Advertisement

ಪ್ರತಿಸ್ಪರ್ಧಿಗಳ ಪ್ರಚಾರಕ್ಕೆ ತಡೆ ಸಲ್ಲದು: ಡಿಸಿ

01:00 AM Mar 20, 2019 | Team Udayavani |

ಕಾಸರಗೋಡು: ಲೋಕಸಭೆ ಚುನಾವಣೆ ಸಂಬಂಧ ಎದುರಾಳಿ (ವಿಪಕ್ಷ‌)ದ ಅಭ್ಯರ್ಥಿಯ ಪ್ರಚಾರಕ್ಕೆ ತಡೆಯುಂಟು ಮಾಡುವ ಕ್ರಮಗಳಲ್ಲಿ ತಮ್ಮ ಪಕ್ಷದ ಕಾರ್ಯಕರ್ತರು ಮುಂದಾಗುವುದಿಲ್ಲ ಎಂದು ಪ್ರತಿ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ಖಚಿತಪಡಿಸಬೇಕು ಎಂದು ಜಿಲ್ಲಾಧಿಕಾರಿ ಡಾ| ಡಿ.ಸಜಿತ್‌ ಬಾಬು ತಿಳಿಸಿದರು.

Advertisement

ಇಂತಹ‌ ಚಟುವಟಿಕೆಗಳನ್ನು ಯಾರಾದರೂ ನಡೆಸಿದಲ್ಲಿ ಅವರ ವಿರುದ್ಧ ಚುನಾವಣೆ ನೀತಿಸಂಹಿತೆಯ ಕಾನೂನು ಕ್ರಮಗಳನ್ನು ಕೈಗೊಳ್ಳುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ.

ಎದುರಾಳಿ ಅಭ್ಯರ್ಥಿ ಮತ್ತು ಅವರ ಪಕ್ಷಗಳು ನಡೆಸುವ ಸಭೆಗಳು, ಜಾಥಾಗಳು ಇತ್ಯಾದಿಗಳನ್ನು ತಡೆಮಾಡುವುದಿಲ್ಲ ಎಂದು ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಖಚಿತಪಡಿಸಬೇಕು. ರಾಜಕೀಯ ಪಕ್ಷಗಳು, ಕಾರ್ಯಕರ್ತರು, ಬೆಂಬಲಿಗರು ತಮ್ಮ ಪಕ್ಷದ ಕರಪತ್ರಗಳ ವಿತರಣೆ ನಡೆಸುವುದು, ನೇರವಾಗಿ ಲಿಖೀತರೂಪದಲ್ಲಿ ಪ್ರಶ್ನೆ ಎತ್ತುವುದು ನಡೆಸಕೂಡದು. ಇನ್ನೊಂದು ಪಕ್ಷ ನಡೆಸುವ ಸಾರ್ವಜನಿಕ ಸಭೆಗಳಲ್ಲಿ ದಾಂಧಲೆ ನಡೆಸುವ ಯತ್ನ ನಡೆಸಕೂಡದು. 

ಒಂದು ಪಕ್ಷದ ಸಭೆ ನಡೆಯುತ್ತಿರುವ ಪ್ರದೇಶದಲ್ಲಿ ಇನ್ನೊಂದು ಪಕ್ಷದ ಜಾಥಾ ನಡೆಸಕೂಡದು ಎಂದು ಜಿಲ್ಲಾ ಚುನಾವಣೆ ಅ ಧಿಕಾರಿಯೂ ಆಗಿರುವ ಜಿಲ್ಲಾ ಧಿಕಾರಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next