Advertisement
ಅಂತೆಯೇ, 1860ರ ಸುಮಾರಿಗೆ ಚಿತ್ರಕಲಾವಿದರು ಫೋಟೋಗ್ರಫಿಯನ್ನು ತಮ್ಮ ನೈಪುಣ್ಯತೆಯ ಕೃತಿ ರಚನೆಗಳಲ್ಲೂ ಬಳಸಲು ಅನೇಕ ಅವಕಾಶಗಳನ್ನು ಕಂಡುಕೊಂಡರು. ಕೆಲವು ಛಾಯಾಗ್ರಾಹಕರೂ ವ್ಯಕ್ತಿಯನ್ನು, ಉತ್ತಮ ಬೆಳಕಿನ ವ್ಯವಸ್ಥೆಯಲ್ಲಿ ಕಲಾಕೃತಿಯಂತೆ ಸೆರೆಹಿಡಿಯುವ ಮಹತ್ವದೆಡೆ ಪರಿಶ್ರಮಿಸಿ ಖ್ಯಾತರಾದರು. ಅವುಗಳಲ್ಲಿ ಮುಖ್ಯವಾದದ್ದೊಂದು , 1630-35 ರಲ್ಲಿ ಮುಂಚೂಣಿಯಲ್ಲಿದ್ದ ಡಚ್- ಚಿತ್ರ ಕಲಾವಿದ ರೆಂಬ್ರಾಂಡ್ಜ್ ಉಪಯೋಗಿಸುತ್ತಿದ್ದ ಬೆಳಕಿನ ಮಾದರಿ. ಪ್ರಖರವಾದ ಬೆಳಕು-ನೆರಳಿನ ಕಾಂತಿಭೇದವನ್ನು ( Contrast) ಉಂಟುಮಾಡಿ, ಆಳವಾದ ಗಾಢ-ಭಾವದ (Low Key) ಗಂಭೀರ ಪರಿಣಾಮವನ್ನು ಹೊಮ್ಮಿಸುವುದು ಇದರ ಮೂಲ ಗುಣ. ಕತ್ತಲು ತುಂಬಿದ ಒಳಾಂಗಣದಲ್ಲಿ ಸಹಜವಾದ ಎತ್ತರದ ಕಿಟಕಿಯ ಬೆಳಕನ್ನೇ ಪ್ರಧಾನ ಬೆಳಕಾಗಿ ( Key Light) ಮಾಡಿಕೊಳ್ಳುವುದು . ಕಿಟಕಿಯ ಎತ್ತರದಿಂದ ತುಸು ದೂರದಲ್ಲಿ 45 ಡಿಗ್ರಿ ಯಷ್ಟು ಕೆಳಗೆ ಕುಳ್ಳರಿಸಿದ ವ್ಯಕ್ತಿಯ ಭಂಗಿಯನ್ನು ಮೊದಲು ಸ್ವಲ್ಪ ಅಡ್ಡತಿರುಗಿಸಿ, ಮೂಗಿನ ನೇರಕ್ಕೆ 45 ಡಿಗ್ರಿ ಯಿಂದ ಕಿಟಕಿ ಬದಿಯ ಮುಖ, ಮೈ-ಕೈ ಭಾಗಗಳನ್ನು ಹೆಚ್ಚು ಬೆಳಗಿಸಿಕೊಳ್ಳುವುದು. ಮೂಗಿನ ಆಚೆ ಬದಿಯಲ್ಲಿ ವ್ಯಕ್ತಿಯ ಕಣ್ಣು ಮತ್ತು ಅದಕ್ಕೆ ತಾಗಿದ ಕೆಳ ಕೆನ್ನೆಯನ್ನು ತ್ರಿಕೋಣಾಕೃತಿಯಲ್ಲಿ ( Triangle) ಮಾತ್ರ ಬೆಳಗಿಸುವಂತೆ ವ್ಯಕ್ತಿಯ ಭಂಗಿಯನ್ನು ಮತ್ತು ಮುಖವನ್ನು ಸರಿಹೊಂದಿಸುವುದು. ತ್ರಿಕೋನವಾಗಿ ಬೆಳಗಿದ ಕೆನ್ನೆಯನ್ನು ಬಿಟ್ಟು, ಮುಖದ ಆಚೆ ಬದಿ ಉಂಟಾಗುವ ಕಡು ನೆರಳಿನ ಭಾಗಗಳನ್ನು ಅದೇ ಕಿಟಕಿಯಿಂದ ಬೀಳುತ್ತಿರುವ ಬೆಳಕನ್ನೇ 45 ಡಿಗ್ರಿಯಲ್ಲಿ ಪ್ರತಿಫಲನದ ಸಹಾಯದಿಂದ ವ್ಯಕ್ತಿಯ ಕುತ್ತಿಗೆ, ಭುಜ, ತಲೆಕೂದಲು ಭಾಗಗಳನ್ನು ಕಣ್ಣಿಗೆ ಅಲ್ಪ- ಸ್ವಲ್ಪ ಕಾಣಿಸುವಷ್ಟು ಮಾಡಿ, ರೂಪದರ್ಶಿಯನ್ನು ಸಜ್ಜುಗೊಳಿಸಿಕೊಳ್ಳುವುದು ರೆಂಬ್ರಾಂಡ್ಜ್ನ ಬೆಳಕಿನ ವೈಶಿಷ್ಟ್ಯ. ಆ ಬೆಳಕಿನ ವಿಶೇಷತೆಯನ್ನು 19ನೇ ಶತಮಾನದ ಮಧ್ಯದ ಮತ್ತು ನಂತರದ ಛಾಯಾಗ್ರಾಹಕರು ವಿದ್ಯುತ್ ದೀಪ, ಅಂಬ್ರೆಲ್ಲಾ ಫ್ಲಾಶ್, ಸಾಫ್ಟ್ ಬಾಕ್ಸ್, ಇತರ ಬೆಳಕಿನ ಅಳವಡಿಕೆಯಿಂದ ರೆಂಬ್ರಾಂಡ್ಜ್ ಲೈಟಿಂಗ್ ಗೆ ಸುಧಾರಣೆಗಳನ್ನು ತಂದರು. ಉದಾ: ಕೂದಲುಗಳ ಅಂಚನ್ನು, ತಲೆ,ಭುಜ , ಇನ್ನಿತರ ಭಾಗವನ್ನು ಹಿಂಬದಿಯ ಬೆಳಕಿನಿಂದ (backlighting) ಮಿಂಚಿಸುವುದು.
Related Articles
Advertisement
ಅಭಿನೇತ್ರಿ ಸ್ಮಿತಾಳ ಭಾವುಕ ನೋಟ… ಜೂಂ ಲೆನ್ಸ್ ನ 90 ಎಂ.ಎಂ. ಫೋಕಲ್ ಲೆಂಗ್ತ್, ಅಪರ್ಚರ್ ಎಫ್ 4.5, ಕವಾಟ ವೇಗ 1/60 ಸೆಕೆಂಡ್, ಐ.ಎಸ್.ಒ. 800
ಕೆ.ಎಸ್.ರಾಜಾರಾಮ್