Advertisement

ಫೇಸ್‌ಬುಕ್‌ ಪಾವತಿಸುವ ದಂಡ ಎಷ್ಟು ಗೊತ್ತಾ…

10:05 AM Oct 18, 2019 | Team Udayavani |

ಇಂದು ಎಲ್ಲರ ಕೈಯಲ್ಲಿ ಸಾಮಾಜಿಕ ಜಾಲತಾಣಗಳು ಇದ್ದು, ಅವುಗಳಿಗೆ ಭಾರೀ ಲಾಭ ಎಂದು ನಾವು ಲೆಕ್ಕ ಹಾಕಿಕೊಳ್ಳುವಾಗಿಲ್ಲ. ಏಕೆಂದರೆ ಅವುಗಳು ತಪ್ಪು ಮಾಡಿದರೂ ಸಂಸ್ಥೆ ನಿರ್ಧಿಷ್ಟ ಮೊತ್ತವನ್ನು ದಂಡದ ರೂಪದಲ್ಲಿ ಪಾವತಿಸಬೇಕಾಗುತ್ತದೆ. ಇತ್ತೀಚೆಗೆ ಫೇಸ್‌ಬುಕ್‌ ಭಾರೀ ಪ್ರಮಾಣದಲ್ಲಿ ದಂಡ ಪಾವತಿ ಮಾಡುತ್ತಿದೆ. ಇದಕ್ಕೆ ತಾನು ಕಲ್ಪಿಸಿದ ತಪ್ಪುಗಳೇ ಕಾರಣ ಎಂದು ಹೇಳಲಾಗುತ್ತಿದೆ.

Advertisement

ದಂಡ ಎಷ್ಟು ಗೊತ್ತಾ

2019ರಲ್ಲಿ ಪೇಸ್‌ಬುಕ್‌ ಪಾವತಿ ಮಾಡಿದ ದಂಡವಾಗಿದೆ.ಫೇಸ್‌ಬುಕ್‌ ಈ ತನಕ 36, 672.6 ಕೋಟಿ ರೂಗಳನ್ನು ಕೇವಲ ದಂಡದ ರೂಪದಲ್ಲಿ ಪಾವತಿಸಿದೆ. ವಿವಿಧ ಸಂಸ್ಥೆಗಳು ಮತ್ತು ಸರಕಾರಗಳಿಗೆ ಫೇಸ್‌ಬುಕ್‌ ಪಾವತಿ ಮಾಡಿದೆ. ಇತ್ತೀಚೆಗೆ ಫೇಸ್‌ಬುಕ್‌ ಮೂಲಕ ಅತೀ ಹೆಚ್ಚು ಜಾಹೀರಾತುಗಳು ಬರುತ್ತಿದ್ದು, ಇದು ಆಯಾ ದೇಶದ ಕಾನೂನು ಅನ್ನು ಉಲ್ಲಂ ಸಿದೆ ಎಂದು ಹೇಳಿ ಹಲವು ನೋಟಿಸ್‌ಗಳನ್ನು ಫೇಸ್‌ಬುಕ್‌ ಸ್ವೀಕರಿಸಿದೆ. ಈ ಹಿಂದಿನ ವರ್ಷಗಳಿಗೆ ಹೋಲಿಸಿದರೆ 2019ರಲ್ಲಿ ಹೆಚ್ಚು ಮೊತ್ತವನ್ನು ದಂಡದ ರೂಪದಲ್ಲಿ ಪಾವತಿಸಲಾಗಿದೆ.

ಜನವರಿ

ಬ್ರಿಟಿಷ್‌ ಪತ್ರಕರ್ತ ಮಾರ್ಟಿನ್‌ ಲೂಯಿಸ್‌ ಅವರು 3.9 ಮಿಲಿಯನ್‌ ಡಾಲರ್‌ ಮೌಲ್ಯದ ಪ್ರಕರಣವೊಂದನ್ನು ದಾಖಲಿಸಿದ್ದರು. ಜಾಹೀರಾತು ಒಂದಕ್ಕೆ ಇವರ ಅನುಮತಿ ಇಲ್ಲದೇ ಪೋಸ್ಟ್‌ ಮಾಡಲಾಗಿತ್ತು ಇದಕ್ಕೆ ಸಂಬಂಧಿಸಿದಂತೆ ಲೂಯಿಸ್‌ ಕೋರ್ಟ್‌ ಮೆಟ್ಟಿಲೇರಿ 3.9 ಮಿಲಯನ್‌ ಮೌಲ್ಯದ ಪರಿಹಾರ ಗಿಟ್ಟಿಸಿಕೊಂಡಿದ್ದರು.

Advertisement

ಮಾರ್ಚ್‌

ಗೃಹ, ಉದ್ಯೋಗ ಮೊದಲಾದವುಗಳ ಮೂಲಕ ವಂಚಿಸುತ್ತಿದ್ದ ಜಾಹೀರಾತನ್ನು ಪ್ರಸಾರ ಮಾಡಿದ ಫೇಸ್‌ಬುಕ್‌ ಮೇಲೆ 5 ಮಿಲಿಯನ್‌ ಡಾಲರ್‌ ಮೌಲ್ಯದ ಮೊಕ್ಕದಮೆಯನ್ನು 5 ಕಾನೂನು ತಜ್ಞರು ದಾಖಲಿಸಿದ್ದರು. ಇದನ್ನು ಫೇಸ್‌ಬುಕ್‌ ಪಾವತಿಸಿತ್ತು.

ಎಪ್ರಿಲ್‌

ರಷ್ಯಾದ ಕೋರ್ಟ್‌ 47 ಡಾಲರ್‌ ಮೌಲ್ಯದ ಕೇಸನ್ನು ಫೇಸ್‌ಬುಕ್‌ ಮೇಲೆ ಹೇರಿತ್ತು. ಸಾಮಾಜಿಕ ಜಾಲತಾಣಗಳ ಮೂಲಕ ಸುಳ್ಳು ಪ್ರಚಾರ ನಡೆಸುತ್ತಿದ್ದ ಜಾಗಳನ್ನು ಪತ್ತೆ ಹಚ್ಚಿ ಅದಕ್ಕೆ ಅವಕಾಶ ಕಲ್ಪಿಸಿಕೊಟ್ಟ ಕಾರಣಕ್ಕೆ ಫೇಸ್‌ಬುಕ್‌ಗೆ ದಂಡ ವಿಧಿಸಲಾಗಿದೆ.

ಮೇ

ಟರ್ಕಿಯ ಡಾಟಾ ಪ್ರೊಟೆಕ್ಷನ್‌ ಅಥಾರಿಟಿ ಫೇಸ್‌ಬುಕ್‌ಗೆ ಸುಮಾರು 2.70 ಲಕ್ಷ ಡಾಲರ್‌ ದಂಡ ವಿಧಿಸಿತ್ತು. ಟರ್ಕಿಯ 66.80 ಲಕ್ಷ ಜನರ ಚಿತ್ರಗಳನ್ನು ತಾಂತ್ರಿಕ ಕಾರಣಕ್ಕೆ ಪ್ರಕಟವಾದ ಹಿನ್ನೆಲೆಯಲ್ಲಿ ಸಂಸ್ಥೆ ಈ ದುಬಾರಿ ದಂಡವನ್ನು ಪಾವತಿಸಿದೆ. ಸಂಸ್ಥೆ ಸಂಪೂರ್ಣ ದಂಡ ಪಾವತಿ ಮಾಡಿತ್ತು.

ಜೂನ್‌

ಇಟಲಿಯ ಡಾಟಾ ಪ್ರೊಟೆಕ್ಷನ್‌ ವಾಚ್‌ಡಾಗ್‌ 1.1ಮಿಲಿಯನ್‌ ಡಾಲರ್‌ ಮೌಲ್ಯದ ದಂಡವನ್ನು ವಿಧಿಸಿತ್ತು. ಕ್ಯಾಂಬ್ರಿಡ್ಜ್ ಆ್ಯನಾಲಿಟಿಕಾ ಹಗರಣದಲ್ಲಿ ತನ್ನ ಬಳಕೆದಾರರಿಂದ ಫೇಸ್‌ಬುಕ್‌ ಮಾಹಿತಿ ಕದ್ದಾಳಿಸಿದೆ ಎಂದು ಇಟಲಿ ಆರೋಪಿಸಿತ್ತು. ಆದರೆ à ಆರೋಪವನ್ನು ಫೇಸ್‌ಬುಕ್‌ ಅಲ್ಲಗೆಳೆದಿತ್ತು. ಅಂತಿಮವಾಗಿ ಸಂಸ್ಥೆ 7.82 ಕೋಟಿ ರೂ.ಗಳನ್ನು ಪಾವತಿಸಲೇ ಬೇಕಾಗಿಬಂತು.

ಜುಲೈನಲ್ಲಿ ಹಲವು ಪ್ರಕರಣ

ಜರ್ಮನ್‌ ರೆಗ್ಯುಲೇಟರ್‌ 2.3 ಮಿಲಿಯನ್‌ ಡಾಲರ್‌ ರೂ.ಗಳನ್ನು ದ್ವೇಷದ ಭಾಷಣಗಳನ್ನು ಪ್ರಸಾರ ಮಾಡಿದ ಕಾರಣ ಪ್ರಕರಣ ದಾಖಲಿಸಲಾಗಿತ್ತು. ಇದನ್ನು ಫೇಸ್‌ಬುಕ್‌ ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದರೂ ತನ್ನ ಪಾಲಿನ 2.3 ಮಿಲಿಯನ್‌ ಡಾಲರ್‌ಗಳನ್ನು ಪಾವತಿಸಬೇಕಾಗಿತ್ತು.

ಮತ್ತೂಂದು 2018ರ ಕ್ಯಾಂಬ್ರಿಡ್ಜ್ ಅನಾಲಿಟಿಕಾ ಹಗರಣದಲ್ಲಿ ಫೇಸ್‌ಬುಕ್‌ ಮೇಲೆ ಆರೋಪಗಳು ಕೇಳಿ ಬಂದಿತ್ತು. ಅದನ್ನು ಫೇಸ್‌ಬುಕ್‌ ಅಲ್ಲಗೆಳೆಯಲು ವಿಫ‌ಲವಾಗಿತ್ತು. ಇದಕ್ಕಾಗಿ 5 ಬಿಲಿಯನ್‌ ಡಾಲರ್‌ ದಂಡ ಪಾವತಿಸಿತ್ತು. ಇದು ಫೆಡರಲ್‌ ಟ್ರೇಡ್‌ ಕಮಿಷನ್‌ ವಿಧಿಸಿದ ದಂಡವಾಗಿದ್ದು, ಅತೀ ದೊಡ್ಡ ಪ್ರಮಾಣದ ದಂಡವೂ ಹೌದು.

ಸೆಕ್ಯುರಿಟೀಸ್‌ ಮತ್ತು ಎಕ್ಸಚೇಂಜ್‌ ಕಮಿಷನ್‌ 100 ಮಿಲಿಯನ್‌ ಡಾಲರ್‌ ದಂಡ ವಿಧಿಸಿತ್ತು. ಜನರಿಗೆ ತಪ್ಪು ಮಾಹಿತಿ ನೀಡಲಾದ ಆರೋಪದಲ್ಲಿ ದಂಡ ಪಾವತಿಸಿತ್ತು.

ಫ್ರಾನ್ಸಿಸ್ಕೋದ  ಸುಪೀರಿಯರ್‌ ಕೋರ್ಟ್‌ ಜಡ್ಜ್ ಫೇಸ್‌ಬುಕ್‌ ಮತ್ತು ಟ್ವೀಟರ್‌ಗೆ ತಲಾ 1,00 ಡಾಲರ್‌ ದಂಡ ವಿಧಿಸಿತ್ತು. ದೇಶದ ಭದ್ರತೆ ಸಂಬಂಧಿಸಿದ ಮಾಹಿತಿಗಾಗಿ ವಿಧಿಸಲಾದ ದಂಡವಾಗಿದೆ.

ಅಕ್ಟೋಬರ್‌

ಬಳಕೆದಾರರ ಖಾಸಗಿ ಮಾಹಿತಿಯನ್ನು ಬಹಿರಂಗಗೊಳಿಸಿದ ಕಾರಣ ಟರ್ಕಿ ಫೇಸ್‌ಬುಕ್‌ನಿಂದ 2.80 ಲಕ್ಷ ಡಾಲರ್‌ ಮೌಲ್ಯದ ದಂಡವನ್ನು ಅಪೇಕ್ಷಿಸಿತ್ತು. ಫೇಸ್‌ಬುಕ್‌ ಹೋರಾಟದ ಹೊರತಾಗಿಯೂ ಒಂದೇ ಒಂದು ರೂಪಾಯಿ ಮೌಲ್ಯ ದಂಡದಲ್ಲಿ ಇಳಿಕೆಯಾಗದೇ ಪಾವತಿಸಿತ್ತು.

ಜಾಹೀರಾತು ಸಂಸ್ಥೆಯೊಂದು 40 ಮಿಲಿಯನ್‌ ಡಾಲರ್‌ ಮೌಲ್ಯದ ದಂಡವನ್ನು ಫೇಸ್‌ಬುಕ್‌ ಮೇಲೆ ಹೇರಿತ್ತು. ಅದನ್ನು ಪಾವತಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next