Advertisement
ಇಲ್ಲಿನ ತರಾಸು ರಂಗಮಂದಿರದಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಚಿತ್ರದುರ್ಗ ವಿಭಾಗ, ಎಸ್ಸಿ-ಎಸ್ಟಿ ಅಧಿಕಾರಿಗಳ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಅಂಬೇಡ್ಕರ್, ವಾಲ್ಮೀಕಿ ಹಾಗೂ ಕನಕ ಜಯಂತಿ ಸಮಾರಂಭದಲ್ಲಿ ಅವರು ಉಪನ್ಯಾಸ ನೀಡಿದರು.
ಅವರನ್ನು ಸದಾ ಸ್ಮರಣೀಯರು ಎಂದರು. ಮಹಾನ್ ಸಾಧಕರನ್ನು ಕೇವಲ ಅವರವರ ಜಾತಿ, ಧರ್ಮಗಳಿಗೆ ಸೀಮಿತಗೊಳಿಸುವುದು ಬೇಡ. ಏಕೆಂದರೆ ಅವರು ಕೋಟ್ಯಂತರ ಶೋಷಿತ ಜನರ ಧ್ವನಿಯಾಗಿ ಕೆಲಸ ಮಾಡಿದ್ದಾರೆ. ಎಲ್ಲ ಜಾತಿ, ಧರ್ಮದವರ ಮಹಾನ್ ಸಾಧಕರ ಜಯಂತಿಗಳನ್ನು ಒಟ್ಟಿಗೆ ಆಚರಿಸುವುರಿಂದ ಸೌಹಾರ್ದತೆ ಸಾಧ್ಯ ಎಂದು ಪ್ರತಿಪಾದಿಸಿದರು.
ಶೋಷಿತ ಸಮುದಾಯಗಳಲ್ಲಿ ಒಗ್ಗಟ್ಟು ಮೂಡಬೇಕು. ಅದಕ್ಕಾಗಿ ಶಿಕ್ಷಣಕ್ಕೆ ಒತ್ತು ನೀಡಬೇಕು. ಸ್ವಾವಲಂಬಿಗಳಾಗಿ ಜೀವನ ಕಟ್ಟಿಕೊಳ್ಳಲು ಪ್ರಯತ್ನಿಸಬೇಕು ಎಂದು ಕರೆ ನೀಡಿದರು.
Related Articles
ವಾಲ್ಮೀಕಿ ಬದುಕಿನಲ್ಲಿ ನಡೆದ ಸಂಘರ್ಷವೇ ಅವರನ್ನು ಮಹರ್ಷಿಯನ್ನಾಗಿ ಮಾಡಿತು. ಅದು ಅವರ ಮನಃಪರಿವರ್ತನೆಗೆ ಕಾರಣವಾಯಿತು. ತಳ, ಶೋಷಿತ ಸಮುದಾಯಗಳು ಮತ್ತು ಮೀಸಲಾತಿ ಪಡೆಯುತ್ತಿರುವ ಎಲ್ಲ ವರ್ಗಗಳು ಅಂಬೇಡ್ಕರ್ ಇಲ್ಲದ ಬದುಕನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.
Advertisement
ಡಾ| ಬಿ.ಆರ್. ಅಂಬೇಡ್ಕರ್‌ರವರ ಚಿಂತನೆಗಳು ಕೇವಲ ಆಚರಣೆಗೆ ಸೀಮಿತವಾಗದೆ ಬದುಕಿನಲ್ಲಿ ಅನುಷ್ಠಾನಗೊಳ್ಳಬೇಕಿದೆ. ದೇಶ ಕಂಡ ಅಪರೂಪದ ಮಹಾನ್ ಮಾನವತಾವಾದಿಯಾಗಿದ್ದಾರೆ. ಸಂಕಷ್ಟ, ದಾಸ್ಯದಲ್ಲಿ ಬದುಕುತ್ತಿದ್ದ ಜನರಲ್ಲಿ ಸ್ವಾಭಿಮಾನದ ಕಿಚ್ಚು ಮೂಡಿಸಿದರು ಎಂದು ಸ್ಮರಿಸಿದರು.
ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಚಿತ್ರದುರ್ಗ ವಿಭಾಗದ ಎಸ್ಸಿ-ಎಸ್ಟಿ ಅಧಿಕಾರಿಗಳ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ಬಾಬುರಾಜ್‌ಮಾತನಾಡಿ, ಹೋರಾಟಗಾರರು, ಮಾಧ್ಯಮಗಳು ಸೇರಿದಂತೆ ಜಿಲ್ಲೆಯ ಜನತೆಯ ಅವಿರತ ಹೋರಾಟದ ಫಲವಾಗಿ ವಿಭಾಗೀಯ ಕಚೇರಿ ಹಿಂದುಳಿದ ಜಿಲ್ಲೆಗೆ ಬಂದಿದೆ.
ಆದರೂ ನಿರೀಕ್ಷಿತ ಮಟ್ಟದಲ್ಲಿ ಪ್ರಗತಿ ಕಂಡಿಲ್ಲ ಎನ್ನುವ ನೋವಿದೆ. ಸಮಗ್ರ ಅಭಿವೃದ್ಧಿ ಮತ್ತು ಕುಗ್ರಾಮಗಳಿಗೆ ಸಾರಿಗೆ ಸೇವೆ ನೀಡುವ ಮೂಲಕ ಜಿಲ್ಲೆಯ ಜನರ ಋಣ ತೀರಿಸಬೇಕಿದೆ ಎಂದು ಹೇಳಿದರು.
ಚಿತ್ರದುರ್ಗ ವಿಭಾಗ ಲಾಭದಲ್ಲಿ ನಡೆಯುತ್ತಿದೆ. ಚಿತ್ರದುರ್ಗ ಲೋಕಸಭಾ ವ್ಯಾಪ್ತಿಯ ಎಂಟು ತಾಲೂಕುಗಳು ಈ ವಿಭಾಗಕ್ಕೆ ಸೇರ್ಪಡೆಯಾಗಿದ್ದು, ಐದು ಸಾರಿಗೆ ಘಟಕಗಳನ್ನು ಒಳಗೊಂಡು ವಿಭಾಗವಾಗಿದೆ ಎಂದರು.
ಛಲವಾದಿ ಗುರುಪೀಠದ ಶ್ರೀ ಬಸವನಾಗಿದೇವ ಸ್ವಾಮೀಜಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಸನ್ನಕುಮಾರ್ ಕೆ. ಬಾಲನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಆಕಾಶವಾಣಿ ಕಾರ್ಯಕ್ರಮಾಧಿಕಾರಿ ಅರಕಲಗೂಡು ಮಧುಸೂದನ್, ಅಹಿಂದ ಮುಖಂಡ ಮುರುಘರಾಜೇಂದ್ರ ಒಡೆಯರ್, ರೈತ ಮುಖಂಡ ಕೆ.ಪಿ. ಭೂತಯ್ಯ, ನಗರಸಭೆ ಮಾಜಿ ಅಧ್ಯಕ್ಷ ಎಚ್.ಸಿ.ನಿರಂಜನಮೂರ್ತಿ, ಕೆಎಸ್‌ಆರ್‌ಟಿಸಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಆರ್. ರಾಜಣ್ಣ, ರಾಮಾಂಜನಿ, ಗುರುಮೂರ್ತಿ, ಹೇಮಲತಾ ಮತ್ತಿತರರು ಇದ್ದರು.