Advertisement
ಅವರು ಮೊಗವೀರ ಕುಟುಂಬದ ಹಿರಿಯ ಆದರ್ಶ ಮಹಿಳೆ, ಜೀವನದ 82 ವರ್ಷಗಳಲ್ಲಿ ಬಹುತೇಕ 75 ವರ್ಷಗಳಷ್ಟು ಕಾಲ ಕುಲಕಸುಬು ಮೀನು ಮಾರಾಟ ಮಾಡಿ ಸಾರ್ಥಕ ಬದುಕನ್ನು ಕಂಡಿರುವ ಕೋಡಿಕನ್ಯಾಣದ ಮೀನ ಮರಕಾಲ್ತಿ (ಮೀನಕ್ಕ) ಅವರಿಗೆ ರವಿವಾರ ಸಾಲಿಗ್ರಾಮ ಹಳೆಕೋಟೆ ಮೈದಾನದಲ್ಲಿ “ಮತ್ಸ್ಯ ಜ್ಯೋತಿ’ ಬಿರುದು ಪ್ರದಾನ ಮಾಡಿ ಮಾತನಾಡಿದರು.
ಮೀನಕ್ಕನನ್ನು ನೋಡಿದಾಗ ನನ್ನ ತಾಯಿ ಲಕ್ಷಿ ¾à ಬಂಗೇರ ಕಣ್ಣೆದುರು ಬರುತ್ತಾರೆ. ಇವರ ತ್ಯಾಗ, ಜೀವನ ಪ್ರೇಮ ನಮಗೆಲ್ಲ ಆದರ್ಶವಾಗಿದೆ. ಮುಂದೆ ಪ್ರತೀ ವರ್ಷ ದಕ್ಷಿಣ ಕನ್ನಡದ ಉಳ್ಳಾಲದಿಂದ ಉಡುಪಿಯ ಶಿರೂರು ವರೆಗಿನ ಹಳೆಯ ತಲೆಮಾರಿನ, ಸಾಂಪ್ರದಾಯಿಕ ಮೀನುಗಾರಿಕಾ ವೃತ್ತಿ ನಿರತ 50 ವರ್ಷಗಳ ಕಾಲ ಮೀನು ಮಾರಾಟದಲ್ಲಿ ತಮ್ಮನ್ನು ನಿರಂತರವಾಗಿ ತೊಡಗಿಸಿಕೊಂಡ ಆಯ್ದ 10 ಮಹಿಳಾ ಕಾರ್ಮಿಕರನ್ನು ಡಾ| ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ವತಿಯಿಂದ ಗುರುತಿಸಲಾಗುವುದು. ಈ ಮೂಲಕ ಮೀನುಗಾರಿಕೆ ವೃತ್ತಿಯ ಬಗೆಗಿನ ಕೀಳರಿಮೆ ಹೋಗಲಾಡಿಸಿ, ಗೌರವ ನೀಡಲು ಪ್ರೇರೇಪಿಸಲಾಗುವುದು ಎಂದರು. ಒಳನಾಡು ಮೀನುಗಾರರು ಸರಕಾರದ ಸವಲತ್ತುಗಳಿಂದ ವಂಚಿತರಾಗಿದ್ದು, ಅವರಿಗೆ ಕೂಡ ಸವಲತ್ತುಗಳನ್ನು ಕೊಡಿಸುವಲ್ಲಿ ಹೋರಾಟ ನಡೆಸಲಾಗುವುದು ಎಂದರು.
ಉಡುಪಿ ಜಿಲ್ಲಾ ಮೊಗವೀರ ಯುವಸಂಘಟನೆಯ ಜಿಲ್ಲಾಧ್ಯಕ್ಷ ಗಣೇಶ ಕಾಂಚನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
Related Articles
ಈ ಸಂದರ್ಭ ಸುಮಾರು 50 ವರ್ಷಗಳಿಂದ ಮೀನುಗಾರಿಕೆ ವೃತ್ತಿನಿರತ ಲಕ್ಷ್ಮೀ ಮರಕಾಲ್ತಿ, ಗೋಪಿ ಮರಕಾಲ್ತಿ, ಲಕ್ಷ್ಮೀ ಪಾಂಡೇಶ್ವರ, ನಾಗು ಮಧುವನ, ಬೋಳು ಮರಕಾಲ್ತಿ, ಭಾಗಿ ಮರಕಾಲ್ತಿ, ಭಾಗಿ ಗುಂಡ್ಮಿ, ಅಂಬಾ ಖಾರ್ವಿ ಮುಂತಾದವರನ್ನು ಸಮ್ಮಾನಿಸಲಾಯಿತು.
Advertisement
ಕರಾವಳಿ ಮೊಗವೀರ ಮಹಾಜನಸಂಘದ ಅಧ್ಯಕ್ಷ ಆನಂದ ಸಿ. ಕುಂದರ್, ಉಚ್ಚಿಲ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಗಂಗಾಧಕ ಕರ್ಕೇರ, ಬೆಣ್ಣೆಕುದ್ರು ಮೊಗವೀರ ಸಂಯುಕ್ತ ಸಭಾದ ಅಧ್ಯಕ್ಷ ವಿಶ್ವನಾಥ ಮಾಸ್ಟರ್, ಬಗ್ವಾಡಿ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಕೆ.ಕೆ. ಕಾಂಚನ್, ಹೆಮ್ಮಾಡಿ ಮೀನುಗಾರರ ಸಂಘದ ವ್ಯವಸ್ಥಾಪಕ ಉದಯ ಕುಮಾರ್ ಹಟ್ಟಿಯಂಗಡಿ, ಮೊಗವೀರ ಯುವ ಸಂಘಟನೆ ಸಾಲಿಗ್ರಾಮ ಘಟಕದ ಅಧ್ಯಕ್ಷ ಸತೀಶ ಮರಕಾಲ, ಕೋಟ ಘಟಕದ ಗಿರೀಶ್ ಬಂಗೇರ, ಸಾಲಿಗ್ರಾಮ ಮಹಿಳಾ ಘಟಕದ ಗೀತಾ ಭಾಸ್ಕರ್, ಕೋಟ ಘಟಕದ ಗುಲಾಬಿ ದೇವದಾಸ ಬಂಗೇರ ಹಾಗೂ ಮೊಗವೀರ ಸಮಾಜದ ಮುಖಂಡರಾದ ಅಜೀತ್ ಸುವರ್ಣ, ಟಿ. ಗಣಪತಿ ಶ್ರೀಯಾನ್, ಗೋಪಾಲ ಕಾಂಚನ್, ಕೆ.ಎಲ್. ಬಂಗೇರ, ಕೇಶವ ಕುಂದರ್, ಬೇಬಿ ಎಸ್. ಸಾಲ್ಯಾನ್, ಸುಶೀಲಾ ಸೋಮಶೇಖರ, ಬಾಬು ಎಸ್. ಕಾವಡಿ ಉಪಸ್ಥಿತರಿದ್ದರು.
ಯುವಸಂಘಟನೆಯ ಕೋಟ ಘಟಕದ ಸತೀಶ ಮರಕಾಲ ಸ್ವಾಗತಿಸಿ, ಶಿವರಾಮ ಕೆ.ಎಂ. ಕಾರ್ಯಕ್ರಮ ನಿರೂಪಿಸಿದರು.
ಮೀನಕ್ಕಗೆ ಮೀನಿನ ತುಲಾಭಾರ“ಮತ್ಸ್ಯ ಜ್ಯೋತಿ’ ಬಿರುದು ಪ್ರದಾನ ಮಾಡಿ ಸಮ್ಮಾನಿಸುವ ಸಂದರ್ಭ ಮೀನಕ್ಕ ಅವ ರನ್ನು ಬಂಗಡಿ ಮೀನಿನಿಂದ ತುಲಾಭಾರ ಮಾಡಿದ್ದು ವಿಶೇಷವಾಗಿತ್ತು ಹಾಗೂ ಗಾಳದಿಂದ ಮೀನು ಹಿಡಿಯುವ ಮಾದರಿಯಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.