Advertisement

‘ದೇಶದ ಜನರಿಗೆ ಬುದ್ದಿಯಿಲ್ಲ ಎಂದು ತಿಳಿದಿದ್ದೀರಾ..’: ಆದಿಪುರುಷ್ ತಂಡಕ್ಕೆ ಕೋರ್ಟ್ ತರಾಟೆ

06:03 PM Jun 27, 2023 | Team Udayavani |

ಲಖನೌ: ಅಲಹಾಬಾದ್ ಹೈಕೋರ್ಟ್ ಇಂದು ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿದ ಆರೋಪ ಹೊತ್ತಿರುವ ‘ಆದಿಪುರುಷ್’ ಚಿತ್ರದ ಡೈಲಾಗ್‌ ಗಳ ಬಗ್ಗೆ ನಿರ್ಮಾಪಕರನ್ನು ತರಾಟೆಗೆ ತೆಗೆದುಕೊಂಡಿತು.

Advertisement

ಈ ಪ್ರಕರಣದಲ್ಲಿ ಸಹ ಬರಹಗಾರ ಮನೋಜ್ ಮುಂತಶಿರ್ ಶುಕ್ಲಾ ಅವರನ್ನು ಕಕ್ಷಿದಾರರನ್ನಾಗಿ ಮಾಡುವಂತೆ ನ್ಯಾಯಾಲಯ ಸೂಚಿಸಿದ್ದು, ಒಂದು ವಾರದೊಳಗೆ ಪ್ರತಿಕ್ರಿಯೆ ನೀಡುವಂತೆ ನೋಟಿಸ್ ಜಾರಿ ಮಾಡಿದೆ.

ಹಿಂದೂ ಮಹಾಕಾವ್ಯ ರಾಮಾಯಣವನ್ನು ಆಧರಿಸಿದ ಪೌರಾಣಿಕ ಸಾಹಸಮಯ ಚಿತ್ರ ಎಂದು ಹೇಳಿಕೊಳ್ಳುವ ‘ಆದಿಪುರುಷ್’ ಸಿನಿಮಾವನ್ನು ನಿಷೇಧಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ನಡೆಸುತ್ತಿದೆ.

ಚಿತ್ರದಲ್ಲಿ ಸಂಭಾಷಣೆಗಳ ಸ್ವರೂಪ ದೊಡ್ಡ ಸಮಸ್ಯೆಯಾಗಿದೆ. ರಾಮಾಯಣ ನಮಗೆ ಒಂದು ಮಾದರಿ. ಜನರು ಮನೆಯಿಂದ ಹೊರಡುವ ಮೊದಲು ರಾಮಚರಿತಮಾನಸವನ್ನು ಓದುತ್ತಾರೆ. ಸಿನಿಮಾಗಳು ಕೆಲವು ವಿಚಾರಗಳನ್ನು ಮುಟ್ಟಬಾರದು ಎಂದು ಕೋರ್ಟ್ ಹೇಳಿದೆ.

ಚಲನಚಿತ್ರ ಪ್ರಮಾಣೀಕರಣ ಪ್ರಾಧಿಕಾರವು (ಸೆನ್ಸಾರ್ ಮಂಡಳಿ) ತನ್ನ ಜವಾಬ್ದಾರಿಯನ್ನು ಪೂರೈಸಿದೆಯೇ ಎಂದು ಅಲಹಾಬಾದ್ ಹೈಕೋರ್ಟ್ ಪ್ರಶ್ನಿಸಿದೆ.

Advertisement

ಇದನ್ನೂ ಓದಿ:Airport: ಕಸ್ಟಮ್ಸ್‌ ಅಧಿಕಾರಿಗಳೆಂದು ನಂಬಿಸಿ ವ್ಯಕ್ತಿಗೆ ಲಕ್ಷಾಂತರ ರೂ. ಪಂಗನಾಮ !

“ಸಿನಿಮಾ ನೋಡಿದ ಜನರು ಕಾನೂನು ಸುವ್ಯವಸ್ಥೆಗೆ ಧಕ್ಕೆ ತರದಿರುವುದು ಒಳ್ಳೆಯದು. ಹನುಮಂತ ಮತ್ತು ಸೀತೆಯನ್ನು ಏನೂ ಇಲ್ಲದಂತೆ ತೋರಿಸಲಾಗಿದೆ. ಈ ವಿಷಯಗಳನ್ನು ಮೊದಲಿನಿಂದಲೂ ತೆಗೆದು ಹಾಕಬೇಕಾಗಿತ್ತು. ಕೆಲವು ದೃಶ್ಯಗಳು “ಎ ವರ್ಗ” (ವಯಸ್ಕ) ಎಂದು ತೋರಿಸಲಾಗಿದೆ. ಅಂತಹ ಚಲನಚಿತ್ರಗಳನ್ನು ವೀಕ್ಷಿಸುವುದು ತುಂಬಾ ಕಷ್ಟ” ಎಂದು ನ್ಯಾಯಾಲಯವು ಗಮನಿಸಿತು.

ಚಿತ್ರದಿಂದ ಆಕ್ಷೇಪಾರ್ಹ ಸಂಭಾಷಣೆಗಳನ್ನು ತೆಗೆದುಹಾಕಲಾಗಿದೆ ಎಂದು ಡೆಪ್ಯುಟಿ ಸಾಲಿಸಿಟರ್ ಜನರಲ್ ನ್ಯಾಯಾಲಯಕ್ಕೆ ತಿಳಿಸಿದ್ದು, ಇದಕ್ಕೆ ಸೆನ್ಸಾರ್ ಮಂಡಳಿಯು ಏನು ಮಾಡುತ್ತಿದೆ ಎಂದು ಪೀಠ ಕೇಳಿತು.

“ಅದು ಮಾತ್ರ ಕೆಲಸ ಮಾಡುವುದಿಲ್ಲ, ನೀವು ದೃಶ್ಯಗಳನ್ನು ಏನು ಮಾಡುತ್ತೀರಿ? ನಾವು ಏನು ಮಾಡಬೇಕೆಂದು ಬಯಸುತ್ತೇವೆಯೋ ಅದನ್ನು ನಾವು ಖಂಡಿತವಾಗಿ ಮಾಡುತ್ತೇವೆ. ಒಂದು ವೇಳೆ ಚಿತ್ರದ ಪ್ರದರ್ಶನವನ್ನು ನಿಲ್ಲಿಸಿದರೆ, ಆಗ ಯಾರ ಭಾವನೆಗಳಿಗೆ ನೋವಾಗಿದೆಯೋ ಅವರಿಗೆ ಪರಿಹಾರ ಸಿಗುತ್ತದೆ’’ ಎಂದು ನ್ಯಾಯಾಲಯ ಹೇಳಿದೆ.

ಚಿತ್ರದಲ್ಲಿ ಸೂಚನೆ (disclaimer) ಸೇರಿಸಲಾಗಿದೆ ಎಂಬ ಪ್ರತಿವಾದಿಗಳ ವಾದಕ್ಕೆ ಸಂಬಂಧಿಸಿದಂತೆ ಪೀಠವು, “ನೀವು ಚಿತ್ರದಲ್ಲಿ ಭಗವಾನ್ ರಾಮ, ಲಕ್ಷ್ಮಣ, ರಾವಣ, ಲಂಕಾ ಮತ್ತು ಹನುಮಂತ ದೇವರನ್ನು ತೋರಿಸುತ್ತೀರಿ. ನಂತರ ಅದು ರಾಮಾಯಣವಲ್ಲ ಎಂದು ಹೇಳುತ್ತಿದ್ದೀರಿ? ಸೂಚನೆ ಹಾಕುವ ಮೂಲಕ ಜನರು, ದೇಶವಾಸಿಗಳು ಮತ್ತು ಯುವಕರನ್ನು ಬುದ್ಧಿಹೀನರು ಎಂದು ಪರಿಗಣಿಸುತ್ತಿದ್ದೀರಾ?” ಎಂದು ಕೋರ್ಟ್ ಖಾರವಾಗಿ ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next