Advertisement

ಪೆನ್ಸ್ ನ್‌ ಸ್ಕೀಂನ ಸತ್ಯಗಳು ಗೊತ್ತಾ?

10:01 PM Sep 10, 2018 | |

ಉತ್ತಮ ಪೆನ್ಸ್ ನ್‌ ಸಿಗುತ್ತದೆ ಅನ್ನುವುದಾದರೆ ಕಡಿಮೆ ಸಂಬಳದ ಕೆಲಸಕ್ಕಾದರೂ ಸೇರಿಬಿಡ್ತೇವೆ ಎಂಬುದು ಹಲವರ ಮಾತು. ನಿವೃತ್ತಿ ಹೊಂದಿದ ನಂತರ ಜೊತೆಯಾಗುವ ಕಾಯಿಲೆಗಳ ಖರ್ಚುಗಳಿಗೆ ಜಾಸ್ತಿ ಅನ್ನುವಷ್ಟೇ ಹಣ ಬೇಕಾಗುತ್ತದೆ. ಆ ಖರ್ಚು, ಯಾವುದಾದರೂ ಸ್ಕೀಮ್‌ನಲ್ಲಿ ಸಿಗಬಹುದಾ ಎಂಬ ಕುತೂಹಲ ಹಲವರಿಗೆ ಇರುತ್ತದೆ. ಆದರೆ ಬೆಸ್ಟ್‌ ಸ್ಕೀಂ ಎಂಬ ಹಣೆಪಟ್ಟಿ ಹಾಕಿಕೊಂಡ ಯೋಜನೆಗಳ ಹಿಂದೆ ಹಲವು ಸುಳಿಗಳು ಇರುತ್ತವೆ…

Advertisement

ಪೆನ್ಸ್ ನ್‌ ಎಂಬುದು, ಎಲ್ಲಾ ನೌಕರರು ಮನಸ್ಸಿನಲ್ಲೇ ತಿನ್ನುವ ಮಂಡಿಗೆ. ಉತ್ತಮ ಪೆನ್ಸ್ ನ್‌ ಸಿಗುವುದಿದ್ರೆ ಕಡಿಮೆ ಸಂಬಳ ಬಂದರೂ ಪರವಾಗಿಲ್ಲ ಎನ್ನುವುದು ಸರಿ ಸುಮಾರು ಎಲ್ಲಾ ನೌಕರರು ಹೇಳುವ ಮಾತು. ಆದರೆ ಉತ್ತಮ ಪೆನ್ಸ್ನ್‌ ಎಂದರೆ ಏನು? ಒಂದೆಡೆಯಲ್ಲಿ ಸರಕಾರಿ ನೌಕರರಿಗೆ ಡಿ.ಎ ಆಧಾರಿತ ಪೆನ್ಸ್ನ್‌ ಹಣವನ್ನು ಉಂಬಳಿಯ ರೂಪದಲ್ಲಿ ನೀಡುವ ಪರಿಪಾಠವಿತ್ತು. ಆದರೀಗ ಅವರಿಗೂ ಕೂಡಾ ಎನ್‌.ಪಿ.ಎಸ್‌ ಎಂಬ ದೇಣಿಗೆ ಆಧಾರಿತ ಪೆನ್ಸ್ನ್‌ ಯೋಜನೆಯನ್ನು ತರಲಾಗಿದೆ. ಖಾಸಗಿ ಕ್ಷೇತ್ರದಲ್ಲಂತೂ ಕೇಳುವುದೇ ಬೇಡ. ಇಪಿಎಸ್‌-95 ಎಂಬ ಒಂದು ಜನಪ್ರಿಯ ಪೆನÒನ್‌ ಯೋಜನೆಯನ್ನು ಹಿಡಿದುಕೊಂಡು ಜನ ಸಾಮಾನ್ಯನೊಬ್ಬನು ಪಿಂಚಣಿಯ ಕನಸು ಕಾಣುತ್ತಿರುತ್ತಾನೆ. ಆದರೆ ಈ ಇಪಿಎಸ್‌ ಅಂದರೆ ಏನು? ಇದರ ನಿಯಮಾವಳಿಗಳೇನು? ಲಾಭ ನಷ್ಟಗಳೇನು? ಎಂಬುದನ್ನು ಆತ ಅರಿಯ. ಎಲ್ಲರೂ ಜೈಕಾರ ಹಾಕುವ ಈ ಯೋಜನೆಗೆ ಜನಸಾಮಾನ್ಯನೂ ಗುಂಪಿನಲ್ಲಿ ಗೋವಿಂದ ಹಾಡುತ್ತಾನೆ. ಇದೀಗ ಇಪಿಎಸ್‌ 95 ಮತ್ತದರ ಲಾಭ ನಷ್ಟಗಳ ಲೆಕ್ಕ ಹಾಕೋಣ:

ಇಪಿಎಸ್‌ 95:
ಇಪಿಎಫ್ಓ, 1952 ಅಡಿಯಲ್ಲಿ ಇಪಿಎಸ್‌, 1995 (ಎಂಪ್ಲಾಯೀಸ್‌ ಪೆನÒನ್‌ ಸ್ಕೀಮ…) ಮತ್ತು ಇಪಿಎಫ್, 1952 (ಎಂಪ್ಲಾಯೀಸ್‌ ಪ್ರಾವಿಡೆಂಟ… ಫ‌ಂಡ್‌) ಜಂಟಿಯಾಗಿ ನಡೆಯುತ್ತದೆ. ಬಹು ಜನಪ್ರಿಯವಾಗಿ ಪಿಎಫ್ ದುಡ್ಡು ಎಂದೇ ಕರೆಯಲ್ಪಡುವ ಈ ನಿಧಿಗೆ ಉದ್ಯೋಗಿಯ ವತಿಯಿಂದ ಸಂಬಳದ (ಬೇಸಿಕ್‌+ಡಿಎ) ಶೇ.12ರಷ್ಟು  ಹಾಗೂ ಕಂಪೆನಿಯ ವತಿಯಿಂದ ಸಮಾನ ಶೇ. 12ರಷ್ಟು ದೇಣಿಗೆ ಹೂಡಲ್ಪಡುತ್ತದಲ್ಲವೇ? ಅದರಲ್ಲಿ ಉದ್ಯೋಗಿಯ ಶೇ. 12ರಷ್ಟು ದೇಣಿಗೆ ಪೂರ್ತಿಯಾಗಿ ಇಪಿಎಫ್ ಫ‌ಂಡಿಗೆ ಹೋದರೆ  ಕಂಪೆನಿಯ ಶೇ.12ರಷ್ಟು ದೇಣಿಗೆಯಲ್ಲಿ ನಿಜವಾಗಿ 2 ವಿಭಾಗಗಳಿವೆ.  ಎಂಪ್ಲಾಯೀಸ್‌ ಪ್ರಾವಿಡೆಂಟ್‌ ಫ‌ಂಡ್‌  (ಇಪಿಎಫ್) ಮತ್ತು ಎಂಪ್ಲಾಯೀಸ್‌ ಪೆನÒನ್‌ ಸ್ಕೀಮ… (ಇಪಿಎಸ್‌)

ದೇಣಿಗೆ:
ಕಂಪೆನಿಯ ಶೇ.12 ರಲ್ಲಿ ಶೇ. 8.33ರಷ್ಟು ಹಣ ಮೊತ್ತಮೊದಲು ಎಂಪ್ಲಾಯೀಸ್‌ ಪೆನÒನ್‌ ಸ್ಕೀಮ…ಗೆ (ಇಪಿಎಸ್‌) ಹೋಗುತ್ತದೆ; ಆದರೆ ಈ ದೇಣಿಗೆಗೆ ಸಂಬಳದ ಗರಿಷ್ಠ ಮಿತಿ ರೂ. 15,000. ಅಂದರೆ, ರೂ 1,245 ದೇಣಿಗೆಯ ಗರಿಷ್ಠ ಮೊತ್ತ. ಅದನ್ನು ಮೀರಿ ಈ ಪೆನÒನ್‌ ಫ‌ಂಡಿಗೆ ದೇಣಿಗೆ ಹೋಗುವುದಿಲ್ಲ. 12% ದಲ್ಲಿ ಉಳಿದ ಮೊತ್ತ ಎಂಪ್ಲಾಯೀಸ್‌ ಪ್ರಾವಿಡೆಂಟ… ಫ‌ಂಡ್‌ಗೆ  (ಇಪಿಎಫ್) ಹೋಗುತ್ತದೆ. ಇದಲ್ಲದೆ, ಈ ಪೆನÒನ್‌ ಫ‌ಂಡಿಗೆ ಉದ್ಯೋಗಿಯ ದೇಣಿಗೆ ಇರುವುದಿಲ್ಲ. ಎಷ್ಟೋ ಉದ್ಯೋಗಿಗಳ ಪೆನÒನ್‌ ಫ‌ಂಡಿಗೆ ಬರುವ ದೇಣಿಗೆ ಮಾಸಿಕ ರೂ .1,245 ಮಾತ್ರ. ಇದಲ್ಲದೆ ಸರಕಾರದ ವತಿಯಿಂದ ಸಂಬಳದ 1.16% (ಗರಿಷ್ಠ ಮಿತಿ ರೂ 6,500 ಅಂದರೆ ರೂ. 174) ಸಬ್ಸಿಡಿ ರೂಪದಲ್ಲಿ ಜಮೆಯಾಗುತ್ತದೆ. ಹೀಗೆ ನಿಮ್ಮ ಪೆನÒನ್‌ ಫ‌ಂಡಿಗೆ ಜಮೆಯಾಗುವ ಒಟ್ಟು ದೇಣಿಗೆ, ನಿಮಗೆ ಬರುವ ಸಂಬಳದಲ್ಲಿ 9.49% (ಗರಿಷ್ಠ ರೂ. 1419)

ಪೆನ್ಸ್ನ್‌ ಅನುದಾನ: 
ಈ ಸ್ಕೀಮಿನಲ್ಲಿ ಪೆನ್ಸ್ನ್‌ 58 ತುಂಬಿದವರಿಗೆ, ಸೇವೆಯಲ್ಲಿರುವಾಗಲೇ ಅಂಗ ಊನವಾದವರಿಗೆ, ಉದ್ಯೋಗಿ ತೀರಿಕೊಂಡಲ್ಲಿ ಪತಿ/ಪತ್ನಿಗೆ ಮತ್ತು ಮಕ್ಕಳಿಗೆ ಲಭಿಸುತ್ತದೆ. ಸ್ವಯಂ ನಿವೃತ್ತರಿಗೂ ಇಳಿಸಿದ ದರದಲ್ಲಿ ಲಭಿಸುತ್ತದೆ.
1.    58 ತುಂಬಿದ ಉದ್ಯೋಗಿ:
 –    ಪ್ರತಿಯೊಬ್ಬ ಉದ್ಯೋಗಿಗೂ  58 ರ ವಯಸ್ಸಿನಲ್ಲಿ ಪೆನ್ಸ್ನ್‌ ಆರಂಭವಾಗುತ್ತದೆ.
–    ಪೆನ್ಸ್ನ್‌ ಪಡೆಯಲು ಅರ್ಹರಾಗಲು ಕನಿಷ್ಠ 10 ವರ್ಷದ ದೇಣಿಗೆ, ಫ‌ಂಡಿನಲ್ಲಿ ಜಮೆಯಾಗಿರಬೇಕು. 
            ಇದು ಬೇರೆ ಬೇರೆ ಕಂಪೆನಿಗಳಲ್ಲಿ ವರ್ಗಾಯಿಸಲ್ಪಟ್ಟ ಒಟ್ಟು ಅವಧಿಯೂ ಆದೀತು.  
–    ಉದ್ಯೋಗಿಯ ಜೀವಿತಾವಧಿಯವರೆಗೆ ಮತ್ತು ಬಳಿಕ, ಕುಟುಂಬದವರಿಗೆ ಪೆನ್ಸ್ನ್‌ ಲಭಿಸುತ್ತದೆ.

Advertisement

ಪೆನ್ಸ್ನ್‌ ಮೊತ್ತದ ಲೆಕ್ಕಾಚಾರ ಹೀಗೆ: 
      ಮಾಸಿಕ ಪೆನ್ಸ್ನ್‌= (ಪೆನ್ಸ್ನಾರ್ಹ ಸಂಬಳ * ಪೆನ್ಸ್ನಾರ್ಹ ಸೇವಾ ಅವಧಿ)/70
ಇಲ್ಲಿ ಪೆನ್ಸ್ನಾರ್ಹ ಸಂಬಳ ಎಂದರೆ, ನಿವೃತ್ತಿಯ ಹಿಂದಿನ 12 ತಿಂಗಳುಗಳ ಸರಾಸರಿ ಸಂಬಳ (ಬೇಸಿಕ್‌+ಡಿಎ). ಆದರೆ ಇಲ್ಲಿ ರೂ.15,000 ರ ಗರಿಷ್ಠ ಮಿತಿ ಇದೆ. ಇಲ್ಲಿ ಪೆನ್ಸ್ನಾರ್ಹ ಸೇವಾ ಅವಧಿ ಎಂದರೆ ಪೆನ್ಸ್ನ್‌ ನಿಧಿಗೆ ದೇಣಿಗೆ ನೀಡಿದ ಸೇವಾ ಅವಧಿ; 20 ವರ್ಷ ಸೇವೆ ಸಲ್ಲಿಸಿದವರಿಗೆ 2 ವರ್ಷಗಳ ಸೇವೆಯನ್ನು ಬೋನಸ್‌ ರೂಪದಲ್ಲಿ ಸೇರಿಸಲಾಗುವುದು. ಗರಿಷ್ಠ 35 ವರ್ಷಗಳು. ಈ ಲೆಕ್ಕದ ಪ್ರಕಾರ, ಒಬ್ಟಾತನಿಗೆ ಗರಿಷ್ಠ ಪೆನÒನ್‌ ಮಾಸಿಕ (15000*35)/70 = ರೂ 7500 ಮಾತ್ರ. 

2.    ವಿಡೋ/ವಿಡೊವರ್‌ ಪೆನÒನ್‌ ಮತ್ತು ಮಕ್ಕಳ ಪೆನ್ಸ್ನ್‌
ಸೇವೆಯಲ್ಲಿರುವಾಗಲೋ ಅಥವಾ ಪೆನÒನ್‌ ಪಡೆಯುತ್ತಿರುವಾಗಲೋ ಉದ್ಯೋಗಿ ಮೃತನಾದರೆ ಆ ಕೂಡಲೇ ಉದ್ಯೋಗಿಯ ಪತ್ನಿ/ಪತಿಗೆ ಮರಣದ ತನಕ  ಅಥವಾ ಮರುಮದುವೆಯವರೆಗೆ ಮಾಮೂಲು ದರ ದ 50% ಪೆನÒನ್‌ಗೆ ಬಾಧ್ಯರಾಗುತ್ತಾರೆ. ಅಲ್ಲದೆ ಹೆಚ್ಚುವರಿಯಾಗಿ ಒಮ್ಮೆಗೇ 2 ಮಕ್ಕಳಿಗೆ, ಅವರಿಗೆ 21 ವಯಸ್ಸಾಗುವವರೆಗೆ ತಲಾ 25% ಮಕ್ಕಳ ಪೆನÒನ್‌ ಕೂಡಾ ಲಭಿಸುತ್ತದೆ. ಪೂರ್ತಿ ಅಂಗ ಊನ ಇರುವ ಮಕ್ಕಳಿದ್ದರೆ ಅವರಿಗೆ ಈ ವಯಸ್ಸು ಮತ್ತು 2 ಮಕ್ಕಳ ಮಿತಿ ಅನ್ವಯಿಸುವುದಿಲ್ಲ. ಮದುವೆಯಾಗದವರ ಕೇಸಿನಲ್ಲಿ, ಅಥವಾ ಹೆಂಡತಿ/ಮಕ್ಕಳಿಲ್ಲದವರ ಕೇಸಿನಲ್ಲಿ ಆತ ಸೂಚಿಸಿದ ನಾಮಿನಿಗೆ ಅಥವಾ ಅವಲಂಭಿತ ತಂದೆ/ತಾಯಿಗೆ ಪೆನÒನ್‌ ಸಿಗುತ್ತದೆ.
 
3.    ಅನಾಥ/ಆಫ‌ìನ್‌ ಪೆನ್ಸ್ನ್‌:
ಮೃತನ ವಾರಸುದಾರರಾಗಿ ಮಕ್ಕಳು ಮಾತ್ರ ಇದ್ದರೆ ಅವರಿಗೆ ವಿಡೋ ಪೆನ್ಸ್ನ್‌ನ 75% ರಷ್ಟು ಸಿಗುತ್ತದೆ. 

4.    ಅರ್ಲಿ ಪೆನ್ಸ್ನ್‌: 
ಕನಿಷ್ಠ 50 ವರ್ಷ ವಯಸ್ಸಾದವರಿಗೆ, ಸೇವೆಯಲ್ಲಿ ಇಲ್ಲದವರಿಗೆ ಕನಿಷ್ಠ 10 ವರ್ಷ ಸೇವೆ ಸಲ್ಲಿಸಿದವರಿಗೆ ಇಳಿಸಿದ ದರದಲ್ಲಿ ಅರ್ಲಿ ಪೆನÒನ್‌ ಆರಂಭಿಸಬಹುದಾಗಿದೆ. ಇಳಿಸಿದ ದರ ಅಂದರೆ 58 ರಿಂದ ಪ್ರತೀ 1 ಕಡಿಮೆ ವಯಸ್ಸಿಗೂ ಸಿಗಬೇಕಾದ ಪೆನ್ಸ್ ನ್‌ ದರದಿಂದ 4% ಕಡಿತವಾಗುತ್ತದೆ. 

ಆದಾಯ ಕರ ಮತ್ತು ಹಿಂಪಡೆತ
ಪೆನ್ಸ್ ನ್‌ ಮೂಲಕ ಬರುವ ದುಡ್ಡು ಸಂಪೂರ್ಣವಾಗಿ ಕರಾರ್ಹ ಆದಾಯವಾಗಿರುತ್ತದೆ. ಅಂದರೆ, ಈ ಆದಾಯವನ್ನು ನಿಮ್ಮ ಇತರ ಆದಾಯದೊದನೆ ಸೇರಿಸಿ ಟೇಬಲ್ ಆದಾಯ ಕೋಷ್ಟಕದ ಪ್ರಕಾರ ನೀವು ತೆರಿಗೆ ನೀಡತಕ್ಕದ್ದು.  
ಈ ಪೆಲ್ ನ್‌ ಫ‌ಂಡಿನಿಂದ ಅವಧಿಪೂರ್ವ ಹಿಂಪಡೆತ ಸಾಧ್ಯ. ಆದರೆ ನಿಮ್ಮ ಪೆಲ್ ನ್‌ ಫ‌ಂಡಿಗೆ 10 ವರ್ಷಗಳಿಗಿಂತ ಕಡಿಮೆ ವಯಸ್ಸಾದರೆ ಮಾತ್ರ. 10 ವರ್ಷಗಳು ಮೀರಿದರೆ ಹಿಂಪಡೆತ ಸಾಧ್ಯವಿಲ್ಲ.  ಉದ್ಯೋಗ ಬದಲಿಸಿದರೆ ನಿಮ್ಮ ಹೊಸ ಉದ್ಯೋಗದಾತರಿಗೆ ನಿಮ್ಮ ಫ‌ಂಡನ್ನು ಕಡ್ಡಾಯವಾಗಿ ವರ್ಗಾಯಿಸಬೇಕು. ಉದ್ಯೋಗ ಇಲ್ಲದಿದ್ದರೆ ನಿಮಗೆ 58 ವರ್ಷ ವಯಸ್ಸಾಗುವವರೆಗೆ ಕಾದು ಕುಳಿತ ಬಳಿಕ ಫಾಮ್ರುಲಾ ಪ್ರಕಾರ ಮಾಸಿಕ ಪೆನÒನ್‌ ಪಡೆಯಬಹುದು. 

ಈ ಕೆಳಗಿನ ಟೇಬಲ್-ಡಿ ಪ್ರಕಾರ ಕೆಲಸ ಬಿಟ್ಟ ಕೊನೆಯ ತಿಂಗಳ ಸಂಬಳದ (ಗರಿಷ್ಠ ಮಿತಿ ರೂ 15000) ಇಂತಿಷ್ಟು ಪಾಲು ಮೊತ್ತವನ್ನು ಏಕಗಂಟಿನಲ್ಲಿ ಹಿಂಪಡೆಯಬಹುದು. ಅಲ್ಲಿಗೆ ಆತನ ಪೆನÒನ್‌ ಖಾತೆ ಕೊನೆಗೊಳ್ಳುತ್ತದೆ.
1 ವರ್ಷ   1.02 ಪಾಲು
2 ವರ್ಷ   2.05 ಪಾಲು
3 ವರ್ಷ   3.10 ಪಾಲು
4 ವರ್ಷ   4.18 ಪಾಲು
5 ವರ್ಷ   5.28 ಪಾಲು
6 ವರ್ಷ   6.40 ಪಾಲು
7 ವರ್ಷ   7.54 ಪಾಲು
8 ವರ್ಷ   8.70 ಪಾಲು
9 ವರ್ಷ   9.88 ಪಾಲು

ಉದಾಹರಣೆಗೆ, ಒಬ್ಟಾತನ ಕೊನೆ ತಿಂಗಳ ಬೇಸಿಕ್‌+ಡಿ.ಎ ರೂ. 20,000 ಆಗಿದ್ದಲ್ಲಿ ಮತ್ತು ಆತ 7 ವರ್ಷಗಳ ಕಾಲ ಈ ಫ‌ಂಡಿಗೆ ದೇಣಿಗೆ ನೀಡಿದ್ದಲ್ಲಿ, ಆತ ಫ‌ಂಡ್‌ ಬಿಟ್ಟು ಹೋಗುವಾಗ ಗರಿಷ್ಠ ಮಿತಿ ರೂ 15, 000 ರ 7.54 ಪಾಲು = ರೂ. 113110 ಏಕಗಂಟಿನಲ್ಲಿ ಸಿಗುತ್ತದೆ. ಮತ್ತು ಆತನ ಪೆಲ್ ನ್‌ ಖಾತೆ ಅಲ್ಲಿಗೆ ಕೊನೆಗೊಳ್ಳುತ್ತದೆ. ಗಮನಿಸಿ: ಈ 7 ವರ್ಷಗಳಲ್ಲಿ ಮಾಸಿಕ ಗರಿಷ್ಠ  ರಂತೆ ಒಟ್ಟು ದೇಣಿಗೆ 1245*12*7 = ರೂ 104580 ನೀಡಿರುತ್ತಾನೆ. ಅಂದರೆ ಹಿಂಪಡೆವ ಮೊತ್ತ ಮತ್ತು ನೀಡಿದ ದೇಣಿಗೆ ಸರಿಸುಮಾರು ಒಂದೇ ಆಗಿರುತ್ತದೆ. ಅದರರ್ಥ, ದೇಣಿಗೆಯ ಮೇಲೆ ಉತ್ತಮವಾದ ಬಡ್ಡಿ ಸಿಗುವುದಿಲ್ಲ.

ಈ ವಿವರಗಳು ನಾವು ಈಗ ಚರ್ಚೆ ಮಾಡುತ್ತಿರುವ ಇಪಿಎಸ್‌, 1995 ಎಂಬ ಪೆನÒನ್‌ ಸ್ಕೀಮಿಗೆ ಸಂಬಂಧ ಪಟ್ಟದ್ದು. ಇಪಿಎಫ್ ಅಲ್ಲದ ಬೇರೆ ಬೇರೆ ಪೆಲ್ ನ… ಸ್ಕೀಮುಗಳ ವಿವರಗಳು ಬೇರೆ ಬೇರೆ ಇರುತ್ತವೆ. ಎಲ್ಲವನ್ನೂ ಅರೆಬರೆ ತಿಳಿದುಕೊಂಡು ಅವುಗಳ ಸಜ್ಜಿಗೆ-ಬಜಿಲ… ಮಾಡಿಕೊಂಡು ಗೊಂದಲಕ್ಕೊಳಗಾಗಬೇಡಿ

ಮಕ್ಮಲ್‌ ಟೋಪಿ
ಪ್ರತಿ ತಿಂಗಳು ರೂ. 1,245 ಕಟ್ಟುವ ಉದ್ಯೋಗಿಗಳಿಗೆ ನಮ್ಮ ಸರಕಾರ ಹೇಗೆ ಮಕ್ಮಲ್ ಟೋಪಿ ಹೊಲಿಯುತ್ತಿದೆ ಎಂದು ಗೊತ್ತಾಗಬೇಕಾದರೆ ಅದೇ ರೂ 1245 ಅನ್ನು ಅದೇ ಸರಕಾರ ಸ್ಟೇಟ… ಬ್ಯಾಂಕು/ಪೋಸ್ಟಾಫೀಸುಗಳ  ಮೂಲಕ ನಡೆಸುವ ಪಬ್ಲಿಕ್‌ ಪ್ರಾವಿಡೆಂಡ್‌ ಫ‌ಂಡಿನಲ್ಲಿ ಅಥವ ಆರ್‌ಡಿ ಯಲ್ಲಿ ಹಾಕಬೇಕು. 

ಪ್ರತಿ ತಿಂಗಳು ರೂ. 1,245 ಅನ್ನು 35 ವರ್ಷಗಳ ಕಾಲ ಒಂದು ಪಿಪಿಎಫ್/ಆರ್‌ಡಿಯಲ್ಲಿ ಹಾಕಿದರೆ ಮತ್ತು ಅದಕ್ಕೆ ವಾರ್ಷಿಕ ಸರಾಸರಿ 8.5% ಬಡ್ಡಿ ಸಿಕ್ಕಿದರೆ ಅವಧಿಯ ಅಂತ್ಯಕ್ಕೆ ನಿಮ್ಮ ಕೈಯಲ್ಲಿ ರೂ. 30,31,501 ಇರುತ್ತದೆ. ಅದೇ ದುಡ್ಡನ್ನು  7% ಬಡ್ಡಿ ಬರುವ ಎಫ‌…ಡಿಯಲ್ಲಿ ಇಟ್ಟರೆ ನಿಮಗೆ ಪ್ರತಿ ತಿಂಗಳೂ ರೂ 17,683 ಬಡ್ಡಿ ಬರುತ್ತದೆ ಹಾಗೂ ಅಸಲು ಮೊತ್ತ ಸದಾ ನಿಮ್ಮದಾಗಿಯೇ ಇರುತ್ತದೆ. 

ಅದರ ಬದಲು ನಮ್ಮ ಸರಕಾರದ ಇಪಿಎಸ್‌ ಎಂಬ ಟೊಪ್ಪಿ ಸ್ಕೀಮಿಗೆ ದೇಣಿಗೆ ಕಟ್ಟುತ್ತಾ ಹೋದರೆ ನಿಮ್ಮ ಅಸಲು ಮೊತ್ತವನ್ನು ಸಂಪೂರ್ಣವಾಗಿ ನುಂಗಿಹಾಕುವುದಲ್ಲದೆ ನಿಮ್ಮ ಕೈಯಲ್ಲಿ ಪಿಂಚಣಿ ಹೆಸರಿನಲ್ಲಿ ಸಿಗುವ ಮಾಸಿಕ ಮೊತ್ತ ರೂ 7500 ಮಾತ್ರ. ನಿಮ್ಮ ಅಸಲು ಮೊತ್ತ ಹಿಂತಿರುಗಿ ಬಾರದಲ್ಲಿಗೆ ಹೋದದ್ದಲ್ಲದೆ ನಿಮ್ಮ ಕಿಸೆಗೆ ಬರುವ ಪಿಂಚಣಿ ಜುಜುಬಿ! ಉಳಿದ ಮೊತ್ತ ಅದೆಲ್ಲಿಗೆ ಹೋಗುತ್ತದೋ ಆ ದೇವನೇ ಬಲ್ಲ.  

ಜಯದೇವಪ್ರಸಾದ ಮೊಳೆಯಾರ

Advertisement

Udayavani is now on Telegram. Click here to join our channel and stay updated with the latest news.

Next