Advertisement

ಹೈದರಾಬಾದ್ ಎನ್ ಕೌಂಟರ್: ಟಾಲಿವುಡ್ ನಟ-ನಟಿಯರ ಪ್ರತಿಕ್ರಿಯೆ ಹೇಗಿತ್ತು ಗೊತ್ತಾ ?

10:07 AM Dec 07, 2019 | Mithun PG |

ಹೈದರಾಬಾದ್: ತೆಲಂಗಾಣದ ಪಶುವೈದ್ಯೆ ಅತ್ಯಾಚಾರ ಪ್ರಕರಣದ ನಾಲ್ವರು ಆರೋಪಿಗಳನ್ನು ಇಂದು ಎನ್ ಕೌಂಟರ್ ನಲ್ಲಿ ಹತ್ಯೆ ಮಾಡಲಾಗಿದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹಲವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದು ಸಂತ್ರಸ್ಥೆಗೆ ಇಂದು ನ್ಯಾಯ ದೊರಕಿದೆ ಎಂದು ತಿಳಿಸಿದ್ದಾರೆ. ಜೊತೆಗೆ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.

Advertisement

ಆರೋಪಿಗಳೂ ಎನ್ ಕೌಂಟರ್ ನಲ್ಲಿ ಹತ್ಯೆಯಾಗಿರುವುದಕ್ಕೆ ಟಾಲಿವುಡ್ ನ ನಟ ಹಾಗೂ ನಟಿಯರು ಸಂತಸ ವ್ಯಕ್ತಪಡಿಸಿದ್ದಾರೆ. ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಪ್ರತಿಕ್ರಿಯೆ ನೀಡುತ್ತಿದ್ದಾರೆ.

ಟ್ವೀಟ್ ಮಾಡಿರುವ ಜ್ಯೂನಿಯರ್ ಎನ್ ಟಿಆರ್, ಇಂದು ನ್ಯಾಯ  ದೊರಕಿತು. ನೌ ರೆಸ್ಟ್ ಇನ್ ಪೀಸ್ ದಿಶಾ ಎಂದು ಹೇಳಿದ್ದಾರೆ.

ಇದರಂತೆ ಅಲ್ಲು ಅರ್ಜುನ್ ಕೂಡ ಟ್ವೀಟ್ ಮಾಡಿದ್ದು, ನ್ಯಾಯ ದೊರಕಿತು ಎಂದು ತಿಳಿಸಿದ್ದಾರೆ.

Advertisement

ನಟಿ ಸಮಂತಾ ಅಕ್ಕಿನೇನಿ ಕೂಡ ಟ್ವೀಟ್ ಮಾಡಿದ್ದು ಐ ಲವ್ ತೆಲಂಗಾಣ ,ಭಯ ಎನ್ನುವುದು ಉತ್ತಮ ಪರಿಹಾರ ಮತ್ತು ಕೆಲವೊಮ್ಮೆ ಅದೇ ಪರಿಹಾರವಾಗುತ್ತದೆ ಎಂದು ಹೇಳಿದ್ದಾರೆ. ಈ ಟ್ವೀಟ್ ಅನ್ನು ಸಾವಿರಾರು ಮಂದಿ ರೀ ಟ್ವೀಟ್ ಮಾಡಿದ್ದಾರೆ.

ನಟಿ ಅನಸೂಯಾ ಭಾರದ್ವಾಜ್ ಟ್ವೀಟ್ ಮಾಡಿ, ತೆಲಂಗಾಣ ಪೊಲೀಸರ ಕುರಿತು ಹೆಮ್ಮೆಯಾಗುತ್ತಿದೆ. ತೆಲಂಗಾಣ ಪೊಲೀಸರು ಉದಾಹರಣೆಯಾಗಿದ್ದಾರೆ. ಅತ್ಯಾಚಾರಿಗಳಿಗೆ ಸಿಕ್ಕ ಶಿಕ್ಷೆಗೆ ಸಂತೋಷವಾಗಿದೆ ಎಂದಿದ್ದಾರೆ.

ನಟಿ ರಾಕುಲ್ ಪ್ರೀತ್ ಟ್ವೀಟ್ ಮಾಡಿ. ಅತ್ಯಾಚಾರದಂತಹ ಅಪರಾಧವೆಸಗಿ ಎಷ್ಟು ದೂರ ತಾನೆ ಓಡಲು ಸಾಧ್ಯ? ತೆಲಂಗಾಣ ಪೊಲೀಸರಿಗೆ ಧನ್ಯವಾದಗಳು ಎಂದು ಟ್ವೀಟ್ ಮಾಡಿದ್ದಾರೆ.

ನಟಿ ಹನ್ಸಿಕಾ ಮೋಟ್ವಾಣಿ ಟ್ವೀಟ್ ಮಾಡಿ, ನ್ಯಾಯ ದೊರಕಿದು ಎಂದಿದ್ದಾರೆ.

ದಾನೀಶ್ ಸೇಠ್ ಟ್ವೀಟ್ ಮಾಡಿ ಹೈದರಬಾದ್ ನಲ್ಲಿ ನಡೆದ ಈ ಎನ್ ಕೌಂಟರ್ ತೀಕ್ಷ್ಣವಾದ ಅಭಿಪ್ರಾಯಗಳನ್ನು ಹುಟ್ಟಿಸುತ್ತದೆ. ನಿಜಕ್ಕೂ ಬುಲೆಟ್ ಗಳು ದುಪ್ಪಟ್ಟು ಪರಿಣಾಮ ಬೀರುತ್ತದೆ ಎಂದುಕೊಂಡಿದ್ದೇನೆ. ಗನ್ನಿನ ಶಬ್ದ ನ್ಯಾಯಾಂಗ ವ್ಯವಸ್ಥೆಗೆ ಎಚ್ಚರಿಕೆಯ ಗಂಟೆಯಾಗಲಿದೆ ಎನ್ನುವ ವಿಶ್ವಾಸವಿದೆ ಎಂದಿದ್ದಾರೆ.

ಸ್ಯಾಂಡಲ್ವುಡ್ ನಟ ಜಗ್ಗೇಶ್ ಕೂಡ ಟ್ವೀಟ್ ಮಾಡಿದ್ದು ಅತ್ಯಾಚಾರ ಸಂತ್ರಸ್ಥೆಗೆ ನ್ಯಾಯ ದೊರಕಿತು. ಇಂದು ನನಗೆ ಸಮಾಧಾನವಾಯಿತು ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next