Advertisement
ಅದರಲ್ಲೂ ಮುಖ್ಯವಾಗಿ ದಿಗಂತ್-ಐಂದ್ರಿತಾರ ಆಪ್ತ ಸ್ನೇಹಿತೆಯಾದ ರಾಗಿಣಿಗೆ ತುಂಬಾನೆ ಖುಷಿ ತಂದಿದೆಯಂತೆ. ಹೌದು! ತುಪ್ಪದ ಬೆಡಗಿ ರಾಗಿಣಿ, ನವಜೋಡಿಗೆ ಟ್ವಿಟ್ಟರ್ ಮೂಲಕ ಶುಭಾಶಯ ಕೋರಿದ್ದಾರೆ. ಈ ಬಗ್ಗೆ ಟ್ವೀಟರ್ ನಲ್ಲಿ ರಾಗಿಣಿ “ಈ ಖುಷಿಯನ್ನು ವ್ಯಕ್ತಪಡಿಸೋಕೆ ಆಗ್ತಿಲ್ಲ. ಅಷ್ಟೊಂದು ಖುಷಿಯಾಗುತ್ತಿದೆ. ಮದುವೆಯಾಗುತ್ತಿರುವುದಕ್ಕೆ ಇಬ್ಬರಿಗೂ ಶುಭಾಶಯ’ ಎಂದು ಬರೆದುಕೊಂಡಿದ್ದಾರೆ.
ಇನ್ನು ದಿಗಂತ್ ಮತ್ತು ಐಂದ್ರಿತಾ ಕಳೆದ 8 ವರ್ಷಗಳಿಂದ ಪ್ರೀತಿಸುತ್ತಿದ್ದರು. 2009 ರಲ್ಲಿ “ಮನಸಾರೆ’ ಚಿತ್ರದಲ್ಲಿ ಜೊತೆಯಾಗಿ ನಟಿಸುವ ವೇಳೆ ಇಬ್ಬರಿಗೆ ಪ್ರೇಮಾಂಕುರವಾಗಿತ್ತು. ಸದ್ಯ ದಿಗಂತ್ ಅವರು ಶ್ರೀಲಂಕಾಕ್ಕೆ ಸ್ನೇಹಿತರೊಂದಿಗೆ ಪ್ರವಾಸಕ್ಕೆ ತೆರಳಿದ್ದಾರೆ. 11 ರಂದು ಹಳದಿ ಕಾರ್ಯಕ್ರಮ, 12 ರಂದು ಮದುವೆ ಶಾಸ್ತ್ರದ ಜೊತೆಗೆ ಸ್ಯಾಂಡಲ್‌ವುಡ್ ಮಂದಿ ಮತ್ತು ಸ್ನೇಹಿತರಿಗೆ ಔತಣ ಕೂಟ ನಡೆಯಲಿದೆಯಂತೆ.