Advertisement

ರೈತರನ್ನು ಕಚೇರಿಗೆ ಸುತ್ತಿಸಬೇಡಿ: ಶಾಸಕ ಮಂಜು ತಾಕೀತು

12:03 PM Jun 24, 2019 | Suhan S |

ಮಾಗಡಿ: ರೈತರನ್ನು ಕಚೇರಿಗೆ ಸುತ್ತಿಸಬೇಡಿ, ಎಲ್ಲಾ ಪಂಪ್‌ಸೆಟ್‌ಗಳಿಗೆ ಅಗತ್ಯ ಟೀಸಿಗಳನ್ನು ಶೀಘ್ರ ಅಳವಡಿಸಿ 2 ತಿಂಗಳೊಳಗಾಗಿ ವಿದ್ಯುತ್‌ ಸಮಸ್ಯೆ ಬಗೆಹರಿಸಬೇಕು ಎಂದು ಶಾಸಕ ಎ.ಮಂಜು ಬೆಸ್ಕಾಂ ಇಇ ಚಿಕ್ಕೇಗೌಡ ಗೆ ತಾಕೀತು ಮಾಡಿದರು.

Advertisement

ತಾಪಂ ಸಭಾಂಗಣದಲ್ಲಿ ಉಪವಿಭಾಗ ಬೆಸ್ಕಾಂ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಎಲ್ಲೆಲ್ಲೂ ವಿದ್ಯುತ್‌ ಸಮಸ್ಯೆ ತಾಂಡವಾಡುತ್ತಿದೆ. ಸಮರ್ಪಕವಾಗಿ ಉತ್ತಮ ಸೇವೆ ಕೊಡುತ್ತಿದ್ದೇವೆ ಎಂದು ಆತ್ಮವಲೋಕನ ಮಾಡಿಕೊಳ್ಳಬೇಕಿದೆ. ಕಳೆದ ವರ್ಷದಿಂದ ಟೀಸಿಗಾಗಿ ರೈತರು ಅಲೆದು ಅಲೆದು ಸುಸ್ತಾಗಿ ಹೋಗಿದ್ದಾರೆ. ಟೀಸಿ ಸಮಸ್ಯೆ ಇದ್ದರೆ ತನ್ನ ಗಮನಕ್ಕೆ ತನ್ನಿ. ಸರ್ಕಾರದಿಂದ ಏನೆಲ್ಲಾ ಸವಲತ್ತುಗಳು ಬೇಕೋ ಎಲ್ಲವನ್ನೂ ಒದಗಿಸುತ್ತೇನೆಂದು ಹೇಳಿದರು.

ಎಲ್ಲೆಲ್ಲಿ ಸಮಸ್ಯೆಗಳಿವೆ. ಬೆಸ್ಕಾಂ ಸಂಬಂಧ ಪಟ್ಟ ಏರಿಯಾದ ಲೈನ್‌ ಮ್ಯಾನ್‌ಗಳು ಪಟ್ಟಿ ಮಾಡಿ ಮೇಲಧಿಕಾರಿಗಳಿಗೆ ಮಾಹಿತಿ ನೀಡಿದರೆ ಅವರು ರೈತರೊಂದಿಗೆ ಚರ್ಚಿಸಿ ಅವರ ಸಮಸ್ಯೆ ಬಗೆಹರಿ ಸುತ್ತಾರೆ. ಪ್ರತಿ ತಿಂಗಳು ಈ ಕುರಿತು ಸಂಪೂರ್ಣ ಮಾಹಿತಿ ನೀಡಬೇಕು. ಮುಂದಿನ ಸಭೆಯಲ್ಲಿ ಚರ್ಚಿಸಿ ಸಮಸ್ಯೆ ಬಗೆಹರಿಸಲು ಪರಿಹಾರ ಹುಡು ಕಲಾಗುವುದು ಎಂದು ತಿಳಿಸಿದರು.

ಯೋಜನೆ ಅನುಷ್ಠಾನಗೊಳಿಸಿ: ಕೇಂದ್ರ ಸರ್ಕಾರದ ದೀನದಯಾಳು ಉಪಾಧ್ಯಾಯ ಯೋಜನೆಯಡಿ ಮಾಗಡಿ ಉಪವಿಭಾಗಕ್ಕೆ 1.89 ಕೋಟಿ ರೂ. ಹಣ ಬಿಡುಗಡೆಯಾಗಿದೆ ಎಂದು ಇಇ ಚಿಕ್ಕೇಗೌಡ ಶಾಸಕ ಗಮನಕ್ಕೆ ತಂದರು. ಈ ಕುರಿತು ಶಾಸಕರು ಚರ್ಚಿಸಿ ಕ್ಷೇತ್ರದಲ್ಲಿ ಎಲ್ಲೆಲ್ಲಿ ಬಡವರ ಮನೆಗಳಿಗೆ ವಿದ್ಯುತ್‌ ಸಂಪರ್ಕಗಳು ಬೇಕಿದೆಯೋ ಅಲ್ಲಿಗೆ ತೆರಳಿ ಸರ್ವೇ ಮಾಡಿ ಶೀಘ್ರ ಮನೆಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸಿ ಎಂದು ಸೂಚಿಸಿದರು. ಈ ವೇಳೆ ಇಇ ಚಿಕ್ಕೇಗೌಡ ಪ್ರತಿಕ್ರಿಯಿಸಿ, 1650 ಮನೆಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸಲು ಪ್ರಾವಿಷನ್‌ ಮಾಡಿಕೊಳ್ಳಲಾಗಿದೆ ಎಂದರು.

Advertisement

ಟೀಸಿಗೆ ಸಮಸ್ಯೆಯಿಲ್ಲ: ತಾಲೂಕಿನಲ್ಲಿ ಟೀಸಿಗಳಿಗೆ ಸಮಸ್ಯೆ ಇಲ್ಲ. ರೈತರು ಅಗತ್ಯ ದಾಖಲೆ ನೀಡಿದರೆ ಸಾಕು, ಎಚ್ವಿಡಿಎಸ್‌ ಯೋಜನೆಯಡಿ ಶೀಘ್ರ ಟೀಸಿ ಅಳವಡಿಸಿಕೊಡಲು ಬೆಸ್ಕಾಂ ಇಲಾಖೆ ಸದಾ ಸಿದ್ಧವಿದೆ ಎಂದು ಇಇ ಚಿಕ್ಕೇಗೌಡ ಶಾಸಕರ ಗಮನಕ್ಕೆ ತಂದರು.

ನಿರಂತರ ಜ್ಯೋತಿ: ಇದೊಂದು ವಿಶೇಷ:

ಯೋಜನೆಯಾಗಿದೆ. ಆದರೆ ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಯೋಜನೆ ಹಳ್ಳ ಹಿಡಿಯುತ್ತಿದೆ. ಯಾವುದೇ ಹಳ್ಳಿಗೆ ಹೋದರೂ ಟೀಸಿ ಮತ್ತು ನಿರಂತರ ಜ್ಯೋತಿ ಕುರಿತು ಸಮಸ್ಯೆಗಳನ್ನು ಹೇಳುತ್ತಿದ್ದಾರೆ. ಗುತ್ತಿಗೆದಾರರು ಸುಖಾ ಸುಮ್ಮನೆ ಕಾಲಹರಣ ಮಾಡದೆ, ರೈತರಿಗೆ ತಪ್ಪು ಮಾಹಿತಿ ನೀಡುವುದನ್ನು ಬಿಟ್ಟು, ನಿರಂತರ ಜ್ಯೋತಿ ಅನುಷ್ಠಾನಗೊಳಿಸುವಂತೆ ಸಂಬಂಧಪಟ್ಟ ಗುತ್ತಿಗೆ ದಾರರಿಗೆ ಶಾಸಕರು ತಾಕೀತು ಮಾಡಿ ದರು. ಇಲ್ಲದಿದ್ದರೆ ನಿರ್ದಾಕ್ಷಿಣ್ಯವಾಗಿ ಶಿಸ್ತಿನ ಕ್ರಮ ಜರು ಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸ್ಥಳ ಗುರುತಿಸಿ: ತಾಲೂಕಿನ ತಿಪ್ಪಸಂದ್ರ ಮತ್ತು ಸೋಲೂರು ಹೋಬಳಿ ವ್ಯಾಪ್ತಿಯ ವಿದ್ಯುತ್‌ ಸ್ಟೇಷನ್‌ಗಳು ಬಾಡಿಗೆ ಕಟ್ಟಡದಲ್ಲಿ ಸೇವೆ ನೀಡುತ್ತಿವೆ. ಆಯಾ ಪಂಚಾಯ್ತಿ ವ್ಯಾಪ್ತಿಯಲ್ಲಿ ಸರ್ಕಾರಿ ಜಾಗ ಗುರುತಿಸಿದರೆ ಸ್ಟೇಷನ್‌ ಕಟ್ಟಡ ನಿರ್ಮಾಣ ಕಾಮಗಾರಿಗೆ ಕ್ರಮ ಕೈಗೊಳ್ಳಲಾಗು ವುದು ಎಂದು ಶಾಸಕರು ಬೆಸ್ಕಾಂ ಎಂಜಿನಿಯರ್‌ಗೆ ಸೂಚಿಸಿದರು.

ಇದೇ ವೇಳೆ ವಿವಿಧ ವಿದ್ಯುತ್‌ ಕಾಮಗಾರಿಗಳ ಕುರಿತು ಶಾಸಕರು ಅಧಿಕಾರಿ ವರ್ಗದೊಂದಿಗೆ ಚರ್ಚಿಸಿದರು. ಅಧಿಕಾರಿಗಳ ಸಭೆಯಲ್ಲಿ ಬಿಇಒ ಎಸ್‌.ಸಿದ್ದೇಶ್ವರ್‌, ತಾಪಂ ಇಒ ಚಂದ್ರ, ಎಇಇ ಗುರುಸಿದ್ದಪ್ಪ, ಕಾಮಗಾರಿ ವಿಭಾಗದ ಎಇಇ ಸುಧಾಕರ್‌, ಎಇ ಶಿವರಾಜು, ಎಲ್. ನರಸಿಂಹ ಮೂರ್ತಿ, ಎಂ.ಹರೀಶ್‌, ಎಚ್.ವಿ.ರವಿ, ಅನ್ನ ಪೂರ್ಣ, ಸುಜಾತಾ, ದಿವ್ಯಾ, ಗಿರಿಜಾ ಇದ್ದರು.

ಅಕ್ರಮ ಪಂಪ್‌ ಸೆಟ್ ಪತ್ತೆ ಮಾಡಿ:

ತಾಲೂಕಿನಲ್ಲಿ ಅಕ್ರಮ ಪಂಪ್‌ ಸೆಟ್‌ಗಳು ಪತ್ತೆ ಮಾಡಿ, ಪಟ್ಟಿ ಮಾಡಬೇಕಿದ್ದು ತಾಲೂಕಿನ ಗಡಿ ಭಾಗಗಳಾದ ಕುಣಿಗಲ್, ಹೆಬ್ಬೂರು ಇತರೆಡೆ ವಿದ್ಯುತ್‌ ಸಂಪರ್ಕ ಸೇವೆಯ ಸಮಸ್ಯೆಗಳನ್ನು ನೆರೆ ತಾಲೂಕಿನ ಉಭಯ ಅಧಿಕಾರಿಗಳೊಂದಿಗೆ ಕುಳಿತು ಚರ್ಚಿಸಿ, ಸಮಸ್ಯೆ ಬಗೆಹರಿಸಿ. ಇನ್ನು ಚಿಕ್ಕಕಲ್ಯಾ, ಗವಿನಾಗಮಂಗಲ, ಶ್ರೀಗಿರಿಪುರ ಇತ ರೆಡೆಗಳ ವಿದ್ಯುತ್‌ ಸಮಸ್ಯೆಗಳ ನಿವಾರಣೆಗೆ ಕ್ರಮ ಕೈಗೊಳ್ಳಬೇಕಿದೆ ಎಂದು ಶಾಸಕಎ.ಮಂಜು ಎಂಜಿನಿಯರ್‌ಗಳಿಗೆ ಸೂಚನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next