ಜಗಳೂರು: ತಾಲೂಕಿನಲ್ಲಿ ಕೆಲಸ ಮಾಡಲು ಇಷ್ಟವಿಲ್ಲದಿದ್ದರೆ ಸ್ವಯಂ ಪ್ರೇರಣೆಯಿಂದ ಜಾಗ ಖಾಲಿ ಮಾಡಿ ಎಂದು ಶಾಸಕ ಎಚ್.ಪಿ.ರಾಜೇಶ್ ತಾಲೂಕು ಅನುಷ್ಠಾನಾಧಿಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ತ್ರೆçಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು.
ಇಲಾಖೆಗಳ ಪ್ರಗತಿ ನಿಮ್ಮ ಕೈಯಲ್ಲಿರುತ್ತದೆ. ಆ ಪ್ರಗತಿ ಆಶಾದಾಯಕವಾಗದಿದ್ದರೆ ಅದು ಸಾರ್ಥಕವಲ್ಲ. ಭೌತಿಕ, ಆರ್ಥಿಕ ಪ್ರಗತಿಗಿಂತ ಜನಸಾಮಾನ್ಯರಿಗೆ ಸ್ಪಂದನೆ ಅತಿ ಮುಖ್ಯ. ಅದು ಇಲ್ಲದೇ ಹೋದರೆ ನೀವು ಇದ್ದು ಏನೂ ಪ್ರಯೋಜನವೆಂದು ತೀವ್ರ ತರಾಟೆಗೆ ತೆಗೆದುಕೊಂಡರು.
ಕಳೆದ ನಾಲ್ಕು ವರ್ಷದಲ್ಲಿ ನಾನೆಂದು ನಿಮ್ಮನ್ನು ಬೈದಿಲ್ಲ. ಬೆದರಿಸಿಲ್ಲ. ನಾನೇನಾದರೂ ಬೇಡಿಕೆ ಇಟ್ಟಿದ್ದರೆ ಹೇಳಿ, ನನ್ನ ಕಾರ್ಯಕರ್ತರೇನಾದರೂ ರೋಲ್‌ಕಾಲ್ ಮಾಡಿದ್ದರೆ ಕೇಳಿ. ಗೆಳೆಯರಂತೆ ನಿಮ್ಮನ್ನು ಕಂಡಿದ್ದೇನೆ. ಹಾಗಾದರೆ ಪ್ರಗತಿ ಸಾಧಿಧಿ ಸಲು ಏನಾಗಿದೆ ನಿಮಗೆ ಅಡ್ಡಿ ಎಂದು ತೀವ್ರ ತರಾಟೆಗೆ ತೆಗೆದುಕೊಂಡರು.
ಬೆರಳಣಿಕೆಯಷ್ಟು ಅಧಿಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ. ಉಳಿದವರು ಆಟ ಆಡುತ್ತಿದ್ದಾರೆ. ಆತ್ಮಸಾಕ್ಷಿಗಾದರೂ ಇಲಾಖೆಗಳ ಕೆಲಸ ಮಾಡುವುದು ಬೇಡವೇ? ನಿಮಗೆ ಸರ್ಕಾರ ಸಂಬಳ ಕೊಡುತ್ತಿಲ್ಲವೆ. ಆ ಸಂಬಳದ ಋಣ ತೀರಿಸುವುದು ಬೇಡವೆ?
ನಾನು ಮತ್ತೂಮ್ಮೆ ಮನವಿ ಮಾಡ್ತಿನಿ ದಯಾಮಾಡಿ ಕೆಲಸ ಮಾಡಲು ಇಷ್ಟವಿಲ್ಲದ ಅಧಿಧಿಕಾರಿಗಳು ಕೂಡಲೇ ಜಾಗ ಖಾಲಿ ಮಾಡಿ. ನೀವಾಗಿ ಹೋಗದೇ ಹೋದರೆ ನಿಮ್ಮ ವಿರುದ್ಧ ಕ್ರಮದ ಮೂಲಕ ಜಾಗ ಖಾಲಿ ಮಾಡಿಸಲು ನಾನು ಹಿಂಜರಿಯುವುದಿಲ್ಲ ಎಂದರು.
ಜಿಪಂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಎಸ್.ಕೆ.ಮಂಜುನಾಥ್ ಮಾತನಾಡಿ, ಕಳೆದ ಎರಡು ವರ್ಷದಿಂದ ಜಗಳೂರು ತಾಲೂಕಿಗೆ ಕಳಪೆ ಬಿತ್ತನೆ ಬೀಜ ಮಾರಾಟವಾಗಿದೆ. ಮಳೆಯಾಗದೇ ಇರುವುದರಿಂದ ಇದು ಬೆಳಕಿಗೆ ಬಂದಿಲ್ಲ. ಆದರೆ ಸ್ಥಳೀಯ ರೈತರಿಂದ ಬೀಜೋತ್ಪಾದನೆಗೆ ಯಾಕೆ ಮಾಡಿಸುತ್ತಿಲ್ಲ.
ಇಲಾಖೆಯಿಂದ ದೃಢೀಕರಿಸಿದ ಬೀಜವನ್ನು ಜಗಳೂರಿನಲ್ಲಿ 400ರೂಪಾಯಿಗೆ ಮಾರಾಟವಾಗುತ್ತದೆ. ಇದೇ ದೃಢಿಕೃತ ಬಿತ್ತನೆ ಬೀಜ ರಾಣಿಬೆನ್ನೂರಿನಲ್ಲಿ 60ರಿಂದ 90ರೂಪಾಯಿ ಮಾರಾಟವಾಗುತ್ತದೆ. ಬಿತ್ತನೆ ಬೀಜ ಸಂದರ್ಭದಲ್ಲಾಗುವ ಬಿತ್ತನೆ ಬೀಜ ದಂಧೆಗೆ ಕಡಿವಾಣ ಹಾಕಬೇಕು. ಮತ್ತು ಒಂದೆರಡು ಕಂಪನಿಗಳ ಬಿತ್ತನೆ ಬೀಜಕ್ಕೆ ಮಾತ್ರ ಶಿಫಾರಸ್ಸು ಮಾಡಬೇಕೆಂದರು.