Advertisement

ಕನ್ನಡ ಮಾಧ್ಯಮ ನಿರ್ಲಕ್ಷ್ಯ ಬೇಡ

03:17 PM Jan 04, 2018 | Team Udayavani |

ಸಿದ್ದಾಪುರ: ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ಈಗ ಕೀಳರಿಮೆಯಿಂದ ಬಳಲುತ್ತಿದ್ದಾರೆ. ಇನ್ನು ನೂರು ವರ್ಷಗಳ ನಂತರ ಕನ್ನಡ ಭಾಷೆಯೇ ಉಳಿಯುವುದಿಲ್ಲ ಎಂದು ಹಿರಿಯ ಸಾಹಿತಿ ಆರ್‌.ಡಿ. ಹೆಗಡೆ ಆಲಮನೆ ಹೇಳಿದರು.

Advertisement

ತಾಲೂಕಿನ ಹಲಗೇರಿ ಸರಕಾರಿ ಪ.ಪೂ.ಕಾಲೇಜಿನಲ್ಲಿ ವಾರ್ಷಿಕ ಪ್ರತಿಭಾ ಪುರಸ್ಕಾರ ಮತ್ತು ಕ್ರೀಡಾ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಿ ಅವರು ಮಾತನಾಡಿದರು. ಕನ್ನಡ ಇಂದು ಸಾಯುತ್ತಿರುವ ಭಾಷೆಗಳ ಪಟ್ಟಿಯಲ್ಲಿದೆ.  ಜೊತೆಯಲ್ಲಿ ಸಹ ಭಾಷೆಗಳಾದ ತುಳು, ಕೊಡವ ಭಾಷೆಗಳು ಇವೆ. ಹಿಂದೆ ಬುದ್ಧ, ಮಹಾವೀರರ ಕಾಲದಲ್ಲಿ ಜನಸಾಮಾನ್ಯರ ಭಾಷೆಯಾಗಿದ್ದ ಪಾಲಿ, ಪ್ರಾಕೃತ ಭಾಷೆ ಇಂದು ಉಳಿದಿಲ್ಲ. ನಾವಿಂದು ಕನ್ನಡವನ್ನು ಉಪೇಕ್ಷೆ ಮಾಡುತ್ತ ಮಕ್ಕಳನ್ನು ಇಂಗ್ಲಿಷ್‌ ಮಾಧ್ಯಮಕ್ಕೆ ಒತ್ತಾಯದಿಂದ ಕಳಿಸುತ್ತಿದ್ದೇವೆ. ಇಂಗ್ಲಿಷ್‌ ಮತ್ತು ಕನ್ನಡ ಮಾಧ್ಯಮದವರ ಮಧ್ಯೆ ತಾರತಮ್ಯ ಹೆಚ್ಚಾಗಿದೆ. ಇದರಿಂದ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ಕೀಳರಿಮೆಯಿಂದ ಬಳಲುತ್ತಿದ್ದಾರೆ ಎಂದರು.

ಕಾಲೇಜಿನಲ್ಲಿ ಸೇವೆ ಸಲ್ಲಿಸಿ ಕ್ರೀಡಾ ಇಲಾಖೆಯಲ್ಲಿ ಸಹಾಯಕ ನಿರ್ದೇಶಕರಾಗಿ ತೆರಳುತ್ತಿರುವ ಮಂಜುನಾಥ ಸ್ವಾಮಿ ಯವರನ್ನು
ಸನ್ಮಾನಿಸಿ ಬೀಳ್ಕೊಡಲಾಯಿತು. ಪ್ರಾಚಾರ್ಯ ಟಿ.ಜಿ. ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಬಾಲಕೃಷ್ಣ ನಾಯ್ಕ ವೇದಿಕೆಯಲ್ಲಿದ್ದರು. ರೋಹಿಣಿ ಮಡಿವಾಳ ಸ್ವಾಗತಿಸಿದರು. ವಿನುತಾ ವರದಿ ವಾಚಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next