Advertisement

“ಅಂಬಿ ಅಂತ್ಯಕ್ರಿಯೆ ವಿಷಯ ರಾಜಕಾರಣಕ್ಕೆ ಬಳಸಬೇಡಿ’

02:36 AM Mar 15, 2019 | Team Udayavani |

ಮಂಡ್ಯ/ಪಾಂಡವಪುರ: ದಿ|ಅಂಬರೀಷ್‌ ಅವರ ಪಾರ್ಥಿವ ಶರೀರವನ್ನು ಮಂಡ್ಯಕ್ಕೆ ತೆಗೆದುಕೊಂಡು ಹೋದ ಬಗ್ಗೆ  ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಮಂಡ್ಯ ಲೋಕಸಭಾ ಸ್ಪರ್ಧಾಕಾಂಕ್ಷಿ ಸುಮಲತಾ, “ಅಂಬರೀಷ್‌ ಪಾರ್ಥಿವ ಶರೀರವನ್ನು ಮಂಡ್ಯಕ್ಕೆ ತಂದದ್ದು ಮತ್ತು ಅಂತ್ಯಕ್ರಿಯೆಯ ವಿಷಯವನ್ನು ರಾಜಕಾರಣಕ್ಕೆ ಎಳೆದು ತರಬಾರದು’ ಎಂದು ಹೇಳಿದರು.

Advertisement

ಯಾರೇ ಆದರೂ ಆ ರೀತಿ ಮಾತನಾಡಬಾರದು. ಅದು ತಪ್ಪು. ಅದು ತುಂಬಾ ದುರ್ಬಲವಾದ ಮಾತು. ಈ ವಿಚಾರ ಮುಂದಿಟ್ಟು ಚುನಾವಣೆ  ಮಾಡುವುದು, ಅದರ ಬಗ್ಗೆ ಮಾತನಾಡುವುದು ಯಾರಿಗೂ ಒಳ್ಳೆಯದಲ್ಲ. ನನಗೆ ಅದರ ಬಗ್ಗೆ ಮಾತನಾಡಲು ಇಷ್ಟವಿಲ್ಲ ಎಂದರು. ಮಂಡ್ಯಕ್ಕೆ ಅಂಬಿ ಪಾರ್ಥಿವ ಶರೀರ ತರುವುದು ಬೇಡ ಎಂದವರೇ ಈಗ ಮಂಡ್ಯ ಮಣ್ಣಿನ ಬಗ್ಗೆ ಮಾತನಾಡುತ್ತಿದ್ದಾರೆಂಬ ಸಿಎಂ ಹೇಳಿಕೆಯ ಪ್ರಶ್ನೆಗೆ, ಅವರು ಯಾರನ್ನು ಉದ್ದೇಶಿಸಿ ಹಾಗೆ ಮಾತನಾಡಿದ್ದಾರೋ ನನಗೆ ಗೊತ್ತಿಲ್ಲ ಎಂದರು.

“ಕೈ ಪಕ್ಷ ನನಗೆ ಮೋಸ ಮಾಡ್ತಿಲ್ಲ, ಪಕ್ಷಕ್ಕೆ ಮೋಸವಾಗ್ತಿದೆ’
ಮೇಲುಕೋಟೆ: ಕಾಂಗ್ರೆಸ್‌ ಪಕ್ಷ ನನಗೆ ಮೋಸ ಮಾಡುತ್ತಿಲ್ಲ. ಪಕ್ಷ ಮತ್ತು ಕಾರ್ಯಕರ್ತರಿಗೆ ಮೋಸವಾಗುತ್ತಿದೆ ಎಂದು ಮಂಡ್ಯ ಲೋಕಸಭಾ ಸ್ಪರ್ಧಾಕಾಂಕ್ಷಿ ಸುಮಲತಾ ಹೇಳಿದರು.  ಇಲ್ಲಿನ ಪುರಾಣ ಪ್ರಸಿದ್ಧ ಶ್ರೀ ಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ ಅವರು ಕಾಂಗ್ರೆಸ್‌ ಮುಖಂಡರು ನನ್ನ ಜತೆ ಇಲ್ಲದಿದ್ದರೂ ನಾನು ಒಂಟಿ ಅಲ್ಲ. ನನ್ನ ಜತೆ ಜನ ಇದ್ದಾರೆ. ಜನರನ್ನು ನಂಬಿಕೊಂಡು ಚುನಾವಣೆ ಎದುರಿಸುತ್ತಿದ್ದೇನೆ ಎಂದರು.
ಡಿ.ಸಿ.ತಮ್ಮಣ್ಣ ಅವರು ನನಗೆ ಪಕ್ಷಕ್ಕೆ ಬರುವಂತೆ ಆಹ್ವಾನ ಕೊಟ್ಟಿರಲಿಲ್ಲ. ಸಿಎಂ ಕುಮಾರಸ್ವಾಮಿ ಅವರೇ ಅಂಬರೀಷ್‌ ನಮ್ಮ ಪಕ್ಷದಲ್ಲಿರಲಿಲ್ಲ ಎಂದ ಮೇಲೆ ಅವರ ಬಳಿ ಮಾತನಾಡುವುದು ಏನಿದೆ ಎಂದವರು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next