Advertisement
ಇದೇ ಮೊದಲ ಬಾರಿಗೆ ಸಾಗರ ತಟದಲ್ಲಿರುವ ಉಪ್ಪು ಸಂಸ್ಕರಣಾ ಪಟ್ಟಿಗಳಲ್ಲಿ ಅಧ್ಯಯನ ನಡೆಸಲಾಗಿದೆ. ಈ ಅಧ್ಯಯನವನ್ನು ಭಾರತೀದಾಸನ್ ವಿ.ವಿ ಹಾಗೂ ವಿಯೆಟ್ನಾಂ ಮತ್ತು ದ.ಕೊರಿಯಾದಲ್ಲಿನ ವಿವಿಧ ವಿವಿಗಳ ಸಂಶೋಧಕರು ಜಂಟಿಯಾಗಿ ಕೈಗೊಂಡಿದ್ದಾರೆ. ಗಮನಿಸಬೇಕಾದ ಸಂಗತಿಯೆಂದರೆ, ಪ್ರಸಕ್ತ ಅಧ್ಯಯನವು ಕಲ್ಲುಪ್ಪಿನ ಮೇಲೆ ನಡೆದಿದೆಯೇ ಹೊರತು ಕಾರ್ಖಾನೆಗಳಲ್ಲಿ ಶುದ್ಧೀಕರಿಸಿದ ಉಪ್ಪಿನ ಮೇಲಲ್ಲ. ಆದರೆ, ಕಳೆದ ಮೂರು ವರ್ಷಗಳಲ್ಲಿ ಭಾರತ ಸೇರಿದಂತೆ ಜಗತ್ತಿನಾದ್ಯಂತ ನಡೆದಿರುವ ಅಧ್ಯಯನಗಳು ವಿವಿಧ ಬ್ರಾಂಡ್‌ಗಳ ಪ್ಯಾಕೇಜ್x ಉಪ್ಪಿನಲ್ಲೂ ಮೈಕ್ರೋ ಪ್ಲಾಸ್ಟಿಕ್‌ನ ಇರುವಿಕೆ ಪತ್ತೆ ಹಚ್ಚಿವೆ. 2018ರಲ್ಲಿ ನಡೆದ ಜಾಗತಿಕ ಅಧ್ಯಯನವು, “ಪ್ರಪಂಚದ 90 ಪ್ರತಿಶತ ಪ್ಯಾಕೇಜ್x ಉಪ್ಪಿನಲ್ಲಿ ಮೈಕ್ರೋ ಪ್ಲಾಸ್ಟಿಕ್ ಇವೆ, ಅದರಲ್ಲಿ ಅತಿ ಹೆಚ್ಚು ಮೈಕ್ರೋ ಪ್ಲಾಸ್ಟಿಕ್ ಇರುವುದು ಸಮುದ್ರದ ಉಪ್ಪಿನಲ್ಲಿ’ ಎಂದಿತ್ತು. ಜಾಗತಿಕವಾಗಿ ಪ್ರತಿಯೊಬ್ಬ ವ್ಯಕ್ತಿಯೂ ವರ್ಷಕ್ಕೆ 2000 ಮೈಕ್ರೋಪ್ಲಾಸ್ಟಿಕ್ ತುಣುಕುಗಳನ್ನು ಸೇವಿಸುತ್ತಿದ್ದಾನೆ ಎಂಬ ಅಂದಾಜಿದೆ. . ಟ್ಯುಟಿಕಾರಿನ್‌ನಲ್ಲಿನ ಉಪ್ಪು ದೇಶಾದ್ಯಂತ ಹಾಗೂ ಚೀನ ಮತ್ತು ಜಪಾನ್‌ಗೂ ರಫ್ತಾಗುತ್ತದೆ…
ಉಪ್ಪು ಜೀವನಕ್ಕೆ ಅವಶ್ಯಕವಾದ ಒಂದು ಖನಿಜ. ಖಾದ್ಯ ಉಪ್ಪು ಮುಖ್ಯವಾಗಿ ಸೋಡಿಯಮ್ ಕ್ಲೋರೈಡ್ ಅನ್ನು ಒಳಗೊಂಡಿರುತ್ತದೆ. ಮಾನವನು ಆಹಾರದಲ್ಲಿ ಬಳಸುವ ಉಪ್ಪು ಹಲವು ಬಗೆಯಲ್ಲಿ ತಯಾರಾಗುತ್ತದೆ. ಇದರಲ್ಲಿ ಶುದ್ಧೀಕರಣಗೊಳ್ಳದ ಸಮುದ್ರದ ಉಪ್ಪು (ಕಲ್ಲುಪ್ಪು), ಶುದ್ಧೀಕೃತ ಪುಡಿ ಉಪ್ಪು (ಟೇಬಲ್ ಸಾಲ್ಟ್) ಮತ್ತು ಅಯೊಡಿನ್ ಒಳಗೊಂಡಿರುವ ಉಪ್ಪು ಪ್ರಮುಖವಾದವು. ಉಪ್ಪನ್ನು ಸಾಮಾನ್ಯವಾಗಿ ಸಮುದ್ರದ ನೀರು ಅಥವಾ ಭೂಮಿಯಲ್ಲಿನ ಉಪ್ಪಿನ ಬಂಡೆಗಳಿಂದ (ಲವಣಶಿಲೆ) ಪಡೆಯಲಾಗುತ್ತದೆ. ಮೈಕ್ರೋ ಪ್ಲ್ರಾಸ್ಟಿಕ್‌ಗಳ ಮೂಲ
– ಪ್ಲಾಸ್ಟಿಕ್ ಕವರ್‌ಗಳು, ಚಾಕ್ಲೆಟ್-ಚಿಪ್ಸ್, ಹಾಲಿನ ಪ್ಯಾಕೆಟ್‌ಗಳು ಪಾಲಿಥಿಲೀನ್ ಮತ್ತು ಪಾಲಿಪ್ರೊಪಿಲೀನ್‌ನ ಪ್ರಮುಖ ಮೂಲಗಳಾಗಿವೆ. ಇನ್ನು ಮೀನಿನ ಬಲೆಗಳು ಮತ್ತು ಜವಳಿ ಉದ್ಯಮದ ತ್ಯಾಜ್ಯವೂ ಮೈಕ್ರೋಪ್ಲಾಸ್ಟಿಕ್‌ನ ಮೂಲವಾಗಿವೆ.
– ಪರಿಣತರ ಪ್ರಕಾರ ಕಚ್ಚಾ ಉಪ್ಪು ಶುದ್ಧೀಕರಿಸುವಾಗ ಮೈಕ್ರೋ ಪ್ಲಾಸ್ಟಿಕ್‌ಗಳನ್ನು ಪ್ರತ್ಯೇಕಿಸುವಂಥ ಪರಿಣಾಮಕಾರಿ ತಂತ್ರಜ್ಞಾನ ಇಲ್ಲ.
Related Articles
ಟ್ಯುಟಿಕಾರಿನ್‌ನ 25 ವಿವಿಧ ಉಪ್ಪು ತಯಾರಣಾ ಪಟ್ಟಿಗಳಿಂದ ತಲಾ 1.5 ಕೆ.ಜಿ. ಸ್ಯಾಂಪಲ್ ಸಂಗ್ರಹಿಸಲಾಗಿತ್ತು.
Advertisement
ಉಪ್ಪಿನಲ್ಲಿ ದೊರೆತ 60 ಪ್ರತಿಶತದಷ್ಟು ಮೈಕ್ರೋಪ್ಲಾಸ್ಟಿಕ್‌ಗಳು 100 ಮೈಕ್ರೋಮೀಟರ್‌ಗಿಂತಲೂ ಕಿರಿದಾಗಿವೆ.
ಮೈಕ್ರೋ ಪ್ಲಾಸ್ಟಿಕ್‌ಗಳಲ್ಲಿ ಪಾಲಿಪ್ರೊಪೈಲೀನ್, ಪಾಲಿಥಿಲೀನ್, ನೈಲಾನ್ ಮತ್ತು ಸೆಲ್ಯುಲೋಸ್ ಕೂಡ ಇವೆ.
ಮೈಕ್ರೋಪ್ಲಾಸ್ಟಿಕ್ ಹೇಗೆ ಸೇರಿಕೊಳ್ಳುತ್ತಿದೆ?ಕಡಲು ಸೇರುವ ಪ್ಲಾಸ್ಟಿಕ್ ಕಪ್ಪುಗಳು, ಕವರ್‌ಗಳು, ಬಾಟಲಿಗಳು, ಮೀನಿನ ಬಲೆಗಳು, ಹಲವು ದೇಶಗಳ ಪ್ಲಾಸ್ಟಿಕ್ ತ್ಯಾಜ್ಯಗಳೆಲ್ಲ ಕ್ರಮೇಣ ಪುಡಿಯಾಗುತ್ತಾ ಮೈಕ್ರೋಪ್ಲಾಸ್ಟಿಕ್‌ಗಳಾಗುತ್ತವೆ. ದೊಡ್ಡ ಪ್ಲಾಸ್ಟಿಕ್ ಪುಡಿಯಾಗುತ್ತಾ 5 ಮಿಲಿಮೀಟರ್‌ಗೂ ಕಡಿಮೆ ತುಂಡಾಗಿ ಬದಲಾದರೆ ಅದನ್ನು ಮೈಕ್ರೋಪ್ಲಾಸ್ಟಿಕ್ ಎನ್ನುತ್ತಾರೆ. ಟ್ಯುಟಿಕಾರಿನ್ ಎಂದಷ್ಟೇ ಅಲ್ಲ, ಪ್ಲಾಸ್ಟಿಕ್ ತ್ಯಾಜ್ಯ ಹೊಂದಿರುವ ಯಾವುದೇ ಸಾಗರ ನೀರಿನ ಉಪ್ಪಿನಲ್ಲೂ ಮೈಕ್ರೋ ಪ್ಲಾಸ್ಟಿಕ್‌ಗಳು ಇದ್ದೇ ಇರುತ್ತವೆ. ಹಿಂದಿನ ಅಧ್ಯಯನಗಳು
2019: ತೈವಾನ್‌ನಲ್ಲಿ ನಡೆದ ಅಧ್ಯಯನವು 4.4ಕೆ.ಜಿ. ಉಪ್ಪಿನಲ್ಲಿ 43 ಮೈಕ್ರೋ ಪ್ಲಾಸ್ಟಿಕ್ ಕಣಗಳಿರುವುದನ್ನು ತೋರಿಸಿತು.
2018: ಐಐಟಿ ಬಾಂಬೆಯ ಸಂಶೋಧಕರು, ದೇಶದ ಹಲವು ಉಪ್ಪಿನ ಬ್ರಾಂಡ್‌ಗಳಲ್ಲಿ 626 ಮೈಕ್ರೋ ಪ್ಲಾಸ್ಟಿಕ್ ಪಾರ್ಟಿಕಲ್‌ಗಳನ್ನು ಪತ್ತೆ ಹಚ್ಚಿದ್ದರು.
2018: ದಕ್ಷಿಣ ಕೊರಿಯಾ ಮತ್ತು ಗ್ರೀನ್‌ಪೀಸ್ ಈಸ್ಟ್ ಏಷ್ಯಾದ ಸಂಶೋಧಕರು, ಜಗತ್ತಿನಾದ್ಯಂತ 39 ಪ್ರಮುಖ ಬ್ರಾಂಡ್‌ಗಳ ಅಧ್ಯಯನ ನಡೆಸಿ, ಅವುಗಳಲ್ಲಿ 36 ಕಂಪನಿಗಳ ಉಪ್ಪಿನಲ್ಲಿ ಮೈಕ್ರೋಪ್ಲಾಸ್ಟಿಕ್ ಇರುವುದನ್ನು ಪತ್ತೆ ಹಚ್ಚಿದರು.
2017: ಚೀನಾದಲ್ಲಿ ನಡೆದ ಈ ಅಧ್ಯಯನವು ಒಂದು ಕೆ.ಜಿ. ಸಮುದ್ರದ ಉಪ್ಪಿನಲ್ಲಿ 550-681 ಮೈಕ್ರೋಪ್ಲಾಸ್ಟಿಕ್‌ಗಳು, ಹಾಗೂ ಶಿಲೆ/ಬಾವಿಗಳಿಂದ ತೆಗೆದ ಉಪ್ಪಿನಿಂದ 7-200 ಮೈಕ್ರೋಪ್ಲಾಸ್ಟಿಕ್ ಇರುವುದನ್ನು ಕಂಡುಕೊಂಡಿತ್ತು. 2018ರಲ್ಲೂ ಬಂದಿತ್ತು ಅಧ್ಯಯನ ವರದಿ
2018ರಲ್ಲಿ ಐಐಟಿ ಬಾಂಬೆಯ ಇಬ್ಬರು ಸಂಶೋಧಕರು ದೇಶದ ವಿವಿಧ ಉಪ್ಪಿನ ಬ್ರಾಂಡ್‌ಗಳಲ್ಲಿ 626 ಮೈಕ್ರೋಪ್ಲಾಸ್ಟಿಕ್ ಕಣಗಳನ್ನು ಪತ್ತೆಹಚ್ಚಿದ್ದರು. ಇದರಲ್ಲಿ 63 ಪ್ರತಿಶತ ಮೈಕ್ರೋಪ್ಲಾಸ್ಟಿಕ್ ಕಣಗಳು “ತುಣುಕು’ಗಳ ರೂಪದಲ್ಲಿದ್ದರೆ, 37 ಪ್ರತಿಶತ” ನಾರಿನ’ ರೂಪದಲ್ಲಿದ್ದವು. ಸದ್ಯಕ್ಕಂತೂ ಮೈಕ್ರೋ ಪ್ಲಾಸ್ಟಿಕ್‌ಗಳನ್ನು 100 ಪ್ರತಿಶತ ಬೇರ್ಪಡಿಸುವಂಥ ತಂತ್ರಜ್ಞಾನ ಇಲ್ಲ ಎನ್ನುತ್ತಾರೆ, ಸಂಶೋಧಕರಲ್ಲೊಬ್ಬರಾದ ಅಮೃತಾಂಶೂ ಶ್ರೀವಾಸ್ತವ್. ಇದಷ್ಟೇ ಅಲ್ಲದೇ ಒಬ್ಬ ಭಾರತೀಯ ದಿನಕ್ಕೆ 5 ಗ್ರಾಂ ಉಪ್ಪು ಸೇವಿಸುತ್ತಾನೆ ಎಂದರೆ, ವಾರ್ಷಿಕವಾಗಿ ಅವನ ದೇಹದಲ್ಲಿ 117 ಮೈಕ್ರೋಗ್ರಾಮ್‌ನಷ್ಟು ಮೈಕ್ರೋಪ್ಲಾಸ್ಟಿಕ್ ಸೇರುತ್ತಿದೆ ಎಂದೂ ‘Contamination of Indian Sea Salts with Microplastics and a Potential Prevention Strategy’ ಎಂಬ ಈ ಅಧ್ಯ ಯನ ಹೇಳಿತ್ತು.