Advertisement
ಅದರಂತೆ ವಿದ್ಯುತ್ ತಂತಿ, ವಿದ್ಯುತ್ ಕಂಬ ಅಥವಾ ಪರಿವರ್ತಕ ಕೇಂದ್ರಗಳಿಗೆ ಚಪ್ಪರ, ಶಾಮಿಯಾನ ಕಟ್ಟುವಂತಿಲ್ಲ. ತೋರಣ, ಪೆಂಡಾಲ್ ಸೀರಿ ಯಲ್ ದೀಪ ಹಾಕುವ ಮುನ್ನ ವಿದ್ಯುತ್ ತಂತಿಗಳ ಬಗ್ಗೆ ಗಮನ ವಿರಬೇಕು. ಗಣೇಶ ಮೂರ್ತಿ ಮೆರವಣಿಗೆ ಯಲ್ಲಿ ರಸ್ತೆ ಬದಿಯ ವಿದ್ಯುತ್ ಮಾರ್ಗಗಳಿದ್ದಲ್ಲಿ ಎಚ್ಚರವಹಿಸಬೇಕು. ಮೆರವಣಿಗೆ ಮಾರ್ಗದ ಬಗ್ಗೆ ಮುಂಚಿತವಾಗಿ ಉಪ ವಿಭಾಗಾಧಿಕಾರಿಗಳಿಗೆ ತಿಳಿಸಿ ಅಗತ್ಯ ನೆರವು ಪಡೆದುಕೊಳ್ಳಬೇಕು. ಸೀರಿಯಲ್ ಲೈಟ್, ದೀಪಗಳನ್ನು ಅಳ ವಡಿಸು ವಾಗ ವಿದ್ಯುತ್ ಕಂಬ ದಿಂದ ಸಂಪರ್ಕ ಪಡೆಯ ಬಾರದು. ವಿದ್ಯುತ್ ಪರಿ ಕರಗಳು ಇರುವ ಜಾಗ ವನ್ನು “ಡೇಂಜರ್ ಜೋನ್’ ಎಂದು ಸೂಚಿಸಲಾಗಿದ್ದು ತುಂಡಾದ ತಂತಿ ಗಳು, ವಿದ್ಯುತ್ ಕಿಡಿ ಕಂಡಲ್ಲಿ ಸಹಾಯ ವಾಣಿ 1912 ಸಂಪರ್ಕಿಸುವಂತೆ ತಿಳಿಸಿದೆ.
Related Articles
Advertisement
ಕಲ್ಯಾಣಿಗಳ ಬಳಿ ಪ್ರಥಮ ಚಿಕಿತ್ಸೆಗಾಗಿ ವ್ಯವಸ್ಥೆ ಗಣೇಶ ವಿಸರ್ಜನೆಗಾಗಿ ವಲಯವಾರು ವ್ಯಾಪ್ತಿಯಲ್ಲಿ ನಿರ್ಮಿಸಿರುವ ಕಲ್ಯಾಣಿಗಳಲ್ಲಿ ಮತ್ತು ತಾತ್ಕಾಲಿಕ ಕೊಳಗಳಲ್ಲಿ ಆರೋಗ್ಯ ಸೇವೆ ನೀಡಲು ಬಿಬಿಎಂಪಿ ಆರೋಗ್ಯವಿಭಾಗವು ತಜ್ಞ ವೈದ್ಯಕೀಯ ಸಿಬ್ಬಂದಿಯೊಂದಿಗೆ ಸಿದ್ಧವಾಗುತ್ತಿದೆ. ಸಣ್ಣ ಪುಟ್ಟ ಗಾಯಗಳು ಸೇರಿದಂತೆ ಇನ್ನಿತರ ವೈದ್ಯಕೀಯ ಆರೈಕೆಗಳನ್ನು ನೀಡಲಾಗುವುದು. ಎಲ್ಲ ಕಲ್ಯಾಣಿಗಳ ಬಳಿಯೂ ಪ್ರಾಥಮಿಕ ಚಿಕಿತ್ಸೆ ನೀಡಲು ಅಗತ್ಯ ಸಿಬ್ಬಂದಿ ಹಾಗೂ ವೈದ್ಯಕೀಯ ಸೇವೆ ವ್ಯವಸ್ಥೆಗೊಳಿಸಲಾಗುತ್ತದೆ. ಆಯಾ ವಲಯದಲ್ಲಿ ವಿಸರ್ಜನೆಯಾಗುವ ಗಣೇಶ ಮೂರ್ತಿ ಹಾಗೂ ಸಾರ್ವಜನಿಕರ ಸಂಖ್ಯೆಯ ಆಧಾರದ ಮೇಲೆ ಅಗತ್ಯಬಿದ್ದರೆ ಹೆಚ್ಚಿನ ಆ್ಯಂಬುಲೆನ್ಸ್ ಹಾಗೂ ವೈದ್ಯಕೀಯ ಸಿಬ್ಬಂದಿಯನ್ನು ನಿಯುಕ್ತಿಗೊಳಿಸಲಾಗುತ್ತದೆ ಎಂದು ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ ಡಾ.ಸೈಯದ್ ಸಿರಾಜುದ್ದೀನ್ ತಿಳಿಸಿದ್ದಾರೆ.
ಗಣೇಶೋತ್ಸವಕ್ಕೆ ಪಾಲಿಕೆ ಎಲ್ಲ ರೀತಿಯಲ್ಲೂ ಸಿದ್ಧವಾಗಿದೆ. ಖರ್ಚು ವೆಚ್ಚಗಳಿಗಾಗಿ ಸುಮಾರು 7 ಕೋಟಿ ರೂ.ಹಣವನ್ನು ಮೀಸಲಿಡಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದ ರೀತಿಯಲ್ಲಿ ಎಚ್ಚರಿಕೆ ವಹಿಸಲಾಗಿದೆ. ವಲಯವಾರು ನೋಡೆಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. –ತುಷಾರ್ ಗಿರಿನಾಥ್, ಬಿಬಿಎಂಪಿ ಮುಖ್ಯ ಆಯುಕ ಎಕ್ಸ್ಪ್ರೆಸ್ ವೇನಲ್ಲಿ ತಗ್ಗಿದ ಸಾವಿನ ಪ್ರಮಾಣ