Advertisement

ನಟ-ನಟಿಯರ ಪ್ರಚಾರಕ್ಕೆ ಮರುಳಾಗಿ ಮತ ನೀಡಬೇಡಿ

05:21 PM May 06, 2018 | |

ಮೈಸೂರು: ಸಿನಿಮಾ ಹಾಗೂ ಕಿರುತೆರೆ ನಟ – ನಟಿಯರು ಯಾರ ಪರ ವಾಗಿಯೂ ಪುಕ್ಕಟ್ಟೆಯಾಗಿ ಚುನಾವಣಾ ಪ್ರಚಾರ
ಮಾಡುತ್ತಿಲ್ಲ, ಹೀಗಾಗಿ ನಟ- ನಟಿಯರನ್ನು ನೋಡಿ ಮತ ಹಾಕಬೇಡಿ ಎಂದು ನಟ ಹಾಗೂ ಬೆಂಗಳೂರಿನ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ವೆಂಕಟ್‌ ಮನವಿ ಮಾಡಿದರು.

Advertisement

ಮತದಾರರು ಯಾವುದೇ ನಟ-ನಟಿಯರ ಮುಖ ನೋಡಿ ಯಾರಿಗೂ ಮತ ಹಾಕಬೇಡಿ, ಚುನಾ ವಣೆ ಮುಗಿದು ನಾಳೆ ಯಾವುದೇ ಸಮಸ್ಯೆ ಎದುರಾದರೆ ನಟ-ನಟಿ ಯರು ಬಂದು ಸಮಸ್ಯೆ ಬಗೆಹರಿಸಲ್ಲ. ನಟ- ನಟಿಯರು ಹಣವಿಲ್ಲದೆ ಯಾರ ಪರವಾಗಿಯೂ ಪ್ರಚಾರ ನಡೆಸುತ್ತಿಲ್ಲ,  ಹಣಕ್ಕಾಗಿ ಚುನಾವಣಾ ಪ್ರಚಾರ ನಡೆಸುವ ಕಲಾವಿದರಿಂದ ರಾಜ್ಯ ಹಾಳಾಗಲಿದೆ ಎಂಬು ದನ್ನು ಆಲೋಚನೆ ಮಾಡುವುದಿಲ್ಲ ಎಂದರು.

ಅಲ್ಲದೆ ಜನಪರವಾಗಿ ಕೆಲಸ ಮಾಡುವ ರಾಜಕಾರಣಿಗಳು ಬೇರೆ ಯವರನ್ನು ತೋರಿಸಿ ಮತ ಕೇಳುವುದಿಲ್ಲ. ಮತದಾರರು ಹಣ-ಆಮಿಷ ಗಳಿಗೆ ಮತವನ್ನು ಮಾರಿಕೊಳ್ಳದೆ, ಚುನಾವಣೆಯಲ್ಲಿ ತನ್ನತನವನ್ನು ಉಳಿಸಿಕೊಳ್ಳುವ ಅಭ್ಯರ್ಥಿಗೆ ಮತಹಾಕಿ ಎಂದು ಶನಿವಾರ ಸುದ್ದಿಗೋಷ್ಠಿ ಯಲ್ಲಿ ಒತ್ತಾಯಿಸಿದರು.

ನಾನು ಖರ್ಚು ಮಾಡಲ್ಲ: ಸಮಾಜ ಸೇವೆಯ ಮೂಲಕ ಚಿತ್ರರಂಗಕ್ಕೆ ಬಂದ ತಾವು, ಇದೀಗ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ. ಚುನಾವಣಾ ಆಯೋಗ ಪ್ರತಿಯೊಬ್ಬ ಅಭ್ಯರ್ಥಿಗೆ ಚುನಾವಣೆಯಲ್ಲಿ 28 ಲಕ್ಷ ಖರ್ಚು ಮಾಡುವ ಮಿತಿ ನಿಗದಿಗೊಳಿಸಿದೆ. ಆದರೆ ಚುನಾವಣೆಯಲ್ಲಿ ಇದಕ್ಕಿಂತಲೂ ಹೆಚ್ಚು ಹಣ ಖರ್ಚು ಮಾಡಲಿದ್ದು, ಪ್ರಚಾರಕ್ಕೆ ಇಷ್ಟೊಂದು ಹಣಬೇಕೆ?. 

ಆದರೆ ತಾವು ವೇದಿಕೆ ಹಾಕಿ ಸಬೆ-ಸಮಾರಂಭ ನಡೆಸುವುದಿಲ್ಲ, ಹಣ ಕೊಟ್ಟು ಚಪ್ಪಾಳೆ, ಶಿಳ್ಳೆ ಹೊಡೆಸಿ ಕೊಳ್ಳುವುದಿಲ್ಲ, ಮತದಾರರಿಗೆ ಯಾವುದೇ ಆಮಿಷಗಳನ್ನು ನೀಡುವುದಿಲ್ಲ. ನನ್ನ ಮೇಲೆ ನಂಬಿಕೆ, ವಿಶ್ವಾಸವಿಟ್ಟು ಮತ ನೀಡಿ ಗೆಲ್ಲಿಸಿದರೆ ಕ್ಷೇತ್ರದಲ್ಲಿ ಕೆಲಸ ಮಾಡುತ್ತೇನೆ. ಒಂದೊಮ್ಮೆ ಚುನಾವಣೆಯಲ್ಲಿ ಸೋತರೆ ಮುಂದೆ ಮಂಡ್ಯದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡುತ್ತೇನೆ ಎಂದರು.

Advertisement

ಪ್ರಕಾಶ್‌ ರೈ ವಿರುದ್ಧ ಕಿಡಿ
ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಮಾತನಾಡುವ ಯೋಗ್ಯತೆ, ಅರ್ಹತೆ ಪ್ರಕಾಶ್‌ ರೈಗಿಲ್ಲ, ಸಿನಿಮಾಗಳಲ್ಲಿ ಹೇಳುವ ಡೈಲಾಗ್‌ ಗಳನ್ನು ಬೇರೆ ಕಡೆ ಹೇಳಬೇಡ ಎಂದು ವೆಂಕಟ್‌ ಕಿಡಿಕಾರಿದರು. ಏಕವಚನದಲ್ಲಿ ಪ್ರಕಾಶ್‌ ರೈ ಅವರನ್ನು ನಿಂದಿಸಿದ ವೆಂಕಟ್‌,
ಸಿನಿಮಾದಲ್ಲಿ ಯಾರೋ ಬರೆದು ಕೊಡುವ ಡೈಲಾಗ್‌ ಹೇಳಿಕೊಂಡು ಚಪ್ಪಾಳೆ ಗಿಟ್ಟಿಸಿಕೊಳ್ಳೋ ನಿನಗೆ, ಪ್ರಧಾನಿ ಬಗ್ಗೆ ಮಾತನಾಡೋ ಯೋಗ್ಯತೆ ಇದೆಯಾ? ರಾಜ್ಯಕ್ಕೆ ಹಾಗೂ ಜನರಿಗೆ ನೀನು ಏನು ಮಾಡಿದ್ಯಾ? ಜನ ಮನರಂಜನೆಗಾಗಿ ನಿನ್ನನ್ನು ನೋಡ್ತಾರೆ, ಹೀಗೆ ಮಾತನಾಡುವುದು ಸರಿಯಲ್ಲ ಎಂದು ಹರಿಹಾಯ್ದರು. ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿಶ್ವವೇ ಹೆಮ್ಮೆಪಡುವ
ವ್ಯಕ್ತಿತ್ವ ಇದೆ. ಆದರೆ ಸಿನಿಮಾದಲ್ಲಿ ಅವಕಾಶ ವಿಲ್ಲವೆಂದು ಗಣ್ಯರನ್ನು ನಿಂದಿಸಿ ಪ್ರಚಾರ ಗಿಟ್ಟಿಸಿಕೊಂಡು, ಚಿತ್ರರಂಗ ದಲ್ಲಿ ಬೇಡಿಕೆ ಹೆಚ್ಚಿಸಿ ಕೊಳ್ಳಬೇಡ. ಸಿನಿಮಾದಲ್ಲಿ ವಿಲನ್‌ ಆಗಿರುವ ನೀನು, ನಿಜ ಜೀವನದಲ್ಲೂ ವಿಲನ್‌ ಆಗಿದ್ದೀಯಾ. ಒಳ್ಳೆಯ ಡೈಲಾಗ್‌ ಬರೆಯುವವರನ್ನು ನೇಮಿಸಿ ಕೊಂಡು, ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ, ಇನ್ನಷ್ಟು ಪ್ರಸಿದ್ಧನಾಗುತ್ತೀಯಾ ಎಂದು ಟೀಕಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next