Advertisement
ಗಣೇಶನೇ ವಾಸ್ತವದಲ್ಲಿ ವಾಸ್ತು ಪುರುಷನಾಗಿದ್ದಾನೆ. ಮನೆಯಲ್ಲಿ ಗಣೇಶ ಚತುರ್ಥಿಯ ದಿನ ಒಂದು ಮೇಲ್ಮಟ್ಟದಲ್ಲಿ ಅಡ್ಡವಾಗಿರಿಸಿದ ತೆಂಗಿನ ಒಂಟ ಗರಿಗೆ, ಉದ್ದನೆಯ ಇನ್ನೊಂದು ಒಂಟಿಗರಿಯನ್ನು ಮಧ್ಯ ಭಾಗದಲ್ಲಿ ಅಂಟಿಸಿ ಸರಳವಾಗಿ ಈ ಗರಿಗಳನ್ನೇ ಗಣಪತಿಯನ್ನಾಗಿ ಆರಾಧಿಸಿದರೆ ಮನೆಯ ವಾಸ್ತು ದೋಷಗಳಿಗೆ ಪರಿಹಾರ ಎಂಬುದನ್ನು ವಾಸ್ತು ತಜ್ಞನಾದ ಮಯನು ಸಾರಿದ್ದಾನೆ. ಆರಾಧನೆ ಎಂದರೆ ಧೂಪ, ದೀಪ, ಮಂಗಳಾರತಿ, ನೈವೇದ್ಯಗಳ ಅವಶ್ಯಕತೆ ಇರಬೇಕಾಗಿಲ್ಲ.
Related Articles
Advertisement
ಈ ನಿಟ್ಟಿನಲ್ಲಿ ಭಾರತೀಯರ ವಾಸ್ತು ಶಾಸ್ತ್ರ ಕಲ್ಪನೆಯು ಮನೆಯ ಭದ್ರತೆಯನ್ನು ಆರೋಗ್ಯದ ನೆಲೆಯಲ್ಲಿ ಗಟ್ಟಿಗೊಳಿಸುವುದಕ್ಕೆ ಪೂರಕವಾಗಿ ಹಸುವಿನ ಸಗಣಿ ಹಾಗೂ ಮೂತ್ರದ ಅಂಶಗಳನ್ನು ಮನೆಯ ಪವಿತ್ರತೆಗೆ ಆಧಾರವಾದ ಘಟಕಗಳನ್ನಾಗಿ ಗುರುತಿಸಿದೆ. ಹಸುವಿನ ಸಗಣಿ ಹಾಗೂ ಮೂತ್ರ ಅಂಶಗಳನ್ನು ಮನೆಯ ಪವಿತ್ರತೆಗೆ ಆಧಾರವಾದ ಘಟಕಗಳನ್ನಾಗಿ ಗುರುತಿಸಿದೆ. ಹಸುವಿನ ಸಗಣಿ ಹಾಗೂ ಮೂತ್ರದಲ್ಲಿ ಇರಬಹುದಾದ ಕ್ರಿಕೀಟಗಳನ್ನು ಕೊಲ್ಲುವ ಶಕ್ತಿಯನ್ನು ಆಧುನಿಕ ವಿಜ್ಞಾನವೂ ದೃಢಪಡಿಸಿದೆ.
ಈ ಎಲ್ಲ ಸಂಗತಿಗಳನ್ನು ಗಮನಿಸಿದರೆ, ನಮ್ಮ ಸಂಪ್ರದಾಯ ಬೆಳ್ಳಂಬೆಳಗಿನ ಹೊತ್ತು ಗೋವಿನ ಮೂತ್ರ ಮತ್ತು ಸೆಗಣಿಯ ಒಂದು ಚಿಕ್ಕ ಭಾಗವನ್ನು ನೀರಿನಲ್ಲಿ ಮಿಶ್ರಣಗೊಳಿಸಿ ಮನೆಯ ಎಲ್ಲೆಡೆ ಸೂಕ್ಷ್ಮವಾಗಿ ಸಿಂಪಡಿಸುವ ಕೆಲಸವನ್ನು ನಡೆಸಿಕೊಂಡು ಬರುವುದು ವಾಡಿಕೆಯಾಗಿತ್ತು. ಈಗ ಈ ಸಂಪ್ರದಾಯ ಭಾರತದಲ್ಲಿ ಎಲ್ಲಿಯೂ ಕಾಣಸಿಗದು. ದೇಹದ ಸೌಖ್ಯಕ್ಕಾಗಿಯೂ ಗೋಮುತ್ರವನ್ನು ಪ್ರತಿ ಶುಭ ಕಾರ್ಯದ ಪೂರ್ವದಲ್ಲಿ ಅಂತರ್ ಶುದ್ಧಿಗಾಗಿ ಸ್ವಲ್ಪ ಮಟ್ಟಿಗೆ ಕುಡಿಸುವುದು ಧಾರ್ಮಿಕ ಕಾರ್ಯಕ್ರಮಗಳ ಪೂರ್ವ ವಿಧಿಯಾಗಿ ನಡೆಯುತ್ತಿತ್ತು.
ಏನೇ ಇರಲಿ ಮನೆಯಲ್ಲಿ ವಾಸ್ತು ಸಂಬಂಧೀ ಏರುಪೇರುಗಳಿಂದ ಸ್ವತ್ಛತೆಯ ವಿಚಾರದಲ್ಲಿನ ಅಸಮತೋಲನ ನಿವಾರಣೆಗೆ ಪ್ರತಿ ದಿನ ಗೋಮಯ, ಮೂತ್ರ ಸಿಂಪಡಣೆ ಒಂದು ಉತ್ತಮವಾದ ಶುದ್ಧೀಕರಣಕ್ಕೆ ಅನುಕೂಲಕರವಾಗಿದೆ ಎಂಬುದನ್ನು ನಮ್ಮ ಭಾರತೀಯ ವಾಸ್ತುಶಾಸ್ತ್ರ ದೃಢಪಡಿಸಿದೆ. ಒಟ್ಟಿನಲ್ಲಿ ಜನರಿಗೇ ಇದು ಸಂಬಂಧಿಸಿದ ವಿಚಾರ. ಈ ನೆಲೆಯಲ್ಲಿ ಹಸಿರು ಎಲೆ ಗಣಪನನ್ನು ಪೂಜಿಸುವ, ಹಸುವಿನ ಸಂಬಂಧೀ ಘಟಕಗಳ ಮೂಲಕ ಶುದ್ಧಕ್ರಿಯೆ ನಡೆಸಿ, ಆರೋಗ್ಯ ಪೂರ್ಣ ಚೈತನ್ಯಕ್ಕೆ ಧಾತುಗಳನ್ನು ಮನೆಯಲ್ಲಿ ಹರಳುಗಟ್ಟಿಸುವ ಅಂಶಗಳನ್ನು ಹೊಸದೇ ಗ್ರಹಿಕೆಯೊಂದಿಗೆ ವಿಶ್ಲೇಷಿಸಬಹುದಾಗಿದೆ.
* ಅನಂತಶಾಸ್ತ್ರಿ