Advertisement
ರಾಜೇಶ್ ಅಂಚನ್ ; ಖಂಡಿತಾ ಹೌದು. ಇವತ್ತು ಜಾತಿ ವ್ಯವಸ್ಥೆ ಗೆ ಕಟ್ಟು ಬಿದ್ದ ಜನ ತಮಗರಿವಿಲ್ಲದೆ ತಮ್ಮ ತೆರಿಗೆ ಹಣವನ್ನು ಲೂಟಿ ಹೊಡೆದು ರಾಜರಂತೆ ಮೆರೆಯುವ ಭ್ರಷ್ಟಾಚಾರಿಗಳಿಗೆ ಬೆಂಬಲ ಕೊಟ್ಟು ತಾವೇ ಮೂರ್ಖ ರಾಗುತ್ತಿದ್ದಾರೆ. ತಮಗೆ ಅರಿವಿಲ್ಲದೆ ರಾಜಕಾರಣಿಗಳು ನೇಯ್ದ ಬಲೆಗೆ ಸಿಕ್ಕಿ ಹಾಕಿಕೊಳ್ತಾ ಇರೋದಲ್ಲದೆ, ದೇಶವನ್ನು ಅಧೋಗತಿಗೆ ತಳ್ಳುತ್ತಿದ್ದಾರೆ. ಅವರು ಕೊಡುವ ಚಿಲ್ಲರೆ ಹಣ, ಭೋಜನಕ್ಕೆ ಮರುಳಾಗಿ ಪ್ರಜಾಪ್ರಭುತ್ವ ವನ್ನು ಕೈಯಾರೆ ಬಲಿಕೊಡ್ತಾ ಇದ್ದಾರೆ.
Related Articles
Advertisement
ಬಸವರಾಜ್ : ನಮ್ಮ ಜಾತಿಯವ ಕದ್ದು ದೊಡ್ಡ ಮನುಷ್ಯ ಆದರೆ ಬೆಂಬಲಿಸುವ ಬೇರೆಯವರು ಆ ಕೆಲಸ ಮಾಡಿದ್ರೆ ವಿರೋಧಿಸುವ. ಕಳ್ಳ ಮನಸ್ಸುಗಳು ಹೆಚ್ಚು. ಖಡಾ ಖಂಡಿತವಾಗಿಯೂ ಭ್ರಷ್ಟರ ಪ್ರೋತ್ಸಾಹ ಮಾಡುವ ಮಂದಿ ಹೆಚ್ಚು. ಅದು ಜಾತಿ ತಲೆಗೇರಿ
ಜೀವೇಂದ್ರ ಪೂಜಾರಿ : ಸರಿಯಾಗಿ ಹೇಳಿದ್ದಾರೆ ನಾವು ಸಾಮಂತ ಕಾಲಕ್ಕೆ ನಾಂದಿ ಹಾಡುತೀದ್ದೆವೆ
ವಾಸಿಂ ಇಮ್ರಾನ್ ಖಾನ್: ಜಾತಿ ವ್ಯವಸ್ಥೆ ಇರುವ ವರೆಗೆ , ಭ್ರಷ್ಟಾಚಾರ ನಿರ್ಮೂಲನೆ ಅಸಾಧ್ಯ. ಇಂದಿನ ಹಲವಾರು ಸಮಸ್ಯೆ ಗಳಿಗೆ ಜಾತಿ ವ್ಯವಸ್ಥೆ ಕಾರಣ.
ಸಣ್ಣಮಾರಪ್ಪ ಚಂಗಾವರ: ಮೊದಲು ಈ ಭ್ರಷ್ಟತೆ ಎನ್ನುವುದೆ ಅಪಾಯಕಾರಿ. ಅದರಲ್ಲಿ ಜನರು ಭಾಗಿಯಾದರೆ ಇನ್ನು ಅಪಾಯಕಾರಿ. ಇದು ಭಾಗಿಯಾದ ಜನರಿಗೆ ಗೊತ್ತಾಗದಂತೆ ಹೊಡೆತ ಬೀಳುತ್ತದೆ