Advertisement

ಹೆತ್ತವರ ಹೊರೆ ಮಕ್ಕಳ ಮೇಲೆ ಬೇಡ

10:41 AM Sep 16, 2018 | Team Udayavani |

ಉಡುಪಿ: ಪೋಷಕರು ತಮ್ಮ ಭಾರ, ಕಷ್ಟ, ಹೊರೆ, ಕನಸು, ಆಸೆಗಳನ್ನು ಮಕ್ಕಳ ಮೇಲೆ ಹೊರಿಸಬಾರದು. ಅವರ ಆಸೆಯಂತೆ ಬೆಳೆಯಲು ಬಿಡಿ, ಮಕ್ಕಳಲ್ಲಿ ನಿಮಗೇನು ಬೇಕು ಎಂಬುದಾಗಿ ಕೇಳಿ, ಹೆತ್ತವರ ಆಸೆಗೆ ಮಣಿದು ಅದೆಷ್ಟೋ ಮಕ್ಕಳು ಪ್ರಸ್ತುತ ಖನ್ನತೆಗೆ ಒಳಗಾಗುತ್ತಿ¨ªಾರೆ. ಇಷ್ಟವಲ್ಲದ ಶಿಕ್ಷಣ ಕ್ಷೇತ್ರಕ್ಕೆ ಅವರನ್ನು ಒತ್ತಾಯಿಸುವುದೇ ಅದಕ್ಕೆ ಮುಖ್ಯ ಕಾರಣ ಎಂದು ಸಚಿವೆ ಡಾ| ಜಯಮಾಲಾ ಅಭಿಪ್ರಾಯಪಟ್ಟರು.

Advertisement

ಕೃಷ್ಣಮಠದ ಚಿಣ್ಣರ ಸಂತರ್ಪಣೆ ಶಾಲೆಗಳಲ್ಲಿ ನಡೆದ ಮುದ್ದುಕೃಷ್ಣ ಸ್ಪರ್ಧೆಯಲ್ಲಿ ವಿಜೇತ ಪುಟಾಣಿಗಳಿಗೆ ರಾಜಾಂಗಣದಲ್ಲಿ ಶನಿವಾರ ನಡೆದ ಬಹುಮಾನ ವಿತರಣೆಯಲ್ಲಿ ಅವರು ಮಾತನಾಡಿದರು.

ಮಕ್ಕಳು ಇಷ್ಟಪಡುವ ಕ್ಷೇತ್ರದ ಶಿಕ್ಷಣ ನೀಡಿ, ಅವರ ಭವಿಷ್ಯ ರೂಪಿಸುವಲ್ಲಿ ಹೆತ್ತವರು ಹೆಚ್ಚಿನ ಮುತುವರ್ಜಿ ವಹಿಸಬೇಕು. ಅಲ್ಲದೆ ಮಕ್ಕಳನ್ನು ರಕ್ಷಿಸುವುದು ಪೋಷಕರ ಕರ್ತವ್ಯವೂ ಆಗಿದೆ. ದೇಶದ ಭಾವೀ ಭವಿಷ್ಯವಾಗಿರುವ ಮಕ್ಕಳ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು. ಎಲ್ಲ ಕೆಲಸಗಳನ್ನು ಸರಕಾರದಿಂದ ಮಾಡಲು ಸಾಧ್ಯವಿಲ್ಲ. ಈ ನೆಲೆಯಲ್ಲಿ ಸಮಾಜ, ಮಠಗಳು ಕೂಡ ಕೈಜೋಡಿಸಬೇಕು. ಜಿÇÉೆಯ ಅನುದಾನಿತ ಶಾಲೆಗಳಿಗೆ ಮಠದ ವತಿಯಿಂದ ಸಮವಸ್ತ್ರ, ಮಧ್ಯಾಹ್ನದ ಬಿಸಿಯೂಟ ನೀಡುವ ಮೂಲಕ ಆ ಶಾಲೆಗಳಲ್ಲಿ ಕಲಿಯುವವರಿಗೂ ಪ್ರಾತಿನಿಧ್ಯ ಕೊಟ್ಟಿರುವುದು ಸಮಾಜಕ್ಕೆ ಮಾದರಿ ಕಾರ್ಯ ಎಂದವರು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಮಾತನಾಡಿ, ಮಗುವೊಂದು ಸ್ಪರ್ಧೆಗಳಲ್ಲಿ ಭಾಗವಹಿಸುತ್ತದೆ ಎಂದರೆ, ಅದರ ಹಿಂದಿನಿಂದ ಹೆತ್ತವರು, ಮನೆ ಮಂದಿ, ಶಿಕ್ಷಕರ ಪಾತ್ರವೂ ಇರುತ್ತದೆ ಎಂದರ್ಥ. ಮಗುವಿನೊಂದಿಗೆ ಅವರೂ ಕೂಡ ಚಟುವಟಿಕೆಗಳಿಂದ ಕೂಡಿರಲು ಪೂರಕವಾಗುತ್ತದೆ ಎಂದು ಹೇಳಿದರು. ಅದಮಾರು ಕಿರಿಯ ಯತಿ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಮಾತನಾಡಿದರು.

ಸಚಿವೆ ಡಾ| ಜಯಮಾಲಾ ಅವರನ್ನು ಪಲಿಮಾರು ಶ್ರೀಗಳು ಗೌರವಿಸಿದರು. ಪಲಿಮಾರು ಮಠದ ದಿವಾನ ಶಿಬರೂರು ವೇದವ್ಯಾಸ ತಂತ್ರಿ ಅವರು ಸ್ವಾಗತಿಸಿ, ಪ್ರಸ್ತಾವನೆಗೈದರು. ಶ್ರೀಕೃಷ್ಣ ಮಠದ ಚಿಣ್ಣರ ಸಂತರ್ಪಣೆ ಶಾಲಾ ಒಕ್ಕೂಟದ ಅಧ್ಯಕ್ಷ ಅಶೋಕ ಕುಮಾರ್‌ ಶೆಟ್ಟಿ ಅವರು ಕಾರ್ಯ ಕ್ರಮ ನಿರೂಪಿಸಿದರು. ಕಾರ್ಯದರ್ಶಿ ಶ್ರೀನಿವಾಸ ರಾವ್‌ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next