: “ಕೆಜಿಎಫ್’ ಟ್ರೈಲರ್ ನೀವು ನೋಡಲೇಬೇಕು. ಉ.ಭಾರತದ ಚಿತ್ರಗಳಿಗಿಂತ ದ.ಭಾರತದ ಚಿತ್ರಗಳು ಬೆಳೆಯುತ್ತಿವೆ.

ಶಶಾಂಕ್, ನಿರ್ದೇಶಕ: ಕನ್ನಡ ಚಿತ್ರರಂಗವನ್ನು ಇನ್ನೊಂದು ಹಂತಕ್ಕೆ ತೆಗೆದುಕೊಂಡು ಹೋಗುವುದು ಎಂದರೆ ಇದೇ.. ಯಶ್, ಹೊಂಬಾಳೆ ಫಿಲಂಸ್, ಪ್ರಶಾಂತ್ ನೀಲ್ ಮತ್ತು “ಕೆಜಿಎಫ್’ ತಂಡಕ್ಕೆ ಶುಭಾಶಯಗಳು

ಡ್ಯಾನಿಶ್ ಸೇಠ್: ವ್ಹಾವ್… ವ್ಹಾವ್… ವ್ಹಾವ್.. “ಕೆಜಿಎಫ್’ ಅದ್ಭುತ ಟ್ರೈಲರ್. 

ಕೃಷ್ಣ, ನಿರ್ದೇಶಕ: ಟ್ರೈಲರ್ ನಿಜಕ್ಕೂ ಗಮನ ಸೆಳೆಯುತ್ತಿದೆ. ಸುದೀರ್ಘ ವರ್ಷಗಳ ಶ್ರಮ, ಪ್ರತಿಭೆ ಎದ್ದು ಕಾಣುತ್ತಿದೆ.

ರಿಷಬ್ ಶೆಟ್ಟಿ: ಇದು ಮಾಸ್. ಇದು ಕ್ಲಾಸ್. ಅಥವಾ ಆ ಎರಡನ್ನೂ ಮೀರಿದ್ದು. ಕನ್ನಡ ಸಿನಿಮಾ ಎಂದರೆ ಇದು. ಪ್ರಶಾಂತ್ ನೀಲ್ ಮತ್ತೊಮ್ಮೆ ಟ್ರೆಂಡ್ ಸೆಟ್ಟರ್ ಆಗಿದ್ದಾರೆ. ಯಶ್ ಅವರನ್ನು ಬಣ್ಣಿಸಲು ಪದಗಳಿಲ್ಲ.

ಹೇಮಂತ್ ರಾವ್: ಇದೊಂದು ಎಪಿಕ್. ಆ ದೃಶ್ಯ ವೈಭವ, ಮೇಕಿಂಗ್ ಅದ್ಭುತ.

ಆರ್ಯ: ಅತ್ಯದ್ಭುತ ಟ್ರೈಲರ್, 3 ವರ್ಷಗಳ ಶ್ರಮ ಹೇಗಿದೆ ಅನ್ನೋದಕ್ಕೆ ಟ್ರೈಲರ್ ಸಾಕ್ಷಿ.

ಪವನ್ ಒಡೆಯರ್: ಕನ್ನಡ ಚಿತ್ರರಂಗದಲ್ಲಿ ಹೊಸ ಇತಿಹಾಸ ಬರೆಯುವ ಮುನ್ಸೂಚನೆ ನೀಡಿದೆ. ರೋಮಾಂಚನಗೊಳಿಸುವ ಟ್ರೈಲರ್.

ಕಿಚ್ಚ ಸುದೀಪ್: ಲಾವಾರಸ ಉಕ್ಕಿ ಬಂದಂತಿಂದೆ. “ಕೆಜಿಎಫ್’ ತಂಡಕ್ಕೆ ನನ್ನ ಶುಭಾಶಯಗಳು. ನಿರ್ದೇಶಕ ಪ್ರಶಾಂತ್ ನೀಲ್‍ಗೆ ಹ್ಯಾಟ್ಸಾಫ್. ಯಶ್ ಲುಕ್ ಚೆನ್ನಾಗಿದೆ. ಹೊಂಬಾಳೆ ಫಿಲಂಸ್‍ಗೆ ಅಭಿನಂದನೆಗಳು.

ಶೃತಿ ಹರಿಹರನ್: ಟ್ರೈಲರ್ ಥ್ರಿಲ್ ನೀಡುತ್ತಿದೆ.

ಇನ್ನು ಕನ್ನಡ ಚಿತ್ರರಂಗದಲ್ಲೇ ಅತೀ ದೊಡ್ಡ ಬಜೆಟ್ ಸಿನಿಮಾ ಆಗಿರುವ “ಕೆಜಿಎಫ್’, ಇದೇ ಡಿಸೆಂಬರ್ 21ರಂದು ಐದು ಭಾಷೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಲಿದೆ. 80ರ ದಶಕದ ಕಾಲಘಟ್ಟದ ಕಥೆಯಲ್ಲಿ ಪಾತ್ರಕ್ಕಾಗಿ ಒಂದೂವರೆ ವರ್ಷ ಗಡ್ಡ, ಕೂದಲು ಬಿಟ್ಟು ರಫ್ ಅಂಡ್ ಟಫ್ ಲುಕ್​ನಲ್ಲಿ ಯಶ್​​​ ಕಾಣಿಸಿಕೊಂಡಿದ್ದಾರೆ.ಅವರ ಅಭಿನಯ ಕೂಡ ಈ ಚಿತ್ರದಲ್ಲಿ ಸಖತ್ ಡಿಫರೆಂಟ್ ಆಗಿದೆ ಎನ್ನಲಾಗುತ್ತಿದೆ.

ಇನ್ನು ಚಿತ್ರವನ್ನು ಪ್ರಶಾಂತ್ ನೀಲ್ ನಿರ್ದೇಶಿಸಿದ್ದು, ಭುವನ ಗೌಡ ಛಾಯಾಗ್ರಹಣ ಮಾಡಿದ್ದಾರೆ. ಯಶ್ ಎದುರಿಗೆ ನಾಯಕಿಯಾಗಿ ಶ್ರೀನಿಧಿ ಶೆಟ್ಟಿ ನಟಿಸಿದ್ದು, ಇನ್ನುಳಿದಂತೆ ಅನಂತ್ ನಾಗ್, ಮಾಳವಿಕಾ, ಟಿ.ಎಸ್.ನಾಗಾಭರಣ, ಬಿ,ಸುರೇಶ್, ಅಯ್ಯಪ್ಪ, ನೀನಾಸಂ ಅಶ್ವಥ್, ಅಚ್ಯುತ್ ಕುಮಾರ್, ರಾಮ್, ಅವಿನಾಶ್, ಲಕ್ಕಿ, ಹರೀಶ್ ರಾಯ್ ಸೇರಿದಂತೆ ಹಲವರು ಚಿತ್ರದಲ್ಲಿ ನಟಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next