Advertisement
ಈಗ ಮುತ್ತಿನ ಕೃಷಿ ಎಂಬ ಹೆಸರಿನಲ್ಲಿ ಮನುಷ್ಯನೇ ಚಿಪ್ಪಿನ ಮಾಂಸಕ್ಕೆ ಮರಳು ಸೇರಿಸಿ ಮುತ್ತನ್ನು ಪಡೆಯುತ್ತಾನೆ. ಇಂತಹದ್ದೇ ಇನ್ನೊಂದು ವಿಸ್ಮಯಕಾರಿ ವಸ್ತುವಿದೆ; ಅದೇ ಅಂಬರ್ ಗ್ರೀಸ್ ಅಥವಾ ತಿಮಿಂಗಿಲದ ವಾಂತಿ. ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಅಪರೂಪದ ಅಂಬರ್ ಗ್ರೀಸ್ ರೂಪುಗೊಳ್ಳುವುದರ ಹಿಂದೆ ಮುತ್ತಿನಷ್ಟೇ ರೋಚಕ ಕಥೆಯಿದೆ. ಅಂಬರ್ ಗ್ರೀಸ್ನ ಬಗೆಗೆ ಮಾನವನ ಸ್ವಾರ್ಥದ ನಡೆ ನೋಡಿದಾಗ ಅಂಬರ್ ಗ್ರೀಸ್ನ ಹಿಂದೆ ವ್ಯಥೆಯೂ ಇದೆ ಅನ್ನಿಸದಿರದು. ಹಾಗಾದರೆ ಅಂಬರ್ ಗ್ರೀಸ್ ಅಥವಾ ತಿಮಿಂಗಿಲದ ವಾಂತಿ ಅಂದರೇನು? ಸಮುದ್ರಕ್ಕೂ ಇದಕ್ಕೂ ಏನಾದರೂ ಸಂಬಂಧ ಇದೆಯೇ? ಮನುಷ್ಯ ಏತಕ್ಕಾಗಿ ಅಂಬರ್ ಗ್ರೀಸ್ನ ಹಿಂದೆ ಬಿದ್ದು ಕಂಬಿ ಎಣಿಸುತ್ತಿದ್ದಾನೆ ಎಂಬುದನ್ನು ತಿಳಿಯೋಣ.
Related Articles
Advertisement
ತಿಮಿಂಗಿಲಕ್ಕೆ ಬೇಡದ ವಸ್ತುವೊಂದು ದೇಹದೊಳಗಿಂದ ಹೊರಹೋದರೆ ಸಾಕೆಂದು ಬಿಡುತ್ತದೆ. ವಿಜ್ಞಾನಿಗಳ ಪ್ರಕಾರ ಹೀಗೆ ಸಂಗ್ರಹವಾದ ಅಂಬರ್ ಗ್ರೀಸ್ ತಿಮಿಂಗಿಲದ ಮರಣದೊಂದಿಗೆ ಹೊರ ಬರುತ್ತದೆ ಎಂದು. ಇನ್ನು ಕೆಲವು ವಿಜ್ಞಾನಿಗಳು ಹೇಳುವ ಪ್ರಕಾರ ದೇಹದ ನಿರಂತರ ಹೊರತಳ್ಳುವಿಕೆಯ ಪರಿಣಾ ಮವಾಗಿ, ತಿಮಿಂಗಿಲದ ಬಾಯಿಯ ಮೂಲಕ ಅದು ಸಮು ದ್ರಕ್ಕೆ ವಿಸರ್ಜಿಸಲ್ಪಡುತ್ತದೆ ಎಂದು ಹೇಳುತ್ತಾರೆ.
ತಿಮಿಂಗಿಲಕ್ಕೆ ಬೇಡವಾದ, ಅಜೀರ್ಣವಾದ ಆ ವಸ್ತು ಯಾವಾಗ ಅದರ ದೇಹದಿಂದ ಹೊರ ಹಾಕಲ್ಪಡುತ್ತದೋ, ಆಗ ಅದು ಮನುಷ್ಯನಿಗೆ ಬೇಕಾದ ವಸ್ತುವಾಗಿ ಬಿಡುತ್ತದೆ. ಲಾಭವಿದೆ ಯೆಂದರೆ ವಾಂತಿಯಾದರೇನು? ಮಲವಾದರೇನು? ಮನುಷ್ಯನಿಗೆ ಯಾವ ಹೇಸಿಗೆಯೂ ಇರದು. ಆಳ ಸಮು ದ್ರದಲ್ಲಿ ಮೀನುಗಾರಿಕೆ ಮಾಡುವಾಗ ಒಮ್ಮೊಮ್ಮೆ ಅದು ಸಿಗುತ್ತದೆ. ಭಾರತದಲ್ಲಿ ಸ್ಟರ್ಮ್ ವೇಲ್ ಸಂರಕ್ಷಿತ ಜಲಚರವಾದ ಕಾರಣ, ಅದರಿಂದ ಸಿಗುವ ಈ ಉತ್ಪನ್ನವನ್ನು ಸರಕಾರಕ್ಕೆ ಒಪ್ಪಿಸಬೇಕು. ಆದರೆ ಮನುಷ್ಯ ಆಸೆಬುರುಕ. ಸಿಕ್ಕ ಕೂಡಲೆ, ಆತನ ತಲೆಯಲ್ಲಿ ಓಡುವ ಯೋಚನೆಯೊಂದೇ; ತಾನು ಅದನ್ನು ಮಾರಿ ಹೇಗೆ ಕೋಟ್ಯಧೀಶನಾಗಬೇಕು ಎಂದು.
ಇತ್ತೀಚೆಗೆ ಬೆಂಗಳೂರು, ಮಂಗಳೂರುಗಳಲ್ಲಿ ಎರಡು ಪ್ರತ್ಯೇಕ ಘಟನೆಗಳಲ್ಲಿ ನೂರು ಕೋ.ರೂ. ಬೆಲೆಯ ಅಂಬರ್ ಗ್ರೀಸನ್ನು ವಶಪಡಿಸಿಕೊಂಡಿ¨ªಾರೆ. ಚಿಕ್ಕಮಗಳೂರಿನ ಬೀರೂರು, ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಬಳ್ಳಾರಿ ಜಿಲ್ಲೆಗಳಲ್ಲೂ ಇದರ ಕಳ್ಳಸಾ ಗಾಣಿಕೆ ಮಾಡುವವರನ್ನು ಪೊಲೀಸರು ಹಿಡಿದು ಹೆಡೆಮುರಿ ಕಟ್ಟಿದ್ದು ಶ್ಲಾಘನೀಯ. ಒಂದು ಕೆ.ಜಿ. ತೂಗುವ ಅಂಬರ್ ಗ್ರೀಸ್, ಹತ್ತಿರ ಹತ್ತಿರ ಒಂದು ಕೋಟಿ ರೂಪಾಯಿಗೆ ಬಿಕರಿ ಯಾಗುತ್ತದೆ. ತತ್ಕ್ಷಣ ಶ್ರೀಮಂತರಾಗುವ ಆಸೆಯಿಂದ ಮನುಷ್ಯ ತಿಮಿಂಗಿಲದ ವಾಂತಿಯ ಸಂಗ್ರಹದಲ್ಲಿ ತೊಡ ಗಿದ್ದಾನೆ. ವರ್ಷದ ಹಿಂದೆ ಮುರುಡೇಶ್ವರದಲ್ಲಿ ಜನಾರ್ದನ ಹರಿಕಾಂತ ಅವರಿಗೆ ಇಪ್ಪತ್ತೆçದು ಲಕ್ಷ ರೂಪಾಯಿ ಬೆಲೆಬಾಳುವ 250 ಗ್ರಾಂ ತೂಕದ ಅಂಬರ್ ಗ್ರೀಸ್ ಸಿಕ್ಕಿತ್ತು. ಅವರು ಅದನ್ನು ಅರಣ್ಯಾಧಿಕಾರಿಗಳಿಗೆ ಹಸ್ತಾಂತರಿಸಿ ಪ್ರಾಮಾಣಿಕತೆ ಮೆರೆದರು. ಇಂತಹ ಗುಣಗಳು ಎಷ್ಟು ಜನರಲ್ಲಿ ಕಾಣಸಿಗುತ್ತದೆ ನೀವೇ ಹೇಳಿ.
ಮೊನ್ನೆ ಮೊನ್ನೆ ಕುಂದಾಪುರದ ಕೋಡಿಯ ಕಡಲ ತೀರದಲ್ಲಿ ಅರಣ್ಯ ಸಂಚಾರಿ ದಳದ ತಂಡ ಮಾರುವೇಷದಲ್ಲಿ ಬಂದು ಅಂಬರ್ ಗ್ರೀಸ್ ವಶಪಡಿಸಿಕೊಳ್ಳಲು ದಾಳಿ ನಡೆಸಿದರು. 10ಕೆ.ಜಿ. ಯಷ್ಟು ಅಂಬರ್ ಗ್ರೀಸ್ ಇರುವ ಶಂಕೆಯಿಂದ ನಡೆದ ದಾಳಿಯ ಸಂದರ್ಭದಲ್ಲಿ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿ ತಂಡ ಪರಾರಿಯಾಗಿತ್ತು. ಅವರಲ್ಲಿ ತಿಮಿಂಗಿಲದ ವಾಂತಿ ಇದೆಯೇ ಇಲ್ಲವೇ ಎಂಬುದು ಸದ್ಯ ತನಿಖೆಯಿಂದಷ್ಟೇ ಬಯಲಾಗಬೇಕಿದೆ.
ಮುಂದೊಂದು ದಿನ ಹಣದ ಆಸೆಗೆ ಇನ್ನೊಂದಿಷ್ಟು ಅಡ್ಡ ದಾರಿ ಹಿಡಿದು ಜಲಚರಗಳ ನಾಶಕ್ಕೆ ಕಾರಣನಾಗಬಹುದು ಎಂಬ ಉದ್ದೇಶದಿಂದ ಸರಕಾರವೂ ಇದನ್ನು ಸಾಗಿಸುವವರ ಮೇಲೆ ಹದ್ದಿನ ಕಣ್ಣಿರಿಸಿದೆ. ಸ್ಪರ್ಮ್ ತಿಮಿಂಗಿಲದ ದೇಹದಲ್ಲಿ ಅಂಬರ್ ಗ್ರೀಸ್ ಇರಬಹುದೆಂದು ಅಂದಾಜಿಸಿ, ಅದನ್ನು ಬೇಟೆಯಾಡುವವರೂ ಇದ್ದಾರೆ. ಮೊದಲೇ ತಿಮಿಂಗಿಲಗಳು ಅವನತಿಯ ಹಂತವನ್ನು ತಲುಪಿವೆ; ಅದರ ಜತೆಯಲ್ಲಿ ಮನು ಷ್ಯನೂ ಅವುಗಳ ನಾಶಕ್ಕೆ ನಿಂತುಕೊಂಡರೆ ಜಲಪರಿಸರದ ವಿಶೇಷ ಪ್ರಭೇದದ ಜೀವಿಯೊಂದು ಕಣ್ಮರೆಯಾ ಗಬಹು ದೆಂದು ಹೆಚ್ಚಿನ ದೇಶಗಳಲ್ಲಿ ಇವುಗಳ ಬೇಟೆಯನ್ನು ನಿಷೇಧಿ ಸಿದೆ. ಕರ್ನಾಟಕ, ಕೇರಳ, ಮಹಾರಾಷ್ಟ್ರ, ಗುಜರಾತ್ಗಳಲ್ಲಿ ಇದರ ಕಳ್ಳಸಾಗಾಣಿಕೆ ದಿನೇದಿನೆ ಹೆಚ್ಚಾಗುತ್ತಿದೆ. ಪರಿಣಾ ಮವಾಗಿ ಇದುವರೆಗೆ ನೂರಾರು ಮಂದಿ ಬಂಧಿಯಾಗಿದ್ದಾರೆ.
ಅಂಬರ್ ಗ್ರೀಸ್ ಯಾಕಿಷ್ಟು ಬೆಲೆಬಾಳುತ್ತದೆ ಎಂದು ನಿಮಗೆ ಅನ್ನಿಸಬಹುದು. ಇದು ವಿಶೇಷ ಪರಿಮಳ ಸೂಸುವ ವಸ್ತುವಾದ ಕಾರಣ ಇದನ್ನು ಸುಗಂಧದೆಣ್ಣೆ, ಅತ್ತರಿನ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ. ಇದರಿಂದ ತಯಾರಿಸಿದ ಸುಗಂಧದ್ರವ್ಯ ಶ್ರೀಮಂತರನ್ನು ಹೆಚ್ಚು ಆಕರ್ಷಿಸುತ್ತದೆ. ಇದಲ್ಲದೆ ಕೆಲವು ಔಷಧಿಯ ತಯಾರಿಕೆಯಲ್ಲೂ; ಅಗರಬತ್ತಿ ತಯಾರಿಕೆಯಲ್ಲೂ ಇದನ್ನು ಬಳಸುತ್ತಾರೆ.
ಪ್ರಕೃತಿಯಲ್ಲಿ ಏನೇ ಸಿಕ್ಕರು ಮನುಷ್ಯರಿಗೆ ಉಪಯೋಗಕ್ಕೆ ಬರುತ್ತದೆ. ಆದರೆ ಮನುಷ್ಯ ತನ್ನ ಪಾಲಿಗೆ ಬಂದುದರಲ್ಲಿಯೇ ಸಂತೋಷ ಪಡುವುದಿಲ್ಲ. ಚಿನ್ನದ ಮೊಟ್ಟೆಯಿಡುವ ಕೋಳಿ ಯೆಂದು, ಒಂದೇ ಬಾರಿ ಕೊಯ್ದು ತಿನ್ನುವ ಆಸೆಬುರುಕನಂತೆ ಮನುಷ್ಯ ವರ್ತಿಸುತ್ತಾನೆ. ಕೊನೆಗೆ ತಾನೇ ಹೆಣೆದ ಬಲೆಯಲ್ಲಿ ತಾನೇ ಬಿದ್ದು ವಿಲವಿಲನೇ ಒದ್ದಾಡುತ್ತಾನೆ. ಸಮುದ್ರವೆಂಬ ಪರಿಸರ ಚಕ್ರದಲ್ಲಿ ತಿಮಿಂಗಿಲದ ಪಾತ್ರ ಅತ್ಯಂತ ಮಹತ್ವದ್ದು ಎಂದು ಅರಿತಿದ್ದರೂ ಅವುಗಳ ನಾಶಕ್ಕೆ ಟೊಂಕ ಕಟ್ಟಿ ನಿಂತಿದ್ದಾನೆಂದರೆ ಆತನ ಅಜ್ಞಾನಕ್ಕೆ ಏನೆನ್ನಬೇಕು. ತಿಮಿಂಗಿಲಗಳು ನಾಶವಾದದಂತೆ ಮತ್ಸé ಕ್ಷಾಮದ ಜತೆಜತೆಗೆ ಮನುಷ್ಯನ ವಿನಾಶ ಎಂಬುದನ್ನು ಇನ್ನಾದರೂ ನಾವು ಅರಿಯಲೇಬೇಕು.
ನಾಗರಾಜ ಖಾರ್ವಿ, ಕಂಚುಗೋಡು