Advertisement
ನಗರದ ಪ್ರಸನ್ನಹಳ್ಳಿ ರಸ್ತೆಯ ಆಕಾಶ್ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮತಗಟ್ಟೆ ಅಧಿಕಾರಿಗಳು ಮತ್ತು ಸಹಾಯಕ ಅಧಿಕಾರಿಗಳಿಗೆ ಮತಯಂತ್ರ ಮತ್ತು ವಿವಿ ಪ್ಯಾಟ್ ನಿರ್ವಹಣೆ ಬಗ್ಗೆ ತಾಲೂಕು ಆಡಳಿತ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಮಾತನಾಡಿದರು.
Related Articles
Advertisement
ಮತಗಟ್ಟೆ ಸಂಖ್ಯೆ ಖಾತ್ರಿ ಮಾಡಿಕೊಳ್ಳಿ: ಮತದಾನದ ಹಿಂದಿನ ದಿನ ಬೆಳಗ್ಗೆ ಮತಗಟ್ಟೆ ಅಧಿಕಾರಿಗಳು ತಮ್ಮ ತಂಡದ ಸಮೇತ ಮಾಸ್ಟರಿಂಗ್ ಕೇಂದ್ರದಲ್ಲಿರಬೇಕು. ಮತಗಟ್ಟೆಗೆ ತಲುಪಿದ ಮೇಲೆ ತಮಗೆ ಹಂಚಿಕೆಯಾದ ಮತಗಟ್ಟೆ ಒಳ ಪ್ರವೇಶಿಸುವ ಮುನ್ನಾ ಮತಗಟ್ಟೆ ಸಂಖ್ಯೆ ನೋಡಿ ತಮಗೆ ಹಂಚಿಕೆಯಾದುದೇ ಎಂಬುವುದರ ಬಗ್ಗೆ ಖಾತ್ರಿ ಮಾಡಿಕೊಳ್ಳಬೇಕು ಎಂದರು.
ಮತದಾನದ ಅಣಕು ಪ್ರದರ್ಶನ ನಡೆಸಿ: ಮತದಾನದ ದಿನ ಬೆಳಗ್ಗೆ 6 ರಿಂದ 7ರವರೆಗೆ ಬೂತ್ ಏಜೆಂಟರಿಗೆ ಮತ್ತು ಸಾರ್ವಜನಿಕರಿಗೆ ಮತದಾನದ ಅಣಕು ಪ್ರದರ್ಶನ ಮಾಡಬೇಕು. ಬೆಳಗ್ಗೆ 6.15ರ ತನಕ ಯಾರು ಬರುತ್ತಾರೋ, ಬರುವುದಿಲ್ಲವೋ ಎಂಬುದನ್ನು ಖಾತರಿಪಡಿಸಿಕೊಂಡು, ಯಾರು ಬಂದಿಲ್ಲ ಎಂಬುದರನು ಢೀಕರಣ ಪತ್ರ ನೀಡಬೇಕು. ಕನಿಷ್ಠ 50 ಮತಗಳನ್ನು ಚಲಾಯಿಸಬೇಕು ಎಂದು ಮಾಹಿತಿ ತಿಳಿಸಿದರು.
ನೋಟಕ್ಕೂ ಒಂದು ಮತ ಹಾಕಿ: ಎಲ್ಲಾ ಅಭ್ಯರ್ಥಿಗಳಿಗೆ ಮತ ಚಲಾವಣೆಯಾಗದಂತೆ ನೋಡಿಕೊಳ್ಳಬೇಕು. ನೋಟಕ್ಕೂ ಕನಿಷ್ಠ ಒಂದು ಮತ ಚಲಾಯಿಸಬೇಕು. ಪಿಆರ್‌ಒ ಹಾಜರಿದ್ದ ಏಜೆಂಟರ ಮಾಹಿತಿಯನ್ನು ಬರೆದಿಟ್ಟುಕೊಳ್ಳಬೇಕು. ಅಣಕು ಮತದಾರರ ಪ್ರಮಾಣ ಪತ್ರ ಸಿದ್ಧಪಡಿಸಿಕೊಳ್ಳಬೇಕು ಎಂದರು.
ಬೆ.7ರಿಂದ ಸಂಜೆ 6ರ ವರೆಗೆ ಮತದಾನ: ಏಪ್ರಿಲ್ 18ರಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದೆ. ಮತಗಟ್ಟೆಯಲ್ಲಿ ತಗುಲಿ ಹಾಕಿರುವ ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದ ಯಾವುದೇ ನಾಯಕರ ಭಾವಚಿತ್ರಗಳನ್ನು ತೆಗೆದುಹಾಕಬೇಕು ಅಥವಾ ಪೂರ್ತಿಯಾಗಿ ಮುಚ್ಚಿಡಬೇಕು.
ನೀವು ನಿಮ್ಮ ಪೋಲಿಂಗ್ ಅಧಿಕಾರಿಗಳು ಮತ್ತು ಉಮೇದುದಾರರ ಪೊಲೀಂಗ್ ಏಜೆಂಟರು ಕುಳಿತುಕೊಳ್ಳುವ ಸ್ಥಳ ಮತ್ತು ಮತಯಂತ್ರಗಳನ್ನು ಇಡುವ ಸ್ಥಳವನ್ನು ನಿರ್ಧರಿಸಬೇಕು. ಮತಗಟ್ಟೆಗಳಿಂದ 100 ಮೀ. ದೂರವನ್ನು ಗುರುತು ಮಾಡಿಸಿ ಗಮನಿಸಬೇಕು. ಕಾರ್ಯಾಗಾರದಲ್ಲಿ ಕಲಿತಿರುವುದನ್ನು ಅನುಸರಿಸಿದರೆ ಚುನಾವಣೆ ನಡೆಸಬಹುದು ಎಂದು ತಿಳಿಸಿದರು.
ಈ ವೇಳೆ ತಹಶೀಲ್ದಾರ್ ಮಂಜುನಾಥ್, ಗ್ರೇಡ್ 2 ತಹಶೀಲ್ದಾರ್ ಬಾಲಕೃಷ್ಣ, ಪುರಸಭಾ ಮುಖ್ಯಾಧಿಕಾರಿ ಹನುಮಂತೇಗೌಡ, ವಿಜಯಪುರ ಪುರಸಭಾ ಮುಖ್ಯಾಧಿಕಾರಿ ನಾಗರಾಜ್, ಕ್ಷೇತ್ರ ಶಿಕ್ಷಣಾಧಿಕಾರಿ ಗಾಯಿತ್ರಿದೇವಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ಅಧಿಕಾರಿ ಚನ್ನಬಸಪ್ಪ, ಉಪ ತಹಶೀಲ್ದಾರ್ ಚಿದಾನಂದ್, ರಾಜಸ್ವ ನಿರೀಕ್ಷಕ ಚಂದ್ರಶೇಖರ್ ಮತ್ತಿತರರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.