Advertisement
ಶ್ರೀಮತಿಗೆ ವಿಚಿತ್ರವಾದ ಕಾಯಿಲೆಯಿಂದ ಬಳಲುವ ವರ್ತಮಾನ ಎದುರಾಗಿ, ಅಕ್ಷರಶಃ ಹಾಸಿಗೆವಾಸಿಯಾದಳು. ಯಕೃತ್ತಿನ ಚಟುವಟಿಕೆಯ ಸಮತೋಲನಕ್ಕಾಗಿ ಆಪರೇಷನ್ ಮಾಡಿಸಬೇಕಾಗಿ ಬಂತು. ಕೆಲಸಗಾರರಿಗೆ ಸಂಬಳ ಕೊಡುವುದಕ್ಕೂ ಪರದಾಟ ಪ್ರಾರಂಭವಾಗುತ್ತಲೇ ಹೋಯ್ತು. ವಾಣಿಜ್ಯ ಸಂಕೀರ್ಣದಲ್ಲಿನ ಬ್ಯೂಸಿನೆಸ್‌ಗಾಗಿನ ಸ್ಥಳದಲ್ಲಿ ತೊಂದರೆ ಇದೆಯೆ ಎಂದು ಉದ್ಯಮಿಗಳಿಗೆ ಯೋಚನೆ ಹತ್ತಿತ್ತು. ಜಾತಕ ಕುಂಡಲಿಯಲ್ಲಿ ತೊಂದರೆಗಳು ತಲೆ ದೋರಿರಬಹುದೆ ಎಂಬ ವಿಚಾರವೂ ಸುಳಿದು ಹೋಯ್ತು.
Related Articles
Advertisement
ಪೂರ್ವ ಭಾಗವು ಯಾವಾಗಲೂ ಕಾಂತೀಯ ಶಕ್ತಿಯ ದಕ್ಷಿಣೋತ್ತರಗಳ ನಡು ರೇಖೆಗೆ ಹೃದಯದ ಭಾಗವಾಗುವುದರಿಂದ ಅರ್ಥಪೂರ್ಣವಾಗಬೇಕಾದ ಚೈತನ್ಯಗಳು ಅಕ್ಷರಶಃ ಸೊರಗಲು ಪ್ರಾರಂಭಿಸುತ್ತವೆ. ಇಷ್ಟು ಸಾಕಾಗದು ಎಂಬಂತೆ ಟಾಯ್ಲೆಟ್ ಕೂಡ ಪೂರ್ವದಿಕ್ಕಿನ ಮೂಲೆಯಲ್ಲಿ ಸಂಯೋಜಿಸಲ್ಪಟ್ಟಿತ್ತು. ಪೂರ್ವ ಭಾಗದಲ್ಲಿ ಟಾಯ್ಲೆಟ್, ಮುಕ್ಕುಗೊಂಡ ಪೂರ್ವಭಾಗ ಇತ್ಯಾದಿ ಇತ್ಯಾದಿ ವಾಸ್ತು ಶಿಸ್ತಿಗೆ ಭಂಗ ತರುವ ಸರಕುಗಳು.
ಮುಕ್ಕಾಗಲ್ಪಟ್ಟ ಭಾಗ ವಿಸ್ತರಿಸಿಕೊಳ್ಳಲ್ಪಡುವುದು ಸೂಕ್ತವಾದ ಬದಲಾವಣೆಗೆ ಕಾರಣವಾಗಬೇಕಾದ ವಿಷಯವಾಗುತ್ತಿತ್ತು. ಆದರೆ ಹೀಗೆ ವಿಸ್ತರಣೆಗೆ ಒಳಪಡಿಸಲು ಸಾಧ್ಯವಾಗುವ ಸ್ಥಿತಿ, (ಮುಕ್ಕಾಗಲ್ಪಟ್ಟ ಭಾಗದಲ್ಲಿ ವಿಸ್ತರಿಸಲ್ಪಡುವ ಜಾಗ ತುಂಬಿಕೊಂಡರೆ ಚೈತನ್ಯಕ್ಕೆ ಸಿದ್ಧಿ ಆಗಬಹುದಿತ್ತೋ) ಆ ಜಾಗದಲ್ಲಿ ಬೇರು ಬಿಟ್ಟಿದ್ದ ಅನ್ಯ ವ್ಯಕ್ತಿಯು ಸ್ಥಳ ತೆರವು ಮಾಡಿದರೆ ಮಾತ್ರ ಸಾಧ್ಯವಾಗುವಂಥದ್ದಾಗುತ್ತಿತ್ತು.
ಆದರೆ ಆ ವ್ಯಕ್ತಿ ಅಷ್ಟು ಭಾಗವನ್ನು ತೆರವು ಮಾಡುಲ ಒಪ್ಪಿಕೊಳ್ಳಲೇ ಇಲ್ಲ. ಇದರಿಂದಾಗಿ ಆಯತಾಕಾರವನ್ನು ತನ್ನ ಕೆಲಸದ ವಹಿವಾಟಿನ ಪ್ಲಾಟ್‌ಗೆ ಒದಗಿಸಲು ಉದ್ಯಮಿಗಳಿಗೆ ಸಾಧ್ಯವಾಗಲೇ ಇಲ್ಲ. ಉಪಾಯವಿರದೆಯೇ ಈ ವಹಿವಾಟಿನ ಸ್ಥಳವನ್ನು ವಿಧಿ ಇರದೆ ತುಂಬಾ ಕಡಿಮೆ ಬೆಲೆಗೆ ಉದ್ಯಮಿಗಳು ಅನ್ಯರಿಗೆ ಒಪ್ಪಿಸಲು ಸಾಧ್ಯವಾಯ್ತು. ಅಲ್ಲೂ ನಷ್ಟವೇ ಆಯಿತು. ಆದರೆ ಆ ಸ್ಥಳದಲ್ಲಿ ಬಂದ ಯಾರೂ ಬ್ಯೂಸಿನೆಸ್‌ನಲ್ಲಿ ಮೇಲೇರಲು (ಆ ಸ್ಥಳದ ಮಿತಿಯೇ ಕಾರಣವಾಗಿ) ಸಾಧ್ಯವಾಗಲಿಲ್ಲ.
ಇದು ಒಂದು ಉದಾಹರಣೆಗೆ ಅಷ್ಟೇ. ಕೆಲ ವಿಶಿಷ್ಟ ಕಾರಣಗಳಿಂದಾಗಿ ಸೂಕ್ತವಲ್ಲದಿದ್ದರೂ, ಭಾರೀ ಲಾಭ ತರುವುದೇ ಇಲ್ಲ. ಹಾಗಾದರೆ ಏನೋ ತೊಂದರೆಗಳು, ಗಾಢವಾದ ಕಾರಣಗಳಂತೂ ಇರುತ್ತವೆ. ಆದರೆ ವಾಸ್ತುವಿನ ಕಾರಣಗಳು ನಿಗೂಢವಾಗಿವೆ. ವಾಸ್ತು ಶಿಸ್ತು ಇಂಥದ್ದನ್ನೇ ನಿರೀಕ್ಷಿಸುತ್ತದೆ. ಪೂರ್ವ, ಉತ್ತರ, ಈಶಾನ್ಯವನ್ನು ಅದು ಪ್ರಬಲವಾಗಿ ಅವಲಂಬನೆ ಮಾಡಿ ಎಂಬ ಸುಳಿವನ್ನು ನೀಡುತ್ತದೆ. ಇವೆಲ್ಲ ಮೂಢ ನಂಬಿಕೆಗಳು ಎಂದು ಹೇಳಲಾಗದ ಹಾಗೆ ವಾಸ್ತು ದೋಷ ಸರಿಪಡಿಸಿಕೊಂಡಾಗ ಲಾಭಕ್ಕೆ, ಹರ್ಷಕ್ಕೆ ಕಾರಣವಾಗು ಸೋಜಿಗ ಸಂಭವಿಸುತ್ತದೆ.
* ಅನಂತಶಾಸ್ತ್ರಿ