Advertisement

ಐಟಿ ವೆಬ್‌ನಲ್ಲಿ ಹೆಸರಿದ್ರೆ ಭೀತಿ ಬೇಡ

03:45 AM Feb 12, 2017 | |

ನವದೆಹಲಿ: ನೋಟು ಅಪನಗದೀಕರಣದ ನಂತರದ 2 ತಿಂಗಳ ಅವಧಿಯಲ್ಲಿ ಖಾತೆಯಲ್ಲಿ ಸಣ್ಣ ಮೊತ್ತವನ್ನು ಠೇವಣಿಯಿಟ್ಟಿದ್ದರೂ ನಿಮ್ಮ ಹೆಸರು ಆದಾಯ ತೆರಿಗೆ ಇಲಾಖೆಯ ವೆಬ್‌ಸೈಟ್‌ನಲ್ಲಿ ನಮೂದಾಗಿದೆಯೇ? ಹೌದೆಂದಾದರೆ ಭಯ ಪಡಬೇಕಾಗಿಲ್ಲ. ಕಪ್ಪುಹಣವಿರಬಹುದು ಎಂಬ ಶಂಕೆ ವ್ಯಕ್ತಪಡಿಸಿ ಬ್ಯಾಂಕುಗಳು ಕೆಲವರ ಹೆಸರುಗಳನ್ನು ಈಗಾಗಲೇ ಐಟಿ ಇಲಾಖೆಗೆ ನೀಡಿದೆ. ಅದರಲ್ಲಿ 18 ಲಕ್ಷ ಮಂದಿಯ ಮಾಹಿತಿಯಿದೆ. ಅಂಥವರಿಗೆ ಎಸ್ಸೆಮ್ಮೆಸ್‌ ಹಾಗೂ ಇಮೇಲ್‌ ಕಳುಹಿಸಿ, ಸ್ಪಷ್ಟನೆ ನೀಡುವಂತೆ ಕೋರಲಾಗಿದೆ. ಈ ನಡುವೆ ಆದಾಯ ತೆರಿಗೆ ಇಲಾಖೆ ಎಸ್‌ಎಂಎಸ್‌ ಮತ್ತು ಇ-ಮೇಲ್‌ಗೆ ಪ್ರತಿಕ್ರಿಯೆ ನೀಡುವ ದಿನಾಂಕವನ್ನು  ಫೆ.15ರ ವರೆಗೆ ವಿಸ್ತರಿಸಿ ಆದೇಶ ನೀಡಿದೆ.

Advertisement

ಆದರೆ, ಕೆಲವರ ಖಾತೆಗಳಲ್ಲಿ 5 ಲಕ್ಷ ರೂ. ಹಾಗೂ ಅದಕ್ಕಿಂತ ಮೇಲ್ಪಟ್ಟ ಮೊತ್ತವಿದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಹೆಸರುಗಳನ್ನು ವೆಬ್‌ಸೈಟ್‌ನಲ್ಲಿ ಹಾಕಲಾಗಿದೆ. ಆದರೆ, ವಾಸ್ತವದಲ್ಲಿ ಅಂಥ ಕೆಲವರ ಖಾತೆಗಳಲ್ಲಿ ಅಷ್ಟೊಂದು ಹಣವಿಲ್ಲ. ಹೀಗಾಗಿ, ಹಲವರು ಗೊಂದಲಕ್ಕೀಡಾಗಿದ್ದಾರೆ. ಈ ಗೊಂದಲ ನಿವಾರಿಸುವ ನಿಟ್ಟಿನಲ್ಲಿ ಐಟಿ ಇಲಾಖೆಯೇ ಕೆಲವೊಂದು ಸ್ಪಷ್ಟನೆಗಳನ್ನು ನೀಡಿದೆ.

“”ನಾವು ಕಳುಹಿಸಿರುವುದು ತೆರಿಗೆ ನೋಟಿಸ್‌ ಅಲ್ಲ. ಬ್ಯಾಂಕುಗಳು ನೀಡಿರುವ ಮಾಹಿತಿ ವಿಶ್ವಾಸಾರ್ಹವೋ ಎಂಬುದನ್ನು ತಿಳಿಯಬೇಕಿದೆ ಅಷ್ಟೆ. ಅದಕ್ಕಾಗಿ, ಯಾರಿಗೆ ಇಮೇಲ್‌, ಸಂದೇಶ ಬಂದಿದೆಯೋ ಅವರು 10 ದಿನಗಳ ಒಳಗಾಗಿ ಪ್ರತಿಕ್ರಿಯೆ ನೀಡಿ. ಬ್ಯಾಂಕ್‌ ನೀಡಿರುವ ಮಾಹಿತಿ ಸುಳ್ಳೆಂದಾದರೆ, ನಿಮಗ್ಯಾರೂ ತೊಂದರೆ ಕೊಡುವುದಿಲ್ಲ,” ಎಂದು ಐಟಿ ತಿಳಿಸಿದೆ.

ಇನ್ನೊಂದೆಡೆ, ಪ್ರಾಮಾಣಿಕವಾಗಿ ತೆರಿಗೆ ಪಾವತಿಸುವ ವ್ಯಕ್ತಿಗಳನ್ನು ಘನತೆ ಹಾಗೂ ಸೌಜನ್ಯದಿಂದ ಕಾಣಿರಿ ಎಂದು ಆದಾಯ ತೆರಿಗೆ ಇಲಾಖೆಗೆ ಕೇಂದ್ರೀಯ ನೇರ ತೆರಿಗೆಗಳ ಮಂಡಳಿ ಸೂಚನೆ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next