Advertisement

ಬ್ಲಾಕ್‌ ಹೋಲ್‌ ಬಗ್ಗೆ ನಿಮಗೆ ಗೊತ್ತಾ?

09:30 AM Aug 09, 2019 | mahesh |

ಕೆ.ಟಿ ಬೋಮನ್‌ ಎಂಬ ಕಂಪ್ಯೂಟರ್‌ ವಿಜ್ಞಾನಿ ಅಲ್ಗಾರಿದಮ್‌ (ಕ್ರಮಾವಳಿ) ರಚಿಸಿದ್ದಾಳೆ.
ಅದು ವಿಶ್ವದಲ್ಲೇ ಪ್ರಪ್ರಥಮ ಬಾರಿಗೆ ಕಪ್ಪು ಕುಳಿಯ( ಬ್ಲಾಕ್‌ ಹೋಲ್‌) ಚಿತ್ರವನ್ನು ಸೃಷ್ಟಿ ಮಾಡಿದೆ. ಹೀಗಾಗಿ, ಈಕೆ ವಿಶ್ವದಾದ್ಯಂತ ಶ್ಲಾಘನೆಗೆ ಪಾತ್ರರಾಗಿದ್ದಾರೆ. ಇದರಿಂದಾಗಿ ಭೂಮಿಯಿಂದ ಸುಮಾರು 500 ಟ್ರಿಲಿಯನ್‌ ಕಿಲೋಮೀಟರ್‌ ದೂರದಲ್ಲಿರುವ ಧೂಳಿನ ಗೋಳ ಮತ್ತು ಅನಿಲಗಳನ್ನೂ ಸ್ಪಷ್ಟವಾಗಿ ಕಾಣಬಹುದಾದ ಫೋಟೋ ಬಿಡುಗಡೆಯಾಗಿದೆ. ಅಸಾಧ್ಯವೆಂದು ಭಾವಿಸಿದ್ದ ಈ ಸಂಶೋಧನೆ ಸಾಧ್ಯವಾಗಿರುವುದು ಡಾ.ಬೋಮನ್‌ರ ಅಗಾಧ ಸಾಧನೆಯ ಪ್ರತಿಫ‌ಲ. ಆಕೆ, ಫೇಸ್ಬುಕ್‌ನಲ್ಲಿ ತಾವು ಕಂಡುಹಿಡಿದ ಕಪ್ಪು ಕುಳಿಯ ಚಿತ್ರವನ್ನು ಅಪಲೋಡ್‌ ಮಾಡಿದ್ದಾರೆ. ಜೊತೆಗೆ, ಈ ಬ್ಲಾಕ್‌ ಹೋಲ್‌ ಪುನರ್‌ನಿರ್ಮಾಣದ ಹಂತದಲ್ಲಿದೆ. ಇದನ್ನು ನಾನೇ ಕಂಡುಹಿಡಿದೆನೇಯೇ ಎಂಬುದನ್ನು ನಂಬಲಾಗುತ್ತಿಲ್ಲ- ಹೀಗಂತ ಉದ್ಗರಿಸಿದ್ದಾರೆ..

Advertisement

ಕಪ್ಪುಕುಳಿಯ ಬಗ್ಗೆ ನಿಮಗೆಷ್ಟು ಗೊತ್ತು!?
ಕಪ್ಪು ಕುಳಿಯನ್ನು ಬರಿಗಣ್ಣಿನಿಂದ ನೋಡಲು ಸಾಧ್ಯವಿಲ್ಲ. ಅದು 40 ಶತಕೋಟಿ ಕಿ.ಮೀ ದೂರದಲ್ಲಿದ್ದು ಭೂಮಿಯ ಮೂರು ಮಿಲಿಯನ್‌ ಪಟ್ಟು ಬೃಹತ್‌ ಗಾತ್ರದ್ದಾಗಿದೆಯಂತೆ. ಮೆಸ್ಸಿರ್ಯ 87 ಗ್ಯಾಲಕ್ಸಿಯಲ್ಲಿ 10 ದಿನಗಳ ಕಾಲ ಇದನ್ನು ಸ್ಕ್ಯಾನ್‌ ಮಾಡಿದ್ದಾರೆ ಎಂದರೆ ಗಾತ್ರ ಎಷ್ಟಿರಬಹುದು ಊಹಿಸಿ. ಇದು ನಮ್ಮ ಸೌರಮಂಡಲದ ಗಾತ್ರಕ್ಕಿಂತಲೂ ದೊಡ್ಡದಾಗಿದೆ ಎಂದು ನೆದರ್‌ಲ್ಯಾಂಡ್‌ನ‌ ಪ್ರೊಫೆಸರ್‌ ಹೆನೊ ಫಾಲ್ಕೆ ಹೇಳುತ್ತಾರೆ.

ರಚಿಸಿದ್ದಾದರೂ ಹೇಗೆ?-
ಡಾ. ಬೋಮನ್‌ ಮತ್ತು ತಂಡ ಕ್ರಮಾವಳಿಗಳ ಸರಣಿಯನ್ನು ರಚಿಸಿದರು. ಇದು ದೂರದರ್ಶಕದ ಡೇಟಾವನ್ನು ಐತಿಹಾಸಿಕ ಫೋಟೋ ಆಗಿ ಪರಿವರ್ತಿಸಿತು. ಈಗ ಇದೇ ಚಿತ್ರ ಮಾಧ್ಯಮ ಪೂರ ಹರಿದಾಡುತ್ತಿದೆ. ಕಂಪ್ಯೂಟರ್‌ ಸೈನ್ಸ್‌ ಹಾಗೂ ಗಣಿತಶಾಸ್ತ್ರದಲ್ಲಿ, ಅಲ್ಗಾರಿದಮ…( ಕ್ರಮಾವಳಿ) ಅಂದರೆ ಸಮಸ್ಯೆಯ ಪರಿಹಾರಕ್ಕಾಗಿ ಬಳಸಲಾಗುವ ನಿಯಮಗಳ ಪ್ರಕ್ರಿಯೆ ಅಥವಾ ಜೋಡಣೆ ಎಂದರ್ಥ. ಕಪ್ಪು ರಂಧ್ರವನ್ನು ಸೆರೆಹಿಡಿಯಲು ಒಂದೇ ಒಂದು ದೂರದರ್ಶಕದಿಂದ ಸಾಧ್ಯವಿಲ್ಲ, ಆದ್ದರಿಂದ ಎಂಟು ನೆಟ್ ರ್ಕ್‌ ಜಾಲದ ಟೆಲಿಸ್ಕೋಪ್‌ ಬಳಸಲಾಗಿತ್ತು. ಅದನ್ನು ಇಂಟಫೊìಮೆಟ್ರಿ ಎಂದು ಕರೆಯುತ್ತಾರೆ…
ಅವರು ಸೆರೆಹಿಡಿಯಲಾಗಿದ್ದ ದತ್ತಾಂಶ(data)ವು ನೂರಾರು ಹಾರ್ಡ್‌ ಡ್ರೈವ್‌ಗಳಲ್ಲಿ ಸಂಗ್ರಹಗೊಂಡಿದೆ. ನಂತರ, ಬೋಸ್ಟನ್‌, ಯುಎಸ್‌ ಮತ್ತು ಬಾನ್‌, ಜರ್ಮನಿಯ ಕೇಂದ್ರಿಯ ಸಂಸ್ಕರಣೆ ಕೇಂದ್ರಗಳಿಗೆ ರವಾನೆಯಾಯಿತು. ಕ್ರಮಾವಳಿಗಳ ಫ‌ಲಿತಾಂಶಗಳನ್ನು ನಾಲ್ಕು ಶೋಧ ತಂಡಗಳು ನೈಜತೆಯ ವಿಶ್ಲೇಷಣೆಗೊಳಪಡಿಸಿದವು.

ಕೆ.ಟಿ ಬೋಮನ್‌ ಯಾರು?
ಮ್ಯಾಸಚೂಸೆಟ್ಸ್‌ ಇನ್ಸಿಟಿಟ್ಯೂಟ್‌ ಆಫ್ ಟೆಕ್ನಾಲಜಿಯಲ್ಲಿ (ಎಂಐಟಿ) ಪದವೀಧರೆ. ವಿದ್ಯಾರ್ಥಿಯಾಗಿದ್ದಾಗಲೇ ಮೂರು ವರ್ಷಗಳ ಕಾಲ ಅಲ್ಗಾರಿದೆಮ್‌ ಮಾಡುವುದರಲ್ಲಿ ನಿರತರಾಗಿದ್ದರು. MIT ಕಂಪ್ಯೂಟರ್‌ ವಿಜ್ಞಾನ ಮತ್ತು ಕೃತಕ ಬುದ್ಧಿಮತ್ತೆಯ ಪ್ರಯೋಗಾಲಯ ಸಹಯೋಗದಿಂದ ಹಾರ್ವರ್ಡ್‌-ಸ್ಮಿತ್ಸೋನಿಯನ್‌ ಸೆಂಟರ್‌ ಫಾರ್‌ ಆಸ್ಟ್ರೋಫಿಸಿಕ್ಸ್‌
ಮತ್ತು MIT ಹೇಸ್ಟಾಕ್‌ ಅಬ್ಸರ್ವೇಟರಿಯಲ್ಲಿ ನಡೆಸಿದ ಪ್ರಾಜೆಕ್ಟ್ ಟೀಮ್‌ನ ನಾಯಕತ್ವ ಇವರದೆ.
ಅಂತಿಮವಾಗಿ, ಎಂಟು ಸಂಪರ್ಕ್‌ ಟೆಲಿಸ್ಕೋಪ್‌ಗ್ಳ ನೆಟ್ ರ್ಕ್‌ ( ಈವೆಂಟ್‌ ಹಾರಿಝೊನ್‌ ಟೆಲಿಸ್ಕೋಪ್‌) ನಿಂದ ಸೆರೆಹಿಡಿಯಲಾದ ಬ್ಲಾಕ್‌ ಹೋಲ್‌ನ ಚಿತ್ರವನ್ನು ಕೆ.ಟಿ ಬೋಮ್‌ ಪ್ರದರ್ಶಿಸಿದರು. ಬಿಬಿಸಿ ರೇಡಿಯೋ ಸಂದರ್ಶನದಲ್ಲಿ ಅವರು ಮಾತನಾಡುತ್ತಾ “ನಾವು ಅದನ್ನು ಮೊದಲ ಬಾರಿಗೆ ನೋಡಿದಾಗ, ನಮಗೆ ಅದು ನಂಬಲಸಾದ್ಯವಾಗಿತ್ತು..ಅದ್ಬುತ..! ಎಂದು ಉದ್ಗಾರವೆಳೆದಿದ್ದರು. ‘ ಫೋಟೊ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ, ಡಾ.ಬೋಮನ್‌ ಹೆಸರು ವಿಶ್ವದಾದ್ಯಂತ ಸಂಚಲನ ಮೂಡಿಸಿತು. ಟ್ವಿಟರ್‌ನಲ್ಲಿ ಅವರ ಹೆಸರು ಬಹುವಾಗಿ ಕಾಣಿಸಿಕೊಂಡಿತು.

ಅರ್ಚನಾ ಹೆಚ್‌.

Advertisement
Advertisement

Udayavani is now on Telegram. Click here to join our channel and stay updated with the latest news.

Next