Advertisement

ಸ್ವಾತಂತ್ರ್ಯಾಹೆಸರಿನಲ್ಲಿ ಸ್ವೇಚ್ಛಾಚಾರ ಬೇಡ

09:59 AM Aug 19, 2018 | Team Udayavani |

ಕಲಬುರಗಿ: ಸಾರ್ವಜನಿಕ ಸ್ಥಳಗಳಲ್ಲಿ ನಮ್ಮ ವರ್ತನೆಗಳು ಮಿತಕಾರಿಯಾಗಿಬೇಕು. ಸ್ವಾತಂತ್ರ್ಯದ ಹೆಸರಿನಲ್ಲಿ ಸ್ವೇಚ್ಛಾಚಾರ ಮಾಡಬಾರದು. ಇದು ಸಮಾಜದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಉಪಕಾರ ಮಾಡಿದ ಫಲ ಜೀವನದಲ್ಲಿ ತಿರುಗಿ ಬಂದೆ ಬರುತ್ತದೆ. ಅದಕ್ಕಾಗಿ ನಾವು
ಕಾಯಬೇಕು ಎಂದು ಬೆಂಗಳೂರಿನ ಡಾ| ಡಿ.ಎಚ್‌ ರಾವ್‌ ಹೇಳಿದರು.

Advertisement

ಶನಿವಾರ ನಗರದ ಅಪ್ಪಾ ಪಬ್ಲಿಕ್‌ ಶಾಲೆ ಆವರಣದ ಶರಣಬಸವೇಶ್ವರ ಶತಮಾನೋತ್ಸವ ಸಭಾಂಗಣದಲ್ಲಿ ಶರಣಬಸವ ವಿಶ್ವವಿದ್ಯಾಲಯದಿಂದ ಹಮ್ಮಿಕೊಂಡಿರುವ ಮೂರು ವಾರಗಳ ಇಂಡಕ್ಷನ್‌ ಪ್ರೋಗ್ರಾಂ ತರಬೇತಿ ಕಾರ್ಯಕ್ರಮದಲ್ಲಿ ಮಾನವೀಯ ಮೌಲ್ಯಗಳ ಕುರಿತು ಅವರು ಉಪನ್ಯಾಸ ನೀಡಿದರು.

ವಿದ್ಯಾರ್ಥಿಗಳು ಚಿಕ್ಕಂದಿನಲ್ಲಿಯೇ ಗುರು-ಹಿರಿಯರನ್ನು ಗೌರವಿಸುವ ಗುಣಗಳನ್ನು ಅಳವಡಿಸಿಕೊಂಡು ಸಮಾಜದಲ್ಲಿ ಮಾದರಿ ವ್ಯಕ್ತಿಗಳಾಗುವ ಪ್ರಯತ್ನ ಮಾಡಬೇಕು. ಇದಕ್ಕಾಗಿ ಉತ್ತಮ ಹವ್ಯಾಸ ರೂಢಿಸಿಕೊಳ್ಳುವುದು ಅಗತ್ಯವಾಗಿದೆ. ಯಾವುದೇ ಸಂದರ್ಭದಲ್ಲಿ ಯಾವುದಾದರೂ ರೀತಿಯಿಂದ
ಯಾರಾದರೂ ಉಪಕಾರ ಮಾಡಿದರೆ ಅವರಿಗೆ ತಿರುಗಿ ಉಪಕಾರ ಮಾಡುವ ಮನೋವೃತ್ತಿ ಬೆಳಸಿಕೊಳ್ಳಿ ಎಂದು ಸಲಹೆ ನೀಡಿದರು.

ಸಣ್ಣ ಕೆಲಸಗಳಿಗೆ ಸಹಾಯ ಮಾಡಿದವರಿಗೂ ಮರಳಿ ಧನ್ಯವಾದ ಹೇಳಬೇಕು. ಅದು ಯಾವುದೇ ವ್ಯಕ್ತಿಯೇ ಆಗಿರಲಿ. ಇದರಿಂದ ಅವರಲ್ಲಿ ಇನ್ನಷ್ಟು ಸೇವೆ ಮಾಡುವ ಹುಮ್ಮಸ್ಸು ಬರುತ್ತದೆ. ಎಲ್ಲರನ್ನು ಗೌರವ ಭಾವದಿಂದ ಆದರಿಸಬೇಕು. ಸಾಮಾನ್ಯ ವ್ಯಕ್ತಿಗಳಿಂದ ಹಿಡಿದು ಸೆಲಿಬ್ರಿಟಿಗಳವರೆಗೆ ಎಲ್ಲರೂ ಮನುಷ್ಯರೇ ಆಗಿರುತ್ತಾರೆ.

ಆದ್ದರಿಂದ ಅವರಲ್ಲಿ ಜಾತಿ, ಧರ್ಮ, ವರ್ಣಗಳ ಆಧಾರದ ಮೇಲೆ ಭೇದ-ಭಾವ ಮಾಡಬಾರದು ಎಂದು ನುಡಿದರು. ಶಿಸ್ತು, ತಾಳ್ಮೆ, ಶೃದ್ಧೆಯಿಂದ ಕಾರ್ಯ ಮಾಡಿ ಅವು ನಿಶ್ಚಿತ ಗುರಿ ಮುಟ್ಟುವಂತೆ ನೋಡಿಕೊಳ್ಳಬೇಕು. ಬಿಡುವಿನ ವೇಳೆಯಲ್ಲಿ ಒಳ್ಳೆಯ ಪುಸ್ತಕಗಳನ್ನು ಓದುವುದು, ಯೋಗ,
ಪ್ರಾಣಾಯಾಮ, ಧ್ಯಾನ ಮಾಡುವುದು ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಸಹಕಾರಿ ಎಂದು ಹೇಳಿದರು.

Advertisement

ಸಹ ಕುಲಪತಿ ಡಾ| ವಿ.ಡಿ. ಮೈತ್ರಿ, ಡೀನ್‌ ಡಾ| ಲಿಂಗರಾಜ ಶಾಸ್ತ್ರೀ, ವಿಶ್ವವಿದ್ಯಾಲಯದ ಸ್ನಾತಕ ಪದವಿಯ ಬೋಧಕ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next