Advertisement

ಭಾವನಾತ್ಮಕ ವಿಚಾರಗಳಿಗೆ ಮತ ನೀಡಬೇಡಿ

08:49 AM Oct 31, 2018 | Harsha Rao |

ಕುಂದಾಪುರ: ಹಿಂದುತ್ವದ ರಕ್ಷಣೆಯಲ್ಲಿ ನಾನು ಬಿಜೆಪಿಗಿಂತ ಒಂದು ಹೆಜ್ಜೆ ಮುಂದಿದ್ದೇನೆ. ಕರಾವಳಿಯಲ್ಲಿ ಹಿಂದುತ್ವ, ಧರ್ಮದ ಹೆಸರಿನಲ್ಲಿ ಸಂಘರ್ಷ ಹುಟ್ಟು ಹಾಕಲಾಗುತ್ತಿದ್ದು, ಅಮಾಯಕರ ಸಾವಿನಲ್ಲಿ ಅಧಿಕಾರದ ಗದ್ದುಗೆ ಏರಲಾಗುತ್ತಿದೆ. ಇದರ ಬದಲು ಅಭಿವೃದ್ಧಿ ಆಧಾರದಲ್ಲಿ ಮತ ಚಲಾಯಿಸಿ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

Advertisement

ಅವರು ಮಂಗಳವಾರ ತ್ರಾಸಿ ಕೊಂಕಣ ಖಾರ್ವಿ ಸಭಾಭವನದಲ್ಲಿ ಜೆಡಿಎಸ್‌ ಕಾಂಗ್ರೆಸ್‌ ಮೈತ್ರಿಕೂಟದ ಅಭ್ಯರ್ಥಿ ಮಧು ಬಂಗಾರಪ್ಪ ಪರವಾಗಿ ಚುನಾವಣಾ ಪ್ರಚಾರ ನಡೆಸಿದರು.

ಪರಿಹಾರಕ್ಕೆ ಬದ್ಧ
ಕೇಂದ್ರದ ತೀರ್ಮಾನಗಳಿಂದಾಗಿ ಮೀನುಗಾರರಿಗೆ ಸೀಮೆ ಎಣ್ಣೆ ಪಡೆಯಲು ತೊಂದರೆಯಾಗಿದೆ. ಸಬ್ಸಿಡಿ ಸೀಮೆಎಣ್ಣೆ /ಡೀಸೆಲ್‌ಗೆ ಶಾಶ್ವತ ಪರಿಹಾರ, ಮೀನುಗಾರರ ಸಮಸ್ಯೆ, ಕೋಲ್ಡ್‌ ಸ್ಟೋರೇಜ್‌ಗೆ ಆರ್ಥಿಕ ನೆರವು, ಮೀನುಗಾರರ ಸಮಸ್ಯೆ ಬಗೆ ಹರಿಸಲು ಸಲಹೆ ಕೊಡಿ, ಪರಿಹಾರಕ್ಕೆ ಮೈತ್ರಿ ಸರಕಾರ ಬದ್ಧ. ಈ ಕ್ಷೇತ್ರದ ಸಂಸದರಾಗಿದ್ದ ಅಪ್ಪ – ಮಗ ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದರು.

ಕೆಲಸ ಮಾಡದಿದ್ದರೆ ಬರಲಾರೆ
ಗೋಪಾಲ ಪೂಜಾರಿ ಕೇಳಿದ ಬಂದರು ಅಭಿವೃದ್ಧಿಗೆ ಅನುದಾನ ನೀಡಬಹುದು. ಮುಂದಿನ ಚುನಾವಣೆ ಒಳಗೆ ಮೀನುಗಾರರ ಸಮಸ್ಯೆ ಬಗೆ ಹರಿಸದಿದ್ದರೆ ಮರಳಿ ಮತಯಾಚನೆಗೆ ಬರುವುದಿಲ್ಲ ಎಂದರು.
ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ಸಚಿವ ವೆಂಕಟ್ರಾವ್‌ ನಾಡಗೌಡ ಮಾತನಾಡಿದರು.

ಡಾ| ಜಯಮಾಲಾ, ವಿಧಾನ ಎಸ್‌.ಎಲ್‌. ಭೋಜೇಗೌಡ, ಪ್ರಮೋದ್‌ ಮಧ್ವರಾಜ್‌, ವಿನಯ ಕುಮಾರ್‌ ಸೊರಕೆ, ರಮಾನಾಥ ರೈ, ಗೋಪಾಲ ಭಂಡಾರಿ ಕಾರ್ಕಳ, ಜನಾರ್ದನ ತೋನ್ಸೆ, ಅಬ್ದುಲ್‌ ಗಫ‌ೂರ್‌, ಡಾ| ದೇವಿಪ್ರಸಾದ್‌ ಶೆಟ್ಟಿ ಬೆಳಪು, ರಾಜಶೇಖರ ಕೋಟ್ಯಾನ್‌, ಮಾಣಿಗೋಪಾಲ, ಮಹ್ಮದ್‌ ವಿಟ್ಲ, ಮಮತಾ ಗಟ್ಟಿ ಬಂಟ್ವಾಳ, ರಾಜು ಪೂಜಾರಿ ಬೈಂದೂರು, ಜಿ.ಎ. ಬಾವಾ, ಯೋಗೀಶ್‌ ಶೆಟ್ಟಿ, ರವಿ ಶೆಟ್ಟಿ ಇದ್ದರು.

Advertisement

ಮರಳು ದಂಧೆಗೆ ಕ್ರಮ
2006ರಲ್ಲಿ ನಾನು ಮುಖ್ಯಮಂತ್ರಿಯಾಗಿದ್ದಾಗ ಸಮಸ್ಯೆ ಇರಲಿಲ್ಲ. ಅನಂತರ ಬಂದ ಬಿಜೆಪಿ ಸರಕಾರ ಅದನ್ನು ದಂಧೆಯಾಗಿಸಿತು. ಕೇಂದ್ರದ ನೀತಿ ನಿಯಮದಿಂದಾಗಿ ಮರಳು ತೆಗೆಯುವುದು ಸುಲಭವಲ್ಲ. ಸಾಂಪ್ರದಾಯಿಕ ಮರಳುಗಾರಿಕೆಯ 93 ಕುಟುಂಬಗಳಿಗೆ ಅನುಮತಿ ಕೊಡಲು ಜಿಲ್ಲಾಡಳಿತ ಸಿದ್ಧವಿದೆ. ಆದರೆ ಬಿಜೆಪಿ ಯವರು 170 ಮಂದಿಗೆ ನೀಡಬೇಕೆಂದು ಕೇಳುತ್ತಿದ್ದಾರೆ. ಮರಳು ಸಮಸ್ಯೆಗೆ ತೆರೆ ಎಳೆಯಲು ಕಠಿನ ಕ್ರಮ ಕೈಗೊಳ್ಳುವ ಚಿಂತನೆ ನಡೆದಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next