Advertisement
ರಸೆಲ್ ಪರಾಕ್ರಮಇತ್ತೀಚೆಗಷ್ಟೆ ಮುಗಿದ ಐಪಿಎಲ್‌ನಲ್ಲಿ ಅಪಾಯಕಾರಿ ಆಟಗಾರ ಕ್ರಿಸ್‌ಗೇಲ್ ಸಾಧಾರಣ ಯಶಸ್ಸು ಕಂಡಿದ್ದಾರೆ. ಆದರೆ ಆ್ಯಂಡ್ರೆ ರಸೆಲ್ ಸಿಡಿಸಿದ ಸಿಕ್ಸರ್ ಹಾಗೂ ಬೇಟೆಯಾಡಿರುವ ವಿಕೆಟ್‌ಗಳ ಸಂಖ್ಯೆ ವಿಂಡೀಸ್ ತಂಡ ಎಷ್ಟು ಅಪಾ ಯಕಾರಿ ಎನ್ನುವ ಸುಳಿವನ್ನು ನೀಡಿದೆ.
Related Articles
Advertisement
ಅಪಾರ ಚೈತನ್ಯವನ್ನು ಹೊಂದಿರುವ, ಎತ್ತರದ ದೃಢಕಾಯ ಆಟಗಾರರಿರುವ ಈ ತಂಡ ತಮಗೆ ಸಿಕ್ಕಿದ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡಿದ್ದೆ ಆದರೆ ತಂಡದ ಪುನರುತ್ಥಾನವಾದಂತೆಯೇ. ಸದ್ಯ ಐಸಿಸಿ ರ್‍ಯಾಂಕಿಂಗ್‌ನಲ್ಲಿ ಎಂಟನೇ ಸ್ಥಾನದಲ್ಲಿದ್ದರೂ ಅವರ ಪ್ರತಿಭೆ ಮತ್ತು ಸಾಮರ್ಥ್ಯಕ್ಕೆ ಇದೊಂದು ಸವಾಲಿನ ಸ್ಪರ್ಧೆಯಾಗಿದೆ. ರ್‍ಯಾಂಕಿಂಗ್‌ನಲ್ಲಿ ಬಾಂಗ್ಲಾದೇಶವು ವೆಸ್ಟ್ ಇಂಡೀಸ್‌ಗಿಂತ ಮೇಲಿದೆ. ಶ್ರೀಲಂಕಾ ಮತ್ತು ಹೊಸ ತಂಡ ಅಫ್ಘಾನಿಸ್ಥಾನ ಮಾತ್ರ ವೆಸ್ಟ್ ಇಂಡೀಸ್‌ಗಿಂತ ಕೆಳಗಿದೆ.
ವಿಶ್ವಕಪ್‌ನ ಇತಿಹಾಸ ವೆಸ್ಟ್ ಇಂಡೀಸ್ ಪರವಾಗಿರುವುದು ಅದಕ್ಕಿ ರುವ ಇನ್ನೊಂದು ಅನುಕೂಲ. 1975ರಿಂದೀಚೆಗೆ ಶುರುವಾದ ವಿಶ್ವಕಪ್‌ನ ಮೂರು ಕೂಟಗಳಲ್ಲಿ ವೆಸ್ಟ್ ಇಂಡೀಸ್ ತಂಡ ಫೈನಲ್‌ಗೇರಿತ್ತು. ಎರಡು ಬಾರಿ ಟ್ರೋಫಿ ಯನ್ನೂ ಗೆದ್ದುಕೊಂಡಿದೆ. ಹಲವು ಸಲ ವಿಶ್ವಕ್ರಿಕೆಟ್‌ನ ಮಹಾರಾಜನಾಗಿ ಮೆರೆದ ತಂಡವಿದು. ಕೆರಿಬಿಯನ್ ದೈತ್ಯರ ಅಬ್ಬರ ಆಂಗ್ಲರ ನೆಲದಲ್ಲಿ ಎಷ್ಟು ಪರಿಣಾಮಕಾರಿ ಎಂಬುದನ್ನು ಫಲಿತಾಂಶವೇ ಹೇಳಬೇಕು.
ಯುನಿವರ್ಸ್ ಬಾಸ್ ಕೊನೆಯ ಆಟ!ಅಭಿಮಾನಿಗಳಿಂದ “ಯುನಿವರ್ಸ್ ಬಾಸ್’ ಎಂದು ಕರೆಸಿಕೊಳ್ಳುತ್ತಿರುವ ಗೇಲ್ ಪಾಲಿಗೆ ಇದು ಐದನೇ ತಥಾ ಕೊನೆಯ ವಿಶ್ವಕಪ್. ಈಗಲೂ ಬೌಲರ್‌ಗಳಿಗೆ ನನ್ನ ಭೀತಿಯಿದೆ ಎನ್ನುತ್ತಾರೆ 39ರ ಹರೆಯದ ಈ ಸಿಡಿಲಬ್ಬರದ ಬ್ಯಾಟ್ಸ್‌ಮ್ಯಾನ್. ಐಪಿಎಲ್‌ನ 13 ಪಂದ್ಯಗಳಿಂದ 490 ರನ್ ರಾಶಿ ಹಾಕಿರುವ ಗೇಲ್ ಇದಕ್ಕೂ ಮೊದಲಿನ ಏಕದಿನ ಸರಣಿಯಲ್ಲಿ 106ರ ಸರಾಸರಿಯಲ್ಲಿ 424 ರನ್ ಪೇರಿಸಿ ಇಂಗ್ಲಂಡ್ ತಂಡವನ್ನು ಕೆಡವಿದ್ದರು. ನಾಲ್ಕು ಪಂದ್ಯಗಳಲ್ಲಿ 39 ಸಿಕ್ಸರ್ ಬಾರಿಸಿರುವುದು ಅವರ ತೋಳಿನಲ್ಲಿ ಇನ್ನೂ ಪ್ರಚಂಡ ಶಕ್ತಿ ಇದೆ ಎನ್ನುವುದಕ್ಕೆ ಸಾಕ್ಷಿ. ಇಂಗ್ಲಂಡ್ ನೆಲದಲ್ಲಿ ಅವರು ಮಾಡಿರುವ ದಾಖಲೆಗಳು ಎದುರಾಳಿಗಳಲ್ಲಿ ನಡುಕ ಹುಟ್ಟಿಸುತ್ತಿವೆ. ಯುವ ಬೌಲರ್‌ಗಳ ಬಗ್ಗೆ ಭಯ ಇಲ್ಲ ಎನ್ನುವುದು ಗೇಲ್ ವಿಶ್ವಾಸದ ನುಡಿ. ಹಾಗೆಂದು ಅವರೆದುರು ಬ್ಯಾಟ್ ಬೀಸುವುದು ಎಣಿಸಿದಷ್ಟು ಸುಲಭವಲ್ಲ. ಅವರಿಂದ ಹೆಚ್ಚು ಚುರುಕಾಗಿರಬೇಕಾಗುತ್ತದೆ.ಅವರಿಗೂ ಯುನಿವರ್ಸ್ ಬಾಸ್‌ನ ತಾಕತ್ತು ಏನು ಎನ್ನುವುದು ಗೊತ್ತಿದೆ, ಆದರೆ ಅದನ್ನು ಅವರು ಹೇಳಿಕೊಳ್ಳುತ್ತಿಲ್ಲ. ಅಪಾಯಕಾರಿ ಬ್ಯಾಟ್‌ಮ್ಯಾನ್‌ಗೆ ಬೌಲಿಂಗ್ ಮಾಡುತ್ತಿದ್ದೇವೆ ಎಂದು ಅವರು ಅರಿತಿರಬೇಕು ಎನ್ನುತ್ತಾರೆ ಗೇಲ್.