Advertisement

Taliban;3ನೇ ತರಗತಿಗಿಂತ ಹೆಚ್ಚು ಓದಬೇಡಿ: ಮಹಿಳೆಯರಿಗೆ ತಾಲಿಬಾನ್‌ ಆಡಳಿತದ ಫ‌ರ್ಮಾನು

03:44 PM Aug 07, 2023 | Pranav MS |

ಕಾಬೂಲ್‌: ತಾಲಿಬಾನ್‌ ಸರ್ಕಾರ ಅಫ್ಘಾನಿಸ್ತಾನದಲ್ಲಿ ಮಹಿಳೆಯರ ಸ್ವಾತಂತ್ರ್ಯವನ್ನು ದಮನಗೊಳಿಸಿರುವುದು ಹಳೆಯ ವಿಚಾರ. ಇದಕ್ಕೆ ಹೊಸ ಸೇರ್ಪಡೆ ಎಂಬಂತೆ, ಅಫ್ಘಾನಿಸ್ತಾನದ ಹಲವು ಪ್ರಾಂತ್ಯಗಳಲ್ಲಿ 10 ವರ್ಷದ ಮೇಲ್ಪಟ್ಟ ಬಾಲಕಿಯರು ಶಾಲೆಗೆ ಹಾಜರಾಗುವುದನ್ನು ನಿಷೇಧಿಸಿದೆ. ಈ ಮೂಲಕ ಮೂರನೇ ತರಗತಿ ಮೇಲ್ಪಟ್ಟ ಶಿಕ್ಷಣವನ್ನು ಬಾಲಕಿಯರಿಂದ ಕಸಿದುಕೊಂಡಿದೆ.

Advertisement

ಘಜ್ನಿ ಪ್ರಾಂತ್ಯದ ತಾಲಿಬಾನ್‌ ಶಿಕ್ಷಣ ಸಚಿವಾಲಯವು, “10 ವರ್ಷ ಮೇಲ್ಪಟ್ಟ ಬಾಲಕಿಯರಿಗೆ ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಣ ಪಡೆಯಲು ಅವಕಾಶ ಇಲ್ಲ’ ಎಂದು ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ಆದೇಶ ಹೊರಡಿಸಿದೆ. ಈಗಾಗಲೇ ಓದುತ್ತಿರುವ 10 ವರ್ಷದ ಮೇಲ್ಪಟ್ಟ ವಿದ್ಯಾರ್ಥಿನಿಯರನ್ನು ಮನೆಗೆ ಕಳುಹಿಸುವಂತೆ ಸೂಚಿಸಿದೆ.

ಕಳೆದ ವರ್ಷ ಡಿಸೆಂಬರ್‌ನಲ್ಲಿ ತಾಲಿಬಾನ್‌ ಸರ್ಕಾರವು, ಮಹಿಳೆಯರು ಉನ್ನತ ಶಿಕ್ಷಣ ಪಡೆಯುವುದನ್ನು ನಿಷೇಧಿಸಿತ್ತು. ಇದನ್ನು ಖಂಡಿಸಿ ಅಫ್ಘಾನಿಸ್ತಾನದಾದ್ಯಂತ ಮಹಿಳೆಯರು ಬೀದಿಗಿಳಿದು ಹೋರಾಟ ನಡೆಸಿದರು. ಅಲ್ಲದೇ ತಾಲಿಬಾನ್‌ ಸರ್ಕಾರದ ಈ ಕ್ರಮವನ್ನು ಇತರೆ ದೇಶಗಳು ಮತ್ತು ವಿಶ್ವಸಂಸ್ಥೆ ತೀವ್ರವಾಗಿ ಖಂಡಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next