ಜಗತ್ತಿನ ಶಕ್ತಿಯೇ ಸೂರ್ಯಕಿರಣ. ಇದರ ಕಾಸ್ಮಿಕ್ ಕಿರಣಗಳಿಂದ ಭೂಮಿಯ ಸಕಲ ಜೀವರಾಶಿಗಳೂ ಚೈತನ್ಯ ಪಡೆಯುತ್ತವೆ. ಈ ಕಿರಣಗಳ ಗರಿಷ್ಠ ಪ್ರಯೋಜನ ಪಡೆಯಬೇಕೆಂದರೆ ಇದರ ಸಂಪರ್ಕ ಹೆಚ್ಚು ಬೇಕಾಗುತ್ತದೆ. ಆದರೆ, ಇದಕ್ಕೆ ತದ್ವಿರುದ್ಧವಾಗಿ ಇಳಿಸಂಜೆಯ ಸೂರ್ಯನ ಕಿರಣಗಳ ದುಷ್ಪರಿಣಾಮ ಸಸ್ಯಗಳ ಮೇಲೆ ಆಗುತ್ತದೆ. ಈ ಕಾರಣದಿಂದಲೇ ಭಾರತೀಯ ಕೃಷಿಕರು ಪಶ್ಚಿಮ ದಿಕ್ಕಿನಲ್ಲಿ ಗಿಡಮರಗಳನ್ನು ಬೆಳೆಸುತ್ತಿದ್ದರು.
ವಿಶೇಷವಾಗಿ ಕೆಲವಾರು ಗಿಡ ಮರಗಳಿಗೆ ಇಳಿ ಬಿಸಿಲಿನ ದುಷ್ಪರಿಣಾಮ ತಡೆಗಟ್ಟುವ ಶಕ್ತಿ ಇದೆ. ಅಲಂಕಾರಕ್ಕೆ ಬೆಳೆಸುವ ಅಶೋಕ ವೃಕ್ಷವನ್ನು ಬೇಲಿಯಲ್ಲಿ ಬೆಳೆಸುತ್ತಾರೆ. ಇದೊಂದು ರೀತಿಯಲ್ಲಿ ಇಳಿಬಿಸಿಲಿನ ದುಷ್ಪರಿಣಾಮದಿಂದ ಇತರ ಸಸ್ಯಗಳು ಬಳದಂತೆ ತಡೆಯುವ ದಟ್ಟವಾದ ಪರದೆ. ಈ ವೃಕ್ಷವನ್ನು ಹತ್ತಿರ ಹತ್ತಿರದಲ್ಲಿ ಬೆಳೆಸಬಹುದು. ಅಡಕೆ, ಕಾಫಿ, ಬಾಳೆ ಇತ್ಯಾದಿಗಳಿರುವ ತೋಟದ ಪಶ್ಚಿಮ ದಿಕ್ಕಿನಲ್ಲಿ ಬೇಲಿಯಾಗಿ
ಬೆಳೆಸಲು ಅಶೋಕ ಗಿಡಗಳು ಸೂಕ್ತ.
ಅಡಕೆ, ಕಾಫಿ ಬೆಳೆಗಳಿಗೆ ಇಳಿಬಿಸಿಲಿನ ಪ್ರಖರತೆಯಿಂದ ಹೆಚ್ಚಿನ ಪ್ರಮಾಣದ ಹಾನಿ ಉಂಟಾಗುತ್ತದೆ. ಇವುಗಳ ಕಾಂಡ ಕತ್ತರಿಸಿ ತೆಗೆದಂತೆ ಸೀಳುತ್ತದೆ. ನೆರಳು ನೀಡುವಂಥ ಮರಗಳನ್ನು ಪಶ್ಚಿಮ ದಿಕ್ಕಿನಲ್ಲಿ ಬೆಳೆಸಿರದಿದ್ದರೆ ಈ ಸಸ್ಯಗಳ ಕಾಂಡಗಳಿಗೆ ದಟ್ಟವಾಗಿ ಬಿಳಿಸುಣ್ಣ ಹಚ್ಚುವುದು ಕೂಡ ಪರಿಹಾರ ಕ್ರಮ.
ಬಿಳಿಬಣ್ಣಕ್ಕೆ ಶಾಖ ಹೀರಿಕೊಳ್ಳದೆ ಇರುವ ಗುಣ ಇದೆ. ಬೇರೆ ಯಾವ ಬಣ್ಣ ಬಳಿದರೂ ಪ್ರಯೋಜನವಿಲ್ಲ. ಗೋಣಿ ಮರವನ್ನು ಜಮೀನಿನ ತೋಟದ ಪಶ್ಚಿಮ ದಿಕ್ಕಿನಲ್ಲಿ ಬೆಳೆಸುವುದರಿಂದಲೂ ಇಳಿಬಿಸಿಲಿನ ಪ್ರಖರತೆ ತಡೆಯಬಹುದು. ಸಿಲ್ವರ್ ಓಕ್ ಮರ, ಗಾಳಿಮರ ಕೂಡ ಸೂಕ್ತ. ಗಾಳಿಮರದಿಂದ ಮತ್ತಷ್ಟು ಪ್ರಯೋಜನ ಇದೆ. ಇದರ ಎಲೆಗಳಲ್ಲಿ ಪೊಟ್ಯಾಷ್ ಅಂಶ ಇದೆ. ಆದ್ದರಿಂದ ಈ ಮರದಿಂದ ಉದುರಿದ ಎಲೆಗಳನ್ನು ಇತರ ಸಸ್ಯಗಳಿಗೆ ಮುಚ್ಚಿಗೆಯಾಗಿ ನೀಡಿದಾಗ ಅವುಗಳಿಗೆ ಸಹಜವಾಗಿ ಪೊಟ್ಯಾಷ್ ದೊರೆತಂತಾಗುತ್ತದೆ.
ವಿಶೇಷವಾಗಿ ಕೆಲವಾರು ಗಿಡ ಮರಗಳಿಗೆ ಇಳಿ ಬಿಸಿಲಿನ ದುಷ್ಪರಿಣಾಮ ತಡೆಗಟ್ಟುವ ಶಕ್ತಿ ಇದೆ. ಅಲಂಕಾರಕ್ಕೆ ಬೆಳೆಸುವ ಅಶೋಕ ವೃಕ್ಷವನ್ನು ಬೇಲಿಯಲ್ಲಿ ಬೆಳೆಸುತ್ತಾರೆ. ಇದೊಂದು ರೀತಿಯಲ್ಲಿ ಇಳಿಬಿಸಿಲಿನ ದುಷ್ಪರಿಣಾಮದಿಂದ ಇತರ ಸಸ್ಯಗಳು ಬಳದಂತೆ ತಡೆಯುವ ದಟ್ಟವಾದ ಪರದೆ. ಈ ವೃಕ್ಷವನ್ನು ಹತ್ತಿರ ಹತ್ತಿರದಲ್ಲಿ ಬೆಳೆಸಬಹುದು. ಅಡಕೆ, ಕಾಫಿ, ಬಾಳೆ ಇತ್ಯಾದಿಗಳಿರುವ ತೋಟದ ಪಶ್ಚಿಮ ದಿಕ್ಕಿನಲ್ಲಿ ಬೇಲಿಯಾಗಿ ಬೆಳೆಸಲು ಅಶೋಕ ಗಿಡಗಳು ಸೂಕ್ತ.

ಕುಮಾರ ರೈತ