Advertisement
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಭಾರತದ ಸಂವಿಧಾನದ ಮೂಲ ಆಶಯಗಳಿಗೆ ಬಸವ ತತ್ವವೇ ಅಡಿಗಲ್ಲು. ಹೀಗಾಗಿ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪ್ರತ್ಯೇಕ ಧರ್ಮ ಕುರಿತ ಕಾನೂನುಬದಟಛಿ ಅವಕಾಶದ ಸಂಗತಿಯನ್ನು ಬಸವಾನುಯಾಯಿಗಳು ಮನಗಾಣಿಸಿದ್ದೇವೆಯೇ ವಿನಃ ಅವರ ಮುಂದೆ ನಾವು ಯಾವುದೇ ಸಹಾಯಕ್ಕೆ ಕೈ ಚಾಚಿರಲಿಲ್ಲ. ಸಿದ್ದರಾಮಯ್ಯ ಹಾಗೂ ಅವರ ಸಚಿವ ಸಂಪುಟವೂ ಕಾನೂನು ಬದಟಛಿವಾಗಿ ತಾವು ಮಾಡಬೇಕಾಗಿದ್ದ ಕೆಲಸವನ್ನು ಮಾಡಿದೆ. ಇಡೀವಿದ್ಯಮಾನಕ್ಕೆ ಈಗ ವೋಟು ಗಳಿಕೆಯ ರಾಜಕಾರಣದ ಬಣ್ಣ ಬಳಿಯುವುದು ಬಸವ ತತ್ವಕ್ಕೆ ಮಾಡುವ ಬಹುದೊಡ್ಡ ಅಪಚಾರ ಎಂದು ಪರೋಕ್ಷವಾಗಿ ಸಚಿವ ಡಿ.ಕೆ.ಶಿವಕುಮಾರ್ ಹೇಳಿಕೆಯನ್ನು ಖಂಡಿಸಿದ್ದಾರೆ.