ಕಾರ್ತೀಕ ಮಾಸವು, ಹರಿಯು ಸಂಪ್ರೀತನಾದ ಕಾಲವೂ ಆಗಿರುವುದರಿಂದ ತುಳಸೀ ಪೂಜೆಯನ್ನೂ ಇದೇ ಮಾಸದಲ್ಲಿ ಮಾಡಲಾಗುತ್ತದೆ. ಒಳ್ಳೆಯ ಕಾಲದಲ್ಲಿ ಒಳ್ಳೆಯ ಕಾರ್ಯವನ್ನು ಮಾಡಿದರೆ ಅದರ ಫಲವು ಇನ್ನೂ ಒಳ್ಳೆಯದೇ ಆಗಿರುತ್ತದೆ ಎಂಬ ನಂಬಿಕೆ ಇದೆ.
ಕಾರ್ತಿಕ ಮಾಸವು ದ್ವಾದಶ ಮಾಸಗಳಲ್ಲಿಯೇ ಶ್ರೇಷ್ಠವಾದುದು. ಪುಣ್ಯಕರವಾದವುಗಳಿಗೆಲ್ಲವೂ ಪುಣ್ಯಕರವೂ, ಪಾವನಕರವಾಗಿರುವುದಕ್ಕೆಲ್ಲ ಪಾವನವೂ ಆಗಿರುವಂಥದ್ದು ಎಂಬುದು ಇದರ ಅರ್ಥ. ಹಿಂದೂ ಧರ್ಮದಲ್ಲಿ ಕಾಲವನ್ನು ಹನ್ನೆರಡು ಮಾಸಗಳಲ್ಲಿ ಮತ್ತು ಹನ್ನೆರಡು ತಿಂಗಳಲ್ಲಿ ಗುರುತಿಸಿರುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಚೈತ್ರದಿಂದ ಆರಂಭಗೊಂಡು ಎಂಟನೆಯ ಮಾಸವೇ ಕಾರ್ತಿಕ ಮಾಸ. ಈ ಮಾಸದ ಮೊದಲ ದಿನವೇ ದೀಪಾವಳಿ ಮತ್ತು ಎರಡನೆಯ ದಿನ ಗೋಪೂಜೆ. ತಿಂಗಳಾಂತ್ಯದವರೆಗೂ ಮನೆ-ಮಂದಿರಗಳಲ್ಲಿ ದೀಪೋತ್ಸವ, ಭಜನೆ, ಸಂಕೀರ್ತನೆಗಳು ನಡೆಯುವ ಸುಕಾಲ ಈ ಮಾಸ. ಹರಿಸ್ಮರಣೆ, ಇಂದ್ರಿಯನಿಗ್ರಹ, ಗುರುಸೇವೆ, ತುಳಸೀಪೂಜೆ, ದೀಪಾರಾಧನೆ, ಅನ್ನದಾನ, ಉಪವಾಸಾದಿ ವ್ರತಾಚರಣೆಗೆ ಕಾರ್ತಿಕಮಾಸವು ಪವಿತ್ರವಾದ ಕಾಲವೆಂದು ಧರ್ಮಗ್ರಂಥಳಲ್ಲಿ ಹೇಳಲಾಗಿದೆ.
ಕಾರ್ತಿಕ ಮಹಾತ್ಮ$Â ಮತ್ತು ನಾರದೀಯ ಪುರಾಣಗಳಲ್ಲಿ ಹೇಳಲ್ಪಟ್ಟ ರುಕಾ¾ಂಗದನ ಚರಿತ್ರೆ ಬಹಳ ಸ್ವಾರಸ್ಯದಿಂದ ಕೂಡಿದೆ. ಕಾರ್ತಿಕಮಾಸದಲ್ಲಿ ಏಕಾದಶೀ ವ್ರತವನ್ನು ಆಚರಿಸಿ ಹರಿಯ ಕೃಪೆಗೊಳಗಾದುದನ್ನು ಈ ಕಥೆ ಮಾರ್ಮಿಕವಾಗಿ ವಿವರಿಸುತ್ತದೆ. ರುಕಾ¾ಂಗದನ ಆಧಿಪತ್ಯದ ರಾಜ್ಯದಲ್ಲಿ ಪ್ರಜೆಗಳು ಈ ಏಕಾದಶಿ ವ್ರತವನ್ನು ಆಚರಿಸುವುದರಿಂದಾಗಿ ಎಲ್ಲರೂ ವಿಷ್ಣುಲೋಕವನ್ನೇ ಸೇರುತ್ತಿದ್ದರು. ಇದರಿಂದ ಯಮಲೋಕ ಮತ್ತು ದೇವಲೋಕವು ಖಾಲಿಯಾಗ ತೊಡಗಿತು. ದೇವತೆಗಳು ಬ್ರಹ್ಮನ ಬಳಿಯ ವಿಷಯವನ್ನು ಅರುಹಿದಾಗ, ಬ್ರಹ್ಮದೇವ ರುಕಾ¾ಂಗದನ ವ್ರತವನ್ನು ಕೆಡಿಸಲೆಂದು ಮೋಹಿನಿಯನ್ನು ಸೃಷ್ಟಿಮಾಡಿ ವಳಿಗೆ ಮಾಡಬೇಕಾದ ಕಾರ್ಯವನ್ನು ತಿಳಿಸಿದ. ರುಕಾ¾ಂಗದನನ್ನು ತನ್ನತ್ತ ಸೆಳೆದು ಆತ ತನ್ನ ಮಾತನ್ನು ಪಾಲಿಸುವುದಾದರೆ ಮಾತ್ರ ವರಿಸುವೆನೆಂದು ಹೇಳಿದಳು ಮೋಹಿನಿ. ನಂತರ ರುಕಾ¾ಂಗದನಿಂದ ಭಾಷೆ ಪಡೆದು ಮದುವೆಯಾಗುವುದಲ್ಲದೆ, ತನ್ನ ವ್ಯಾಮೋಹದಲ್ಲಿಯೇ ಆತ ಮುಳುಗಿರುವಂತೆ ಮಾಡಿ ವ್ರತವನ್ನು ಕಡೆಗಣಿಸುವಂತೆ ಮಾಡುವಲ್ಲಿ ಸಫಲಳಾಗುತ್ತಾಳೆ. ಆದರೆ, ರುಕಾ¾ಂಗದ ಕಾರ್ತೀಕ ಮಾಸದ ಏಕಾದಶಿಯ ದಿನ ಮಾತ್ರ ವ್ರತವಾಚರಿಸಲು ಅವಳಲ್ಲಿ ಕೇಳಿಕೊಂಡಾಗ ಅದಕ್ಕೊಪ್ಪದ ಮೋಹಿನಿ, ವ್ರತವನ್ನು ಕೆಡಿಸಲು ತನಗಿಂದು ದೇಹಸುಖವನ್ನು ಕೊಡುವಂತೆ ಹಟಮಾಡುತ್ತಾಳೆ. ರುಕಾ¾ಗಂದನು ಇದನ್ನು ತಿರಸ್ಕರಿಸಿದಾಗ, ಏಕಾದಶಿಯ ದಿನ ಭೋಜನವನ್ನು ಮಾಡಬೇಕು ಅಥವಾ ನಿನ್ನ ಮಗನ ತಲೆಯನ್ನು ಕತ್ತರಿಸಬೇಕು ಎಂದು ಭೀಕರವಾದ ಸವಾಲನ್ನೊಡ್ಡುತ್ತಾಳೆ. ಏಕಾದಶಿ ವ್ರತವನ್ನು ಮುರಿಯಲು ಸಿದ್ಧನಿರದ ರುಕಾ¾ಂಗದ, ಖಡ್ಗವನ್ನೆತ್ತಿ ಮಗನನ್ನು ಬಲಿಕೊಡಲು ಮುಂದಾಗುತ್ತಾನೆ. ಆಗ ಶ್ರೀಮನ್ನಾರಾಯಣನು ಪ್ರತ್ಯಕ್ಷನಾಗಿ, ನಾನು ನಿನ್ನ ಭಕ್ತಿಗೆ ಮೆಚ್ಚಿದ್ದೇನೆ, ನನ್ನ ಲೋಕಕ್ಕೆ ಬಾ ಎಂದು ಕರೆದೊಯ್ಯುತ್ತಾನೆ. ಮಡದಿ ಸಂಧ್ಯಾವಳಿಯೊಂದಿಗೆ ಸ್ವರ್ಗಪ್ರವೇಶ ಮಾಡಿದ ರುಕಾ¾ಂಗದ ಪರಮ ಭಾಗವೋತ್ತಮ ಎಂದು ಪ್ರಸಿದ್ಧನಾಗುತ್ತಾನೆ.
ಈ ಕಥೆಯು ಏಕಾದಶಿ ವ್ರತದ ಮಹಾತೆ¾ಯನ್ನು ಹೇಳುತ್ತದೆ. ಕಾರ್ತೀಕ ಮಾಸವು, ಹರಿಯು ಸಂಪ್ರೀತನಾದ ಕಾಲವೂ ಆಗಿರುವುದರಿಂದ ತುಳಸೀ ಪೂಜೆಯನ್ನೂ ಇದೇ ಮಾಸದಲ್ಲಿ ಮಾಡಲಾಗುತ್ತದೆ. ಒಳ್ಳೆಯ ಕಾಲದಲ್ಲಿ ಒಳ್ಳೆಯ ಕಾರ್ಯವನ್ನು ಮಾಡಿದರೆ ಅದರ ಫಲವು ಇನ್ನೂ ಒಳ್ಳೆಯದೇ ಆಗಿರುತ್ತದೆ ಎಂಬ ನಂಬಿಕೆ ಇದೆ. ಅಂತೆಯೇ, ಈ ಕಾರ್ತಿಕ ಮಾಸವು ಶ್ರೇಷ್ಠವಾಗಿರುವುದರಿಂದ ಈ ಸಮಯದಲ್ಲಿ ಮಾಡಿದ ಪುಣ್ಯಕಾರ್ಯಗಳು ಹೆಚ್ಚಿನ ಪುಣ್ಯಫಲಗಳನ್ನು ನೀಡುತ್ತವೆ. ಈ ಮಾಸದಲ್ಲಿ ನಡೆಯುವ ದೀಪೋತ್ಸವಗಳು ದೇವರನ್ನು ಆರಾಧಿಸುವ ಮಾರ್ಗವಾಗಿ ಕಂಡುಬಂದರೂ ನಮ್ಮ ಮನಸ್ಸನ್ನು ಲೌಕಿಕ ಚಿಂತೆಗಳಿಂದ ದೂರವಿರಿಸಿ, ಮನಸ್ಸಿಗೆ ಮುದ ನೀಡುತ್ತ ಚಿತ್ತಶಾಂತಿಗೆ ಕಾರಣವಾಗುತ್ತವೆ.
ವಿಷ್ಣು ಭಟ್ ಹೊಸ್ಮನೆ (ಭಾಸ್ವ)