ಇದನ್ನು ಕೈಬಿಡಬೇಕು ಎಂದು ಸುಪ್ರೀಂಕೋರ್ಟ್ ಬುಧವಾರ ಸೂಚಿಸಿದೆ. ನ್ಯಾಯಮೂರ್ತಿಗಳಾದ ಮದನ್ ಬಿ ಲೋಕೂರ್ ಮತ್ತು ದೀಪಕ್ ಗುಪ್ತಾ ನೇತೃತ್ವದ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದ್ದು, ಈ ವಿಧಾನವನ್ನು ಕರ್ನಾಟಕ, ಪಶ್ಚಿಮ ಬಂಗಾಳ,ಜಾರ್ಖಂಡ್ ಮತ್ತು ಒಡಿಶಾದಲ್ಲಿ ಬಳಸಲಾಗುತ್ತಿದೆ
ಎಂದು ಹೇಳಿದೆ.
Advertisement
ಈಗಾಗಲೇ ಟೆಂಡರ್ ಮೂಲಕ ಖರೀದಿಸಲಾದ ಮೊಳೆಗಳನ್ನು ಬಳಸದಿರಲು ನಿರ್ಧರಿಸಲಾಗಿದೆ. ಮುಂದಿನ ದಿನಗಳಲ್ಲಿ ಇಂತಹ ಸಾಮಗ್ರಿಗಳನ್ನು ಬಳಸುವುದಿಲ್ಲ ಎಂದು ಕರ್ನಾಟಕಪರ ವಕೀಲರು ಕೋರ್ಟ್‌ಗೆ ಹೇಳಿದ್ದಾರೆ. ಅಲ್ಲದೆ, ಈಗಾಗಲೇ ಕರ್ನಾಟಕ ಇಂತಹ ಸಾಮಗ್ರಿಗಳಖರೀದಿಗೆ ಕರೆದಿರುವ ಟೆಂಡರ್‌ಗೆ ಕೋರ್ಟ್ ತಡೆ ನೀಡಿದೆ. ಮೊಳೆಗಳು ಮತ್ತು ಬೆಂಕಿಚೆಂಡುಗಳನ್ನು ಬಳಸುತ್ತಿದ್ದ ಕಡೆ ಪರ್ಯಾಯ ವಿಧಾನಗಳನ್ನು ಬಳಸಬೇಕಿದೆ. ಇದಕ್ಕಾಗಿ ರಾಜ್ಯಗಳು ಸೂಕ್ತ ಯೋಜನೆ ರೂಪಿಬೇಕು ಎಂದಿರುವ ಕೋರ್ಟ್, ಆಗಸ್ಟ್ 7 ರಂದು ಪ್ರಕರಣದ ವಿಚಾರಣೆಯನ್ನು ನಿಗದಿಸಿದೆ.