Advertisement

ಕ್ಷುಲ್ಲಕ ಕಾರಣಕ್ಕೆ ಕೋರ್ಟ್‌ ಮೆಟ್ಟಿಲೇರಬೇಡಿ

11:17 AM Nov 22, 2018 | Team Udayavani |

ಆಳಂದ: ಕುಟುಂಬ ಅಥವಾ ಸಮಾಜದಲ್ಲಿ ನಡೆಯುವ ಕ್ಷುಲ್ಲಕ ಕಾರಣಗಳಿಗೆ ಪೊಲೀಸ್‌ ಠಾಣೆ, ಕೋರ್ಟ್‌ ಮೆಟ್ಟಿಲೇರುವುದು
ಸರಿಯಲ್ಲ. ನಿಜವಾಗಿಯೂ ಅನ್ಯಾಯವಾಗಿದ್ದರೆ ಕಾನೂನಿನ ಮೊರೆ ಹೋಗಬೇಕು ಎಂದು ಸ್ಥಳೀಯ ನ್ಯಾಯಾಲಯದ ದಿವಾಣಿ ನ್ಯಾಯಾಧೀಶ ಪ್ರಕಾಶ ಸಿ.ಡಿ. ಹೇಳಿದರು.

Advertisement

ಪಟ್ಟಣದ ಮುನ್ನೋಳಿ ರಸ್ತೆಯಲ್ಲಿರುವ ಬಸವೇಶ್ವರ ಪಬ್ಲಿಕ್‌ ಶಾಲೆಯಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ ಹಾಗೂ ಸಮಾಜ ಕಲ್ಯಾಣ, ಶಿಕ್ಷಣ ಇಲಾಖೆ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಹೆಣ್ಣು ಮಕ್ಕಳ ದಿನಾಚರಣೆ, ವಿಶ್ವ ಕಾನೂನು ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಂಸಾರ ಅಂದ ಮೇಲೆ ಗಂಡ, ಹೆಂಡತಿ ನಡುವೆ ಜಗಳ ಆಗುವುದು ಸಹಜ. ಅನಾವಶ್ಯಕ ಕ್ಷುಲಕ ಕಲಹಗಳನ್ನು ದೊಡ್ಡದಾಗಿ ಮಾಡದೇ, ಪರಸ್ಪರ ಅರ್ಥಮಾಡಿಕೊಂಡು ನಡೆದರೆ ಸಮಾಜದ ಸ್ವಾಸ್ಥ್ಯ ಕಾಪಾಡಲು ಸಾಧ್ಯವಾಗುತ್ತದೆ ಎಂದರು. 

ನಿಜವಾಗಿ ಅನ್ಯಾಯವಾಗಿದ್ದರೆ ಹೆಣ್ಣು ಮಕ್ಕಳಿಗಾಗಿ ಸರ್ಕಾರದ ಸೌಲಭ್ಯಗಳಿವೆ. ಅನ್ಯಾಯ, ಅತ್ಯಾಚಾರದ ವಿರುದ್ಧ ಕ್ರಮ
ಕೈಗೊಳ್ಳಲು ಕಾನೂನು ಬೆನ್ನೆಲುಬಾಗಿದೆ. ಇದರ ಸದ್ಬಳಕೆ ಮಾಡಿಕೊಳ್ಳಿ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿದ್ದ ಕಿರಿಯ ಶ್ರೇಣಿ ನ್ಯಾಯಾಧೀಶ ಗುರುಪ್ರಸಾದ ಸಿ. ಮಾತನಾಡಿ, ಹೆಣ್ಣು ಮಕ್ಕಳಿಗೆ ಸಮಾಜದಲ್ಲಿ ಅನ್ಯಾಯ, ಅತ್ಯಾಚಾರ ನಡೆದರೆ ಕಾನೂನಿಂದ ರಕ್ಷಣೆ ಪಡೆಯಬೇಕು ಎಂದರು.

Advertisement

ಹೆಣ್ಣು ಮಕ್ಕಳ ಕುರಿತು ನ್ಯಾಯವಾದಿ ಎಸ್‌ಒ ಮುನ್ನೋಳ್ಳಿ, ಕಾನೂನು ಅರಿವು ನೆರವು ಕುರಿತು ನ್ಯಾಯವಾದಿ ಡಿ.ಎಸ್‌.ನಾಡಕರ್‌, ಹೆಣ್ಣು ಮಕ್ಕಳಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಇರುವ ಸೌಲಭ್ಯ ಕುರಿತು ಇಲಾಖೆ ಮೇಲ್ವಿಚಾರಕಿ ಮಹಾದೇವಿ ವಚ್ಛೆ ಮಾತನಾಡಿದರು.  ನ್ಯಾಯವಾದಿ ಸಂಘದ ಅಧ್ಯಕ್ಷ ಬಾಬಾಸಾಹೇಬ ವಿ. ಪಾಟೀಲ ಅಧ್ಯಕ್ಷತೆ ವಹಿಸಿದ್ದರು.

ಮೇಲ್ವಿಚಾರಕಿ ಮೀನಾಕ್ಷಿ ಹಿರೇಮಠ, ಸರ್ಕಾರಿ ಸಹಾಯಕ ಅಭಿಯೋಜಕ ಮುಕುಂದ ದೇಶಪಾಂಡೆ, ಸಂಘದ ಕಾರ್ಯದರ್ಶಿ ಬಿ.ಎಸ್‌. ನಿಂಬರಗಿ, ಕಾನೂನು ಸೇವಾ ಸಮಿತಿಯ ಬಸವಣ್ಣಪ್ಪ ಗುಡ್ಡೆವಾಡ, ನ್ಯಾಯವಾದಿಗಳಾದ ದೇವಾನಂದ ಹೋದಲೂರಕರ್‌, ಬಾಪುರಾವ್‌ ಪವಾರ, ಎಂ.ವಿ. ಎಕಬೋಟೆ, ಬಿ.ಜಿ.ಬೀಳಗಿ ಇದ್ದರು. ಶ್ರೀಶೈಲ ಮುಲಗೆ ನಿರೂಪಿಸಿದರು, ಬಲಭೀಮ ಶಿಂಧೆ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next