ಮೈಸೂರು: ದೇಶದಲ್ಲಿ ಸಹನೆ, ಸಹಿಷ್ಣುತೆ ಕಡಿಮೆ ಆಗುತ್ತಿದ್ದು, ಬೇರೆ ವಿಚಾರಧಾರೆಯವ ರನ್ನು ದೇಶದ್ರೋಹಿಗಳೆಂದು ಬಿಂಬಿಸಿ, ಭಯ ಸೃಷ್ಟಿ ಮಾಡಲಾಗುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದರು.
ಸುತ್ತೂರು ಶ್ರೀಕ್ಷೇತ್ರದಲ್ಲಿ ನಡೆಯುತ್ತಿರುವ ಆದಿಜಗದ್ಗುರು ಶ್ರೀಶಿವರಾತ್ರೀಶ್ವರ ಶಿವಯೋಗಿ ಗಳವರ ಜಾತ್ರಾ ಮಹೋತ್ಸವದಲ್ಲಿ ಸೋಮ ವಾರ ಅವರು ಮಾತನಾಡಿದರು. ಬೇರೆ ವಿಚಾರಧಾರೆಯವರು ಏನು ಹೇಳುತ್ತಿದ್ದಾರೆ ಎಂದು ತಿಳಿದುಕೊಳ್ಳದೆ ದ್ವೇಷಿಸುತ್ತಿರುವುದ ರಿಂದ ಸಮಾಜದಲ್ಲಿ ವೈಷಮ್ಯ ಹೆಚ್ಚುತ್ತಿದೆ.
ಹೊಸ ವಿಷಯವನ್ನು ತಿಳಿದುಕೊಳ್ಳುವ ಮುಕ್ತ ಮನಸ್ಸು, ವಿಶಾಲ ಚಿಂತನೆ ಇರಬೇಕು. ಹಿಂದಿನದ್ದೆಲ್ಲವನ್ನೂ ಟೀಕೆ ಮಾಡುವುದೇ ಪ್ರಗತಿಪರವಲ್ಲ. ಹಾಗೆಂದು ತಪ್ಪೆನಿಸಿದ್ದನ್ನೂ ಪ್ರಶ್ನೆ ಮಾಡದಿರುವುದೂ ಸರಿಯಲ್ಲ. ಹಿಂದಿನ ದ್ದೆಲ್ಲಾ ತಪ್ಪು ಅನ್ನುವ ನಕಾರಾತ್ಮಕ ಪ್ರಗತಿಪರ ತೆಯೂ ಸರಿಯಲ್ಲ. ನೀರು ಹರಿಯುತ್ತಿದ್ದರೆ ಸ್ವಚ್ಛವಾಗಿರುತ್ತದೆ, ನಿಂತ ನೀರು ಕಲುಷಿತವಾಗು ತ್ತದೆ. ಹೀಗಾಗಿ ಬದಲಾವಣೆಯನ್ನು ಒಪ್ಪಿಕೊಳ್ಳ ಬೇಕು ಎಂದರು.
ಸುತ್ತೂರು ಮಠ ಆಯೋಜಿಸಿರುವ ಈ ಜಾತ್ರಾ ಮಹೋತ್ಸವ ಸಾತ್ವಿಕ ಸಮಾಜ ಕಟ್ಟಲು ಪ್ರೇರಣೆ ನೀಡಲಿ ಎಂದು ಆಶಿಸಿದರು.
ಆಹಾರ ಸ್ವಾವಲಂಬನೆ: ಕೃಷಿಕರಿಗೆ ಎಲ್ಲ ಸರ್ಕಾರಗಳೂ ಉತ್ತೇಜನ ನೀಡುತ್ತಾ ಬಂದಿವೆ. ಸಿದ್ದರಾಮಯ್ಯ ಅವರ ಸರ್ಕಾರ ಕೃಷಿ ಭಾಗ್ಯ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದಲ್ಲದೆ, 8500 ಕೋಟಿ ರೈತರ ಸಾಲಮನ್ನಾ ಮಾಡಿದೆ.
ಈಗಿನ ಎಚ್.ಡಿ. ಕುಮಾರಸ್ವಾಮಿ ಸರ್ಕಾರ ದೊಡ್ಡಮಟ್ಟದಲ್ಲಿ ರೈತರ ಸಾಲಮನ್ನಾ ಮಾಡಿದೆ. ರೈತರೇ ದೇಶದ ಬೆನ್ನೆಲುಬು ಎನ್ನುತ್ತೇವೆ, ಹೀಗಾಗಿ ಬೆನ್ನೆಲುಬು ಗಟ್ಟಿಯಾಗಿಟ್ಟುಕೊಂಡರೆ ದೇಶ ಪ್ರಬಲವಾಗು ತ್ತದೆ. ಆಹಾರ ಸ್ವಾವಲಂಬನೆ ಇಲ್ಲದೆ ದೇಶದ ಅಭಿವೃದ್ಧಿ ಸಾಧ್ಯವಿಲ್ಲ ಎಂದರು.
ಪ್ರಚಾರಕ್ಕಷ್ಟೇ ಫಸಲ್ ಬಿಮಾ: ಫಸಲ್ ಬಿಮಾ ಯೋಜನೆಗೆ ಪ್ರಚಾರ ಸಿಕ್ಕಷ್ಟು ರೈತರಿಗೆ ಅನುಕೂಲವಾಗಿಲ್ಲ. ಬದಲಿಗೆ ವಿಮೆ ಕಂಪನಿಗಳಿಗೆ ಲಾಭವಾಗುತ್ತಿದೆ ಎಂದರು.