Advertisement
ತಹಶೀಲ್ದಾರ್ ಕಚೇರಿ ಆವರಣದಲ್ಲಿ ರವಿವಾರ ತಾಲೂಕು ಆಡಳಿತ ಏರ್ಪಡಿಸಿದ್ದ ನಿಜಶರಣ ಅಂಬಿಗರ ಚೌಡಯ್ಯಜಯಂತ್ಯುತ್ಸವದಲ್ಲಿ ಅವರು ಮಾತನಾಡಿ, ಸಮಾಜದಲ್ಲಿ ಬೇರೂರಿದ್ದ ಮೂಢನಂಬಿಕೆ ಕಿತ್ತೂಗೆಯಲು ಚೌಡಯ್ಯನವರು
ಶ್ರಮಿಸಿದ್ದರು. ಹೀಗಾಗಿ ಅವರೊಬ್ಬ ಶ್ರೇಷ್ಠ ಮತ್ತು ನಿಜಶರಣ ಎಂಬ ಅಭಿಧಾನಕ್ಕೆ ಪಾತ್ರರಾಗಿದ್ದಾರೆ. ಅವರ ವಚನ
ಮತ್ತು ತತ್ವದಾರ್ಶಗಳು ಸಾರ್ವಕಾಲಿಕ ಶ್ರೇಷ್ಠವಾಗಿವೆ ಎಂದರು. ಸರಕಾರ ಕೂಡ ಜಾತಿಗೊಬ್ಬ ಶರಣರನ್ನು ಗುರುತಿಸಿ ಅವರ ಹೆಸರಲ್ಲಿ ಜಯಂತಿ ಆಚರಣೆ ಜಾರಿಗೆ ತಂದು ಪರೋಕ್ಷವಾಗಿ ಜಾತಿಯತೇ ಪ್ರತಿಪಾದಿಸುತ್ತಿದೆ. ಶರಣರನ್ನು ಆಯಾ ಜಾತಿಗೆ ಸೀಮಿತಗೊಳಸದೆ ಸಮಾಜದ ಆಸ್ತಿಯನ್ನಾಗಿ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ರಾಘವೇಂದ್ರ ವೇದಿಕೆಯಲ್ಲಿದ್ದರು. ಸಮಾಜದ ಪ್ರಮುಖರಾದ ಶಿವಪ್ಪ ಕಟ್ಟಿಮನಿ, ಮಾನಪ್ಪ ಸೂಗೂರು ವೆಂಕಟೇಶ ಪರಾಶಿ, ಪಾರಪ್ಪ ಗುತ್ತೇದಾರ, ಮಾನಪ್ಪ ಚಳ್ಳಗಿಡ, ವೆಂಕಟರೆಡ್ಡಿ ಬೋವಿ, ಹಿನ್ನಪ್ಪ ತಳವಾರ, ಮಲ್ಲು ಬಿಲ್ಲವ್, ರಮೇಶಗೌಡ, ರಾಮುನಾಯಕ ಅರಳಳ್ಳಿ, ಮಲ್ಲಪ್ಪ ವಗ್ಗಾ, ರವಿ ಗುತ್ತೇದಾರ, ರಾಘವೇಂದ್ರ ಗೋಡೆಕಾರ, ನಾಗರೆಡ್ಡಿ ರತ್ತಾಳ, ಯಲ್ಲಪ್ಪ ರತ್ತಾಳ, ಖಾಲೀದಹ್ಮದ್ ತಾಳಿಕೋಟ ಇದ್ದರು. ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು. ಹಣಮಂತ ಪೂಜಾರಿ
ನಿರೂಪಿಸಿ, ವಂದಿಸಿದರು.
Related Articles
ರಾಜಾ ವೆಂಕಟಪ್ಪ ನಾಯಕ, ಶಾಸಕ
Advertisement