Advertisement
ತಾಲೂಕಿನ ಕೈವಾರ ಹೋಬಳಿ ಜಂಗಮಶಿಗೇಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘ, ಎಂ.ವಿ.ಜೆ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಜೆ.ಎಂ.ಡಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಶಿಬಿರಜಂಗಮಶೀಗೆಹಳ್ಳಿಯ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ನೂತನವಾಗಿ ನಿರ್ಮಾಣ ಮಾಡಿದ ಬಿಎಂಸಿ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
Related Articles
Advertisement
ಹಾಲಿನಲ್ಲಿ ಅನೇಕ ಶಕ್ತಿ ಇದೆ: ಇಂದು ಮನುಷ್ಯನ ಉತ್ತಮ ಆರೋಗ್ಯಕ್ಕೆ ಹಾಲು ಅತಿ ಮುಖ್ಯವಾಗಿ ಬೇಕಾಗಿದ್ದು, ಹಾಲಿನಲ್ಲಿ ಉತ್ತಮ ಆರೋಗ್ಯಕ್ಕೆ ಬೇಕಾದಂತೆ ಅನೇಕ ರೀತಿಯ ಪೋಷಾಕಂಶಗಳಿವೆ. ಕೇಂದ್ರ ಸರಕಾರ ವಿದೇಶಿ ಹಾಲು ಆಮುದಿಗೆ ತಾತ್ಕಾಲಿಕವಾಗಿ ತಡೆ ನೀಡಿರುವುದು ಸಂತಸದ ವಿಷಯವಾಗಿದೆ ಎಂದರು. ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಜಂಗಮಶಿಗೇಹಳ್ಳಿ ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶಿಬಿರದ ಸದುಪಯೋಗ ಪಡೆದುಕೊಂಡರು.
ಕರ್ನಾಟಕ ಹಾಲು ಮಂಡಳಿ ಒಕ್ಕೂಟದ ನಿರ್ದೇಶಕ ಆರ್.ಶ್ರೀನಿವಾಸ್, ಮಹಿಳಾ ಕಾಲೇಜಿನ ಉಪನ್ಯಾಸಕ ಡಾ.ಎಂ.ಎನ್ ರಘು, ಜಂಗಮಶೀಗೇಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಮುನಿನಾರಾಯಣಪ್ಪ, ಕೋಚಿಮೂಲ್ ವ್ಯವಸ್ಥಾಪಕ ನಿರ್ದೇಶಕ ಡಾ.ಎಚ್.ವಿ.ತಿಪ್ಪಾರೆಡ್ಡಿ, ಪ್ರಭಾರ ವ್ಯವಸ್ಥಾಪಕ ಬಿ.ಶಿವರಾಜ್, ಉಪವ್ಯವಸ್ಥಾಪಕ ಎನ್.ನಾಗರಾಜ್, ಗ್ರಾಪಂ ಸದಸ್ಯ ಜೆ.ಎಂ.ದೇವರಾಜ್, ನಾರಾಯಣಮ್ಮ, ಮುನಿನಾರಾಯಣಪ್ಪ, ಸುನಂದಮ್ಮ, ನಾಗರಾಜ್ ಸೇರಿದಂತೆ ಎಲ್ಲಾ ಹಾಲು ಉತ್ಪಾದಕರ ಸಹಾಕರ ಸಂಘದ ಸದಸ್ಯರು ಹಾಗೂ ಮತಿತ್ತರರು ಉಪಸ್ಥಿತರಿದ್ದರು.