Advertisement
ಈಗ ಕೊರೊನಾ ನಿಯಂತ್ರಣ ಲಸಿಕೆ ಪ್ರಸ್ತುತ ಎಲ್ಲೆಡೆ ನೀಡ ಲಾಗುತ್ತಿದೆ. ಜನರು ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆ ಪಡೆದು ಕೊಳ್ಳುತ್ತಿದ್ದಾರೆ. ಕೊರೊನಾ ವಿರುದ್ಧ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವಲ್ಲಿ ಇದು ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸುತ್ತದೆ ಎಂಬು ದನ್ನು ಈಗಾಗಲೇ ತಜ್ಞರು ಪ್ರತಿಪಾದಿಸಿದ್ದಾರೆ. ಆದರೆ ಲಸಿಕೆ ತೆಗೆದುಕೊಂಡ ಬಳಿಕ ಅಡ್ಡ ಪರಿಣಾಮಗಳು ಉಂಟಾಗುತ್ತ ವೆಯೇ? ವ್ಯಾಕ್ಸಿನೇಶನ್ ಅನಂತರ ಎಷ್ಟು ದಿನಗಳಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿ ಯಾಗುತ್ತದೆ? ತೆಗೆದುಕೊಂಡ ಬಳಿಕ ಕೊರೊನಾ ಸೋಂಕು ಬರುವುದಿಲ್ಲವೇ? ಮುಂಜಾ ಗ್ರತಾ ನಿಯಮಗಳನ್ನು ಪಾಲಿಸು ವುದು ಅಗತ್ಯವೇ? ಕೊರೊನಾ ಮಾರ್ಗಸೂಚಿಗಳನ್ನು ಪಾಲಿಸಬೇಕೇ? – ಹೀಗೆ ಹಲವು ಪ್ರಶ್ನೆ ಗಳು ಬಹಳಷ್ಟು ಜನರಿಂದ ಕೇಳಿಬರುತ್ತಿವೆ. ಇನ್ನೊಂದೆಡೆ ಕೊರೊನಾ ಬಂದಿರುವವರು ಏನು ಮಾಡಬೇಕು, ಯಾವುದೆಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು, ಯಾವುದೆಲ್ಲ ನಿಯಮಗಳನ್ನು ಅನುಸರಿ ಸಬೇಕು ಎಂಬ ಬಗ್ಗೆಯೂ ಬಹಳಷ್ಟು ಪ್ರಶ್ನೆಗಳು ಬರುತ್ತವೆ.
Related Articles
Advertisement
ಕೊರೊನಾ ಬಂದಿರುವವರು ಪಾಲಿಸಬೇಕಾದ ಮುನ್ನೆಚರಿಕೆಗಳುಅಲ್ಪ ಪ್ರಮಾಣದ ಸೋಂಕು ಇರುವ ಅಥವಾ ಲಕ್ಷಣ ರಹಿತ ರೋಗಿಗಳಿಗೆ ಹೋಂ ಐಸೊಲೇಶನ್ ಅವಕಾಶ ನೀಡಲಾಗುತ್ತದೆ. ಈ ಅವಧಿಯಲ್ಲಿ ಅವರು ಕಡ್ಡಾಯವಾಗಿ ನಿಗದಿತ ಕೊಠಡಿಯಲ್ಲೇ ಇರಬೇಕು. ಕೊಠಡಿಯಲ್ಲಿ ಒಬ್ಬನೇ ಇರುವ ಸಂದರ್ಭದಲ್ಲಿ ಮಾಸ್ಕ್ ಧರಿಸುವ ಆವಶ್ಯಕತೆ ಇಲ್ಲ. ಆದರೆ ಕೊಠಡಿಯೊಳಗೆ ಯಾರಾದರೂ ಪ್ರವೇಶಿಸುತ್ತಾರೆ ಎಂದಾದರೆ ಕೂಡಲೇ ಮಾಸ್ಕ್ ಧರಿಸಬೇಕು. ಪಲ್ಸ್ ಆಕ್ಸಿಮೀಟರ್ ಮೂಲಕ ದಿನಕ್ಕೆ ಮೂರು ಬಾರಿ ಆಕ್ಸಿಜನ್ ಮಟ್ಟವನ್ನು ಪರೀಕ್ಷಿಸಬೇಕು. ಆಕ್ಸಿಜನ್ ಪ್ರಮಾಣ ಶೇ. 95ಕ್ಕಿಂತ ಮೇಲಿರಬೇಕು. ಒಂದೊಮ್ಮೆ ಆಕ್ಸಿಜನ್ ಪ್ರಮಾಣ ಶೇ. 94ಕ್ಕಿಂತ ಕೆಳಗಿದ್ದರೆ ಅಥವಾ ಉಸಿರಾಟದ ಸಮಸ್ಯೆ ಕಾಣಿಸಿಕೊಂಡರೆ ವೈದ್ಯರನ್ನು ಸಂಪರ್ಕಿಸಿ ಪರೀಕ್ಷಿಸಿಕೊಳ್ಳುವುದು ಅಗತ್ಯ. ಕೊರೊನಾ ಸೋಂಕಿಗೆ ಒಳಗಾದ ಸಂದರ್ಭ ದಲ್ಲಿ ಅಥವಾ ಸೋಂಕಿನಿಂದ ಚೇತರಿಸಿಕೊಂಡ ಬಳಿಕ ತೀವ್ರ ವಾದ ತಲೆನೋವು, ದೃಷ್ಟಿ ದೋಷ, ಮುಖದಲ್ಲಿ ಊತ ಅಥವಾ ಕಪ್ಪು ಬಣ್ಣದ ದ್ರವ ಮೂಗಿನಿಂದ ಬರುವುದು ಮುಂತಾದ ಸಮಸ್ಯೆಗಳು ಕಂಡುಬಂದರೆ ಕೂಡಲೇ ವೈದ್ಯರನ್ನು ಸಂಪರ್ಕಿಸುವುದು ಉತ್ತಮ. ಈ ಮೂಲಕ ಬ್ಲ್ಯಾಕ್‌ಫಂಗಸ್ (ಕಪ್ಪು ಶಿಲಿಂಧ್ರ) ಸೋಂಕು ಇದೆಯೇ ಇಲ್ಲವೇ ಎಂಬು ದನ್ನು ಖಚಿತಪಡಿಸಿಕೊಳ್ಳ ಬಹುದು. ಕೊರೊನಾ ಸೋಂಕಿಗೆ ಒಳಾಗಾದವರಿಗೆ ಮಧುಮೇಹ ಸಮಸ್ಯೆ ಇದ್ದಲ್ಲಿ ಅಂಥ ವರು ಹೆಚ್ಚಿನ ಎಚ್ಚರಿಕೆ ವಹಿಸುವುದು ಅಗತ್ಯ. ಜತೆಗೆ ಮಧುಮೇಹ ವನ್ನು ನಿಯಂತ್ರಣದಲ್ಲಿರಿಸಿಕೊಳ್ಳಬೇಕು. ಒಂದು ಬಾರಿ ಕೊರೊನಾ ಸೋಂಕಿಗೆ ಒಳಗಾದವರಿಗೆ ಮರಳಿ ಕೊರೊನಾ ಬರುವುದಿಲ್ಲ ಎಂಬ ಭಾವನೆ ಬೇಡ. ಅವರು ಮತ್ತೆ ಸೋಂಕಿಗೆ ಒಳಗಾಗುವ ಸಾಧ್ಯತೆಗಳಿವೆ. ಆದುದ ರಿಂದ ಮಾಸ್ಕ್ ಧಾರಣೆ, ಸಾರ್ವಜನಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮುಂತಾದ ಮುಂಜಾಗ್ರತಾ ಕ್ರಮಗಳನ್ನು ನಿರಂತರವಾಗಿ ಪಾಲಿಸಬೇಕು. ಕೊರೊನಾ ಸೋಂಕಿನಿಂದ ಚೇತರಿಸಿಕೊಂಡ ಬಳಿಕ ಕೊರೊನಾ ವ್ಯಾಕ್ಸಿನ್ ತೆಗೆದುಕೊಳ್ಳಬಹುದೇ ಅಥವಾ ತೆಗೆದುಕೊಳ್ಳುವುದಾದರೆ ಎಷ್ಟು ಸಮಯದ ಬಳಿಕ ತೆಗೆದುಕೊಳ್ಳ ಬಹುದು ಎಂಬ ಪ್ರಶ್ನೆಗಳು ಬಹಳಷ್ಟು ಜನರಿಂದ ಬರುತ್ತಿವೆ. ಕೊರೊನಾ ಸೋಂಕಿಗೆ ಒಳಗಾಗಿ ಗುಣಮುಖರಾದ ಅನಂತರ 3 ತಿಂಗಳ ಬಳಿಕ ಕೊರೊನಾ ವ್ಯಾಕ್ಸಿನ್ ತೆಗೆದುಕೊಳ್ಳಬಹುದು. - ಡಾ| ದೀಪಕ್ ಆರ್. ಮಡಿ, ಅಡಿಶನಲ್ ಪ್ರೊಫೆಸರ್ (ಮೆಡಿಸಿನ್),ಕೆಎಂಸಿ, ಮಂಗಳೂರು