“ಕಿರಿಕ್ ಪಾರ್ಟಿ’ ಚಿತ್ರದ ಮೂಲಕ ಸ್ಯಾಂಡಲ್‍ವುಡ್‍ಗೆ ಎಂಟ್ರಿ ಕೊಟ್ಟ ನಟಿ ಸಂಯುಕ್ತಾ ಹೆಗಡೆ ಈಗ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಕಾಲೇಜು ಹುಡುಗಿ ಪಾತ್ರದಲ್ಲಿ ಎಲ್ಲರ ಮನಗೆದ್ದಿದ್ದ ಈಕೆ, ಇದೀಗ ಬಿಕಿನಿ ಹಾಗೂ ಶಾರ್ಟ್ ಡ್ರೆಸ್‍ಗಳನ್ನು ತೊಟ್ಟು ಪಡ್ಡೆ ಹುಡುಗರ ನಿದ್ದೆ ಕೆಡಿಸಿದ್ದಾರೆ.
ಹೌದು, ಇತ್ತೀಚೆಗೆ ತನ್ನ ಗೆಳೆಯನ ಜೊತೆ ಥೈಲ್ಯಾಂಡ್ ಪ್ರವಾಸದಲ್ಲಿರುವ ಸಂಯುಕ್ತಾ ಹೆಗಡೆ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ನ್ಯೂ ಲುಕ್‍ನಲ್ಲಿ ಫೋಟೋಗಳನ್ನು ಶೇರ್ ಮಾಡುತ್ತಿದ್ದಾರೆ. ಅದು ಅಂತಿಂತಹ ಪೋಟೋಗಳಲ್ಲ, ಪಡ್ಡೆ ಹುಡುಗರ ಹೃದಯಕ್ಕೆ ಕಿಚ್ಚು ಹಚ್ಚಿಸುವ ಫೋಟೋಗಳಾಗಿವೆ. ಐಟಂ ಗರ್ಲ್ಸ್ ಗಳನ್ನೂ ಮೀರಿಸುವ ರೀತಿಯಲ್ಲಿ ಬಿಕಿನಿಯಲ್ಲಿ ಹಾಟ್ ಆಗಿ ಪೋಸ್ ನೀಡಿರುವ ಆ ಫೋಟೋಗಳು ಸಕತ್ ವೈರಲ್ ಆಗಿವೆ.
ಅಷ್ಟೇ ಅಲ್ಲ, “ಜನರ ಯೋಚನೆಗಳನ್ನು ಬದಲಾಯಿಸಲು ನಿಮ್ಮ ಸಮಯ ಹಾಗೂ ಶಕ್ತಿಯನ್ನು ಹಾಳು ಮಾಡ್ಕೋಬೇಡಿ. ಅವರು ಮೆಚ್ಚಲಿ ಬಿಡಲಿ, ನಿಮ್ಮ ಕೆಲಸವನ್ನು ಮಾಡುತ್ತಾ ಮುಂದುವರೆಯಿರಿ. ನಿಮಗಾಗಿ ಬದುಕಿ’ ಎಂದು ಹೇಳಿದ್ದಾರೆ.