ಮಣಿಪಾಲ: ದೇಶದಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಸೋಂಕು ಹೆಚ್ಚುತ್ತಿದೆ. ಈ ನಿಟ್ಟಿನಲ್ಲಿ ನಾವು ಮೈ ಮರೆಯದೆ ಇನ್ನಷ್ಷು ಮುಂಜಾಗ್ರತೆ ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಇದೆಯೇ ಎಂದು ಉದಯವಾಣಿ ಕೇಳಿದ್ದು, ಆಯ್ದ ಉತ್ತರಗಳು ಇಲ್ಲಿದೆ.
ಸೈಮನ್ ಫರ್ನಾಂಡಿಸ್: ಖಂಡಿತ ಇದೆ. ಯಾಕಂದರೆ ಸೋಂಕಿತರು ಹಾಗೂ ಪೀಡಿತರು ಈ ಹಿಂದಿಗಿಂತಲೂ ಹೆಚ್ಚಾಗಿ ಇದ್ದಾರೆ ಅಲ್ಲವೇ
ಚಿ. ಮ. ವಿನೋದ್ ಕುಮಾರ್: ಹೌದು ನಾವು ನಮ್ಮ ರಕ್ಷಣೆಯ ಬಗ್ಗೆ ಖುದ್ದಾಗಿ ಜಾಗರೂಕತೆಯನ್ನು ವಹಿಸುವುದು ಒಳ್ಳೆಯದು.
ಲಕ್ಷ್ಮನ್ಹಾಸ್ ಲಕ್ಷ್ಮನ್ಹಾಸ್: ಮುಂದೆ ತುಂಬಾ ಡೇಜರ್ ಕೊರೊನಾ ಹೆಚ್ಚಾಗುತದೆ
ಉಲ್ಲಾಸ್ ರೈ: ಜನರು ಇನ್ನೂ ಗಂಭೀರವಾಗಿ ಮುಂಜಾಗೃತಾ ಕ್ರಮಗಳನ್ನು ಪಾಲಿಸುತ್ತಿಲ್ಲ. ಪಾರ್ಕ್ ಗಳಲ್ಲಿ ಬಹಳಷ್ಟು ಮಂದಿ ಮಾಸ್ಕ್ ಧರಿಸುತ್ತಿಲ್ಲ. ಸಾಮಾಜಿಕ ಅಂತರವನ್ನು ಪಾಲಿಸುತ್ತಿಲ್ಲ. ಕದ್ರಿ ಪಾರ್ಕ್ ನ ಮುಂಭಾಗದಲ್ಲಿ ಸ್ಯಾನಿಟೈಸರ್ ಅನ್ನು ಈಗ ನೀಡಲಾಗುತ್ತಿಲ್ಲ.