Advertisement

ವಿರೋಧಿಗಳ ಟೀಕೆಗೆ ಪ್ರತಿಕ್ರಿಯೆ ಬೇಡ

07:06 AM Jun 16, 2020 | Lakshmi GovindaRaj |

ಗೌರಿಬಿದನೂರು: ನಮ್ಮ ರಾಜಕೀಯ ವಿರೋಧಿಗಳ ಟೀಕೆಗೆ ನಾವು ಪ್ರತಿಕ್ರಿಯಿಸುವುದು ಬೇಡ. ಬದಲಿಗೆ ಸಂಘಟನಾತ್ಮಕ ಕೆಲಸಗಳ ಕಡೆಗೆ ಒತ್ತು ನೀಡೋಣ ಎಂದು ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಹಾಗೂ ಪುಟ್ಟಸ್ವಾಮಿಗೌಡರ  ಬಳಗದ ಮುಖಂಡ ಎಚ್‌ .ವಿ.ಮಂಜುನಾಥ್‌ ಮುಖಂಡರಲ್ಲಿ ಮನವಿ ಮಾಡಿದರು.

Advertisement

ಕೆ.ಎಚ್‌.ಪುಟ್ಟಸ್ವಾಮಿಗೌಡ ಫೌಂಡೇಷನ್‌ ಕಚೇರಿಯಲ್ಲಿ ಕಾಂಗ್ರೆಸ್‌ ಮುಖಂಡ ಹಾಗೂ ವಾಲ್ಮೀಕಿ ಜನಾಂಗದ ರಾಘವೇಂದ್ರ ಹನುಮಾನ್‌, ಶಾಹಿದ್‌  ಅಬ್ಟಾಸ್‌, ಸೈಯದ್‌ಅಬ್ಟಾಸ್‌ ಅವರ ಸೇರ್ಪಡೆ ಕಾರ್ಯಕ್ರಮದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ನಾಯಕ ಜನಾಂಗದ ವರ್ಚಸ್ವಿ ವ್ಯಕ್ತಿ ರಾಘವೇಂದ್ರ ಹನುಮಾನ್‌ ಅವರ ಸೇರ್ಪಡೆಯಿಂದ ತಾಲೂಕಿನಲ್ಲಿ ನಮಗೆ ಹೆಚ್ಚು ಬಲ  ಬಂದಿದೆ ಎಂದರು.

ಈಗಾಗಲೇ ಗೌರಿಬಿದನೂರು ನಗರದ ನೀರಿನ ಸಮಸ್ಯೆ ನೀಗಿಸಲು ಪುಟ್ಟಸ್ವಾಮಿ ಗೌಡರು, ಪ್ರತಿ ತಿಂಗಳು 15 ಲಕ್ಷ ರೂ. ವೆಚ್ಚ ಮಾಡುತ್ತಿದ್ದಾರೆ. ಈಗಾಗಲೇ 65 ಲಕ್ಷ ವೆಚ್ಚ ಮಾಡಿದ್ದಾರೆ. ವಿದ್ಯಾರ್ಥಿಗಳಿಗೆ ನೋಟ್‌ ಪುಸ್ತಕ  ನೀಡಲಿದ್ದಾರೆ ಎಂದರು. ಮುಖಂಡ ಜಿ.ಕೆ.ಸತೀಶ್‌ ಮಾತನಾಡಿ, ತಾಲೂಕಿನಲ್ಲಿ ಶಾಸಕರ ಗೆಲುವಿಗಾಗಿ ನಾವೆಲ್ಲರೂ ಸೇರಿ ಗೆಲ್ಲಿಸಿದ್ದೇವೆ. ಅದರೆ ಅವರು ನಮ್ಮನ್ನು ಪಕ್ಷದಿಂದ ಹೊರ ಹೋಗುವಂತೆ ಮಾಡಿದರು ಎಂದರು.

ಪುಟ್ಟಸ್ವಾಮಿಗೌಡ  ಮಾತನಾಡಿ, ನಮ್ಮ ಗುಂಪಿಗೆ ಸೇರ್ಪಡೆಯಾಗಿರುವ ಯಾವುದೇ ಮುಖಂಡರೂ ಸಹ ಹಣದಾಸೆಗಾಗಿ ಬಂದಿರುವವರಲ್ಲ. ಯಾರಿಗೂ ಹಣ ಅಥವಾ ವಾಹನವಾಗಲಿ ನೀಡಿಲ್ಲ. ವಿರೋಧಿಗಳು ಅಪಪ್ರಚಾರ ಮಾಡುತ್ತಿದ್ದಾರೆ ಎಂದು  ದೂರಿದರು. ಸಭೆಯಲ್ಲಿ ಜಿಪಂ ಸದಸ್ಯ ನರಸಿಂಹಮೂರ್ತಿ, ಕೋಚಿಮುಲ್‌ ಮಾಜಿ ಅಧ್ಯಕ್ಷ ತೊಂಡೇಭಾವಿ ಕಾಂತರಾಜು, ಅಬ್ದುಲ್ಲಾ, ನಗರಸಭೆ ಮಾಜಿ ಅಧ್ಯಕ್ಷ ನರಸಿಂಹಮೂರ್ತಿ, ಅನಂತರಾಜು ಉಪಸ್ಥಿತರಿದ್ದರು. ಮುಖಂಡ  ನರಸಿಂಹಮೂರ್ತಿ ಸ್ವಾಗತಿಸಿ ಅನಂತರಾಜು ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next