Advertisement

ಕಾಲಹರಣ ಬಿಡಿ ಬದುಕು ಅರ್ಥೈಸಿಕೊಳ್ಳಿ

10:13 AM Sep 23, 2019 | Suhan S |

ಹುಬ್ಬಳ್ಳಿ: ಮನುಷ್ಯ ತನ್ನ ಆತ್ಮ ಸಂತೋಷವನ್ನು ತನ್ನಲ್ಲೇ ಕಾಣದೆ, ಇನ್ನೊಬ್ಬರೊಂದಿಗೆ ಹೋಲಿಸುವುದರಲ್ಲಿ ಮನುಷ್ಯ ನೆಮ್ಮದಿ ಹಾಳು ಮಾಡಿಕೊಳ್ಳುತ್ತಿದ್ದು, ಇದರಿಂದ ಹೊರ ಬಂದಾಗ ಸುಂದರ ಜೀವನ ಕಾಣಲು ಸಾಧ್ಯ ಎಂದು ಸೋಂದಾ ಶ್ರೀಕ್ಷೇತ್ರ ದಿಗಂಬರ ಜೈನಮಠದ ಶ್ರೀ ಭಟ್ಟಾಕಲಂಕ ಭಟ್ಟಾರಕ ಸ್ವಾಮೀಜಿ ಹೇಳಿದರು.

Advertisement

ನಮೋಸ್ತು ಶಾಸನ ಸೇವಾ ಸಮಿತಿ, ದಿಗಂಬರ ಜೈನ ಸಮಾಜ ಹಾಗೂ ವಿವಿಧ ಜೈನ ಸಂಘಟನೆಗಳ ಆಶ್ರಯದಲ್ಲಿ ಇಲ್ಲಿನ ಗಬ್ಬೂರು ಶ್ರೀ ಆದಿನಾಥ ಶ್ವೇತಾಂಬರ ಜೈನ ಮಂದಿರದಲ್ಲಿ ರವಿವಾರ ಆಯೋಜಿಸಿದ್ದ ಪ್ರಥಮ ಅಂತಾರಾಷ್ಟ್ರೀಯ ಅಧಿವೇಶನದಲ್ಲಿ ಪಾಲ್ಗೊಂಡು ಆಶೀರ್ವಚನ ನೀಡಿದ ಅವರು, ಪರರ ಜೀವನ ನೋಡಿ ಅದರಂತೆ ನಾವಾಗಬೇಕು. ಅವರಂತೆ ನೆಮ್ಮದಿಯಾಗಿ ಬದುಕಬೇಕು ಎಂಬುದರಲ್ಲೇ ಹೆಚ್ಚು ಸಮಯ ಕಳೆಯುತ್ತಿದ್ದಾರೆ. ಆದರೆ ಅಂತಹ ನೆಮ್ಮದಿ ಪಡೆಯಲು ಅವರ ಸಾಧನೆ ಏನು, ಅವರಂತೆ ನಾವು ಮೇಲ್ಮಟ್ಟಕ್ಕೆ ಬರಲು ಏನು ಮಾಡಬೇಕು ಎಂಬುದರ ಬಗ್ಗೆ ಚಿಂತಿಸುವುದಿಲ್ಲ. ಇನ್ನೊಬ್ಬರ ನೆಮ್ಮದಿ ಬಗ್ಗೆ ಕಾಲಹರಣ ಮಾಡುವ ಬದಲು ನಿಮ್ಮ ಜೀವನ ಅರ್ಥೈಸಿಕೊಂಡು ನೆಮ್ಮದಿ ಕಂಡುಕೊಳ್ಳಬೇಕು ಎಂದು ಹೇಳಿದರು.

ಇನ್ನೊಬ್ಬರ ಕಷ್ಟಗಳಿಗೆ ಸ್ಪಂದಿಸುವ ಗುಣ ಮನುಷ್ಯರಲ್ಲಿ ಕಡಿಮೆಯಾಗುತ್ತಿದೆ. ತಾನೊಬ್ಬನೇ ಸುಖ, ಸಂತೋಷದಿಂದ ಬಾಳಬೇಕು ಎಂದು ಸ್ವಾರ್ಥಿಯಾಗುತ್ತಿದ್ದಾನೆ. ಇನ್ನೊಬ್ಬರ ಕಷ್ಟಗಳಿಗೆ ಸ್ಪಂದಿಸುವ, ಸಮಾಜ ಬಗ್ಗೆ ಚಿಂತನೆ ಮಾಡುವ ಮನಸ್ಥಿತಿ ಬೆಳೆಸಿಕೊಳ್ಳಬೇಕು. ನಾವು ಆಯ್ಕೆ ಮಾಡಿಕೊಂಡ ಅಥವಾ ನಮ್ಮ ಪಾಲಿಗೆ ಬಂದ ಕೆಲಸವನ್ನು ಪ್ರಾಮಾಣಿಕ-ನಿಷ್ಠೆಯಿಂದ ನಿರ್ವಹಿಸಿದರೆ ಭಗವಂತೆ ನಾವು ಬಯಸಿದ ನೆಮ್ಮದಿ ದಯಪಾಲಿಸುತ್ತಾನೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಅನಿತಾ ಸುರೇಂದ್ರಕುಮಾರ ಮಾತನಾಡಿ, ಜೀವಿತಾವಧಿ ಸಮಯವನ್ನು ಧ್ಯಾನದಲ್ಲಿ ಕಳೆಯಬೇಕು. ಧ್ಯಾನ ಉತ್ತಮ ಜೀವನ ರೂಪಿಸುತ್ತದೆ. ಇದರಿಂದ ಮನಸ್ಸಿಗೆ ಶಾಂತಿ ನೀಡುತ್ತದೆ. ಜೀವನದಲ್ಲಿ ತ್ಯಾಗಿಗಳ ಸೇವೆ ಮಾಡಲು ಅವಕಾಶ ಸಿಗುವುದು ತೀರಾ ವಿರಳ. ಧರ್ಮದ ಏಳ್ಗೆ, ಉಳಿವಿಗಾಗಿ ಸರ್ವಸ್ವವನ್ನು ತ್ಯಾಗ ಮಾಡುವ ತ್ಯಾಗಿಗಳ ಸೇವೆ ಮಾಡುವುದು ಹಾಗೂ ಅವರನ್ನು ಚೆನ್ನಾಗಿ ನೋಡಿಕೊಳ್ಳುವುದು ಧರ್ಮದ ಪ್ರತಿಯೊಬ್ಬರ ಕರ್ತವ್ಯವಾಗಿದೆ. ಇಂತಹ ಅಧಿವೇಶನ, ಸಮ್ಮೇಳನ ಮೂಲಕ ಜಿನವಾಣಿ ಜನರಿಗೆ ಮುಟ್ಟಿಸುವ ಕೆಲಸ ಆಗುತ್ತಿರುವುದು ಶ್ಲಾಘನೀಯ ಎಂದರು.

ನಮೋಸ್ತು ಶಾಸನ ಸೇವಾ ಸಮಿತಿ ರಾಜ್ಯ ಸಮಿತಿ ಪ್ರಮುಖರಾದ ಡಿ.ತೇಜಸ್ವಿನಿ ಮಾತನಾಡಿ, ನಮೋಸ್ತು ಶಾಸನ ಸೇವೆಯನ್ನು ಪ್ರತಿಯೊಬ್ಬರು ಜೀವನದಲ್ಲಿ ರೂಢಿಸಿಕೊಳ್ಳಬೇಕು. ಆತ್ಮ ಕಲ್ಯಾಣ, ಆತ್ಮಶುದ್ಧಿಗೆ ನಮೋಸ್ತು ಶಾಸನ ಸೇವೆ ಮಾಡಬೇಕು.

Advertisement

ಅಧಿವೇಶನದಲ್ಲಿ ಲೋಕಾರ್ಪಣೆಗೊಂಡ ಗ್ರಂಥಗಳು ಸಂಶೋಧನಾತ್ಮಕವಾಗಿವೆ. ಗ್ರಂಥಗಳ ಮೂಲ ಕತೃìಗಳು ಧರ್ಮ ಸಂಶೋಧನೆಯಲ್ಲಿ ತೊಡಗಿ ಗ್ರಂಥ ರಚಿಸಿದ್ದಾರೆ. ಆ ಗ್ರಂಥಗಳನ್ನು ಇಲ್ಲಿನ ಲೇಖಕರು ಕನ್ನಡಕ್ಕೆ ಅನುವಾದ ಮಾಡಿದ್ದು, ಮೂಲ ಗ್ರಂಥಗಳಿಗೆ ಯಾವುದೇ ಅಪಾರ್ಥವಾಗದಂತೆ ಜಾಗೃತಿ ವಹಿಸಲಾಗಿದೆ. ಈ ಗ್ರಂಥಗಳ ಅಧ್ಯಯನ ಮಾಡಬೇಕಿದೆ ಎಂದು ಹೇಳಿದರು.

ಸಾಧ್ವಿರತ್ನ ಶ್ರಮಣಿ ಗಣಿನಿ ಆಯಿìಕಾ 105 ವಿಶಾಶ್ರೀ ಮಾತಾಜಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ತ್ಯಾಗಿ ಸೇವಾ ಪರಸ್ಕಾರ ಸೀÌಕರಿಸಿದ ಡಿ.ಸುರೇಂದ್ರಕುಮಾರ ಧರ್ಮ ಕುರಿತು ಮಾತನಾಡಿದರು.

ಇಲ್ಲಿನ ಮಹಾವೀರ ಗಲ್ಲಿಯ ಶಾಂತಿನಾಥ ಭವನದಿಂದ ಗಬ್ಬೂರಿನ ಶ್ರೀ ಆದಿನಾಥ ಶ್ವೇತಾಂಬರ ಜೈನ ಮಂದಿರದವರೆಗೆಜಿನವಾಣಿ ಶೋಭಯಾತ್ರೆ ನಡೆಯಿತು. ವಿವಿಧ ಕಲಾತಂಡಗಳು, ಜೈನ ಧರ್ಮದ ಬಾಂಧವರು ಶೋಭಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಡಿ.ಸುರೇಂದ್ರಕುಮಾರ ಹಾಗೂ ಆನಿತಾ ಡಿ.ಸುರೇಂದ್ರಕುಮಾರ, ಪಡಂಗಡಿ ಹೆಗ್ಡೆ, ಹರಿಶ್ಚಂದ್ರ ಜೈನ್‌, ಲಕ್ಷ್ಮೀ ಶ್ವರ ಕ್ಷೇತ್ರಪಾಲ ಬರಿಗಾಲಿ, ಜಯಲಕ್ಷ್ಮಿ ಪಾರ್ಶ್ವನಾಥ, ನಂದರಾಣಿ ಪಾಟೀಲ ಅವರಿಗೆ ತ್ಯಾಗಿ ಸೇವಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.

ಸಯಮ ದೇಶನಾ, ಸಮಯ ದೇಶನಾ, ಝಾಯಜ ಯಣ ಹಾಗೂ ಛಹಢಾಲ ಗ್ರಂಥಗಳ ಲೋಕಾರ್ಪಣೆ ಮಾಡಲಾಯಿತು. ಅಧಿವೇಶನಕ್ಕೆ ಸಹಕರಿಸಿದ ಗಣ್ಯರಿಗೆ ಸನ್ಮಾನಿಸಲಾಯಿತು. ಬ್ರಹ್ಮಚಾರಿ ಅಕ್ಷಕುಮಾರ, ಪ್ರಮುಖರಾದ ಮಹಾವೀರ ಸೂಜಿ, ದತ್ತಾ ಡೋರ್ಲೆ, ಶಾಂತಿನಾಥ ಹೋತಪೇಟೆ, ವಿಮಲ ತಾಳಿಕೋಟಿ, ವಿನೋದ ಬಾಕ್ಲಿವಾಲಾ, ಪ್ರವೀಣಚಂದ್ರ ಜೈನ್‌, ಡಿ.ಆರ್‌.ಶಹಾ, ತ್ರಿಶಿಲಾ ಮಾಲಗತ್ತಿ ಸೇರಿದಂತೆ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next