Advertisement

ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ ತರಾತುರಿಯಲ್ಲಿ ಉದ್ಘಾಟನೆ ಬೇಡ

01:09 PM Jan 07, 2018 | Team Udayavani |

ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕಚೇರಿಯನ್ನು ತರಾತುರಿಯಲ್ಲಿ ಉದ್ಘಾಟನೆ ಮಾಡಲು ಸರ್ಕಾರ ಹೊರಟಿದ್ದು, ಕೂಡಲೇ ಉದ್ಘಾಟನೆ ಸ್ಥಗಿತಗೊಳಿಸಬೇಕು ಎಂದು ಶಾಸಕ ಹಾಗೂ ಬಿಜೆಪಿ ದೇವನಹಳ್ಳಿಗೆ ಉಸ್ತುವಾರಿ ಎಸ್‌.ಮುನಿರಾಜು ಸರ್ಕಾರವನ್ನು ಆಗ್ರಹಿಸಿದರು.

Advertisement

ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ. 14ರಂದು ಜಿಲ್ಲಾ ಸಂಕೀರ್ಣಗಳ ಉದ್ಘಾಟನೆ ನಿಗದಿಪಡಿಸಿದ್ದು, ಇನ್ನೂ ಕಾಮಗಾರಿಗಳು ಪೂರ್ಣಗೊಂಡಿಲ್ಲ. ಕಾಂಗ್ರೆಸ್‌ನವರು ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದು ಎಲ್ಲೆಡೆ ಪ್ರಚಾರಗಳಲ್ಲಿ ಹೇಳಿಕೊಂಡು ತಿರುಗುತ್ತಿದ್ದಾರೆ.

ಆದರೆ ಜಿಲ್ಲಾಧಿಕಾರಿಗಳ ಕಚೇರಿ ಉದ್ಘಾಟನೆ ಮಾಡುವುದಕ್ಕೆ ಅವಸರವೇನಿದೆ. ಮತ್ತೆ ಅಧಿಕಾರಕ್ಕೆ ಬರುವುದಿಲ್ಲ ಎಂಬ ಭಯದಿಂದ ತರಾತುರಿಯಲ್ಲಿ ಮಾಡಲು ಹೊರಟಿದ್ದಾರೆ. ಮುಖ್ಯಮಂತ್ರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಕೂಡಲೇ
ದಿನಾಂಕವನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.

ರೈತರು ಹಣ ಎಲ್ಲಿಂದ ತರಬೇಕು: ಅಂತಾರಾಷ್ಟ್ರಿಯ ವಿಮಾನ ನಿಲ್ದಾಣ ಯೋಜನಾ ಪ್ರಾಧಿಕಾರದಲ್ಲಿ ಸಾಕಷ್ಟು ಅವ್ಯವಹಾರಗಳು ಆಗಿವೆ. ಇದರ ಬಗ್ಗೆ ಕೂಡಲೇ ಸರ್ಕಾರಕ್ಕೆ ಪತ್ರ ಬರೆಯುತ್ತೇವೆ. ಅವ್ಯವಹಾರವಾಗಿರುವುದರಿಂದ
ತನಿಖೆ ಕೈಗೊಳ್ಳಬೇಕು. ಎಷ್ಟು ಹಣ ಸರ್ಕಾರದಿಂದ ಮಂಜೂರಾತಿಯಾಗಿದೆ. ನಿವೇಶನಗಳಿಂದ ಎಷ್ಟು ಹಣ ಬಂದಿದೆ ಎಂಬುವುದರ ಮಾಹಿತಿ ಬಹಿರಂಗ ಪಡಿಸಬೇಕು. 

ಇಲ್ಲದಿದ್ದರೆ ಹೋರಾಟ ರೂಪಿಸಲಾಗುವುದು. ಕಂದಾಯ ಇಲಾಖೆಯಲ್ಲಿ ಒಂದು ಎಕರೆ ಪೋಡಿಯಾಗಬೇಕಾದರೆ 5-6ಲಕ್ಷ ರೂ. ಹಣ ಕೊಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಂದಾಯ ಇಲಾಖೆ ಸಚಿವ ಕಾಗೋಡು ತಿಮ್ಮಪ್ಪಇಂತಹ ಸಮಸ್ಯೆ ಕೂಡಲೇ ಬಗೆಹರಿಸಬೇಕು ಎಂದು ಆಗ್ರಹಿಸಿದರು.

Advertisement

ಇಂಧನ ಸಚಿವರ ಪುಕ್ಕಟೆ ಪ್ರಚಾರ: ತಾಲೂಕಿನಲ್ಲಿ ರೈತರಿಗೆ ಸರಿಯಾದ ರೀತಿ ವಿದ್ಯುತ್‌ ಇಲ್ಲದೇ ಸಮರ್ಪಕವಾಗಿ ಬೆಳೆ ಬೆಳೆಯಲು ಸಾಧ್ಯವಾಗುತ್ತಿಲ್ಲ. ಇಂಧನ ಸಚಿವರು ಸಮರ್ಪಕವಾಗಿ ವಿದ್ಯುತ್‌ ನೀಡುತ್ತಿದ್ದೇವೆ ಎಂದು ಪುಕ್ಕಟೆ ಪ್ರಚಾರ ಪಡೆಯುತ್ತಿದ್ದಾರೆ. ವಾಸ್ತವದಲ್ಲಿ ಇಲ್ಲಿನ ಸಮಸ್ಯೆ ಹಾಗೆ ಉಳಿದಿದೆ. ಹಲವಾರು ಗ್ರಾಮಗಳಿಗೆ ಬಸ್‌ಗಳ ಸೌಕರ್ಯವು ಇಲ್ಲದೇ ವಂಚಿತವಾಗಿ ಉಳಿದಿದೆ. ಸಂಸದ ವೀರಪ್ಪಮೊಯ್ಲಿ ಎತ್ತಿನಹೊಳೆ ಯೋಜನೆಯನ್ನು ಎರಡು ವರ್ಷದಲ್ಲಿ ತರುತ್ತೇವೆ ಎಂದು ಹೇಳಿ 5 ವರ್ಷಗಳು ಕಳೆದರೂ ಎತ್ತಿನಹೊಳೆ ನೀರು ಬಂದಿಲ್ಲ. ಗ್ರಾಮೀಣ ಪ್ರದೇಶದಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದೆ ಎಂದು ಹೇಳಿದರು. ಬಿಜೆಪಿ ಪರಿವರ್ತನಾ ರ್ಯಾಲಿ ಜ.16ರಂದು ಹೊಸಕೋಟೆ ಮೂಲಕ ದೇವನಹಳ್ಳಿಗೆ ಬರಲಿದ್ದು, ನಂತರ ದೊಡ್ಡಬಳ್ಳಾಪುರಕ್ಕೆ ಹೋಗಲಿದೆ. 

 ಬಿಜೆಪಿ ಕಾಮಗಾರಿ ಪೂರ್ಣಗೊಳ್ಳದಿದ್ದರೂ ಅವಸರವೇಕೆ:
ಮುನಿರಾಜುಕೇಂದ್ರ ಸಚಿವರು, ಸಂಸದರು, ಶಾಸಕರು ಒಳಗೊಂಡಂತೆ ಪಕ್ಷದ ಮುಖಂಡರು ಭಾಗವಹಿಸಲಿದ್ದಾರೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಆದೇಶದಂತೆ ದೇವನಹಳ್ಳಿಗೆ ಉಸ್ತುವಾರಿಯನ್ನಾಗಿ ತಮ್ಮನ್ನು ನೇಮಿಸಿದ್ದಾರೆ. ಅದಕ್ಕಾಗಿ ವಿಧಾನಸಭಾ ಕ್ಷೇತ್ರದ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಲಾಗುತ್ತಿದೆ ಎಂದರು.

ಈ ವೇಳೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ರಾಜಣ್ಣ, ತಾಲೂಕು ಸೊಸೈಟಿ ಮಾಜಿ ಅಧ್ಯಕ್ಷ ಎ.ವಿ.ನಾರಾಯಣಸ್ವಾಮಿ, ನೀತಿ ನಿರೂಪಣೆ ಮತ್ತು ರಾಜಕೀಯ ವಿಶ್ಲೇಷಣೆ ಜಿಲ್ಲಾ ಪ್ರಕೋಷ್ಠ ಸಂಚಾಲಕ ಡಿ.ಆರ್‌.ನಾರಾಯಣಸ್ವಾಮಿ, ತಾಲೂಕು ಬಿಜೆಪಿ ಅಧ್ಯಕ್ಷ ಸಿ.ನಾಗರಾಜಗೌಡ, ಪ್ರಧಾನ ಕಾರ್ಯದರ್ಶಿ ಸೊಣ್ಣೇಗೌಡ, ರಾಜ್ಯ ಪರಿಷತ್‌ ಸದಸ್ಯ ದೇಸು ನಾಗರಾಜ್‌, ಜಿಲ್ಲಾ ಮಾಧ್ಯಮ ಪ್ರಮುಖ್‌ ಎಸ್‌.ರಮೇಶ್‌ ಕುಮಾರ್‌, ಬೂತ್‌ ಮಟ್ಟದ ಸಂಚಾಲಕ ಶಿವಪ್ರಸಾದ್‌, ಜಿಲ್ಲಾ ರೈತಮೋರ್ಚಾ ಅಧ್ಯಕ್ಷ ಎನ್‌.ರಾಜಗೋಪಾಲ್‌, ತಾಲೂಕು ರೈತಮೋರ್ಚಾ ಉಪಾಧ್ಯಕ್ಷ ಜಿ.ಎನ್‌.ಗೋಪಾಲ್‌, ತಾಲೂಕು ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಡಿ.ಆರ್‌.ಬಾಲರಾಜ್‌, ತಾಲೂಕು ಖಜಾಂಚಿ ಮಂಜುನಾಥ್‌ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next