Advertisement

ಪುತ್ರನ ಕೊಂದವರ ಬಿಡಬೇಡಿ: ಹುತಾತ್ಮ ಯೋಧನ ತಂದೆ ಆಗ್ರಹ

06:00 AM Jun 17, 2018 | |

ಶ್ರೀನಗರ: “ನನ್ನ ಪುತ್ರನನ್ನು ಕೊಂದವರನ್ನು ನೀವು ಕೊಲ್ಲುತ್ತೀರಾ? ಅಥವಾ ನಾನೇ ಈ ಬಗ್ಗೆ ಮುಂದಾಗಬೇಕಾ?’ ಹೀಗೆಂದು ಹುತಾತ್ಮ ಯೋಧ ಔರಂಗಜೇಬ್‌ರ ತಂದೆ ಮೊಹಮ್ಮದ್‌ ಹನೀಫ್ ಪ್ರಶ್ನಿಸಿದ್ದಾರೆ. ಉಗ್ರರ ಮಟ್ಟ ಹಾಕಲು ಅವರು ಕೇಂದ್ರ ಸರ್ಕಾರಕ್ಕೆ 72 ಗಂಟೆಗಳ ಗಡುವನ್ನೂ ನೀಡಿದ್ದಾರೆ. ಇಷ್ಟು ಮಾತ್ರವಲ್ಲ “ಪುತ್ರ ದೇಶಕ್ಕಾಗಿ ಹುತಾತ್ಮನಾಗಿದ್ದಾನೆ. ಈ ಘಟನೆಯಿಂದ ಹೆತ್ತವರು ಯಾರು ಎದೆಗುಂದಬೇಕಾಗಿಲ್ಲ. ಮಕ್ಕಳು ಸೇನೆ ಸೇರಲು ಬಯಸುವುದಿದ್ದರೆ ಅದಕ್ಕೆ ಪ್ರೋತ್ಸಾಹ ನೀಡಿ’ ಎಂದು ಹೇಳಿದ್ದಾರೆ. ಇದೇ ವೇಳೆ ಹುತಾತ್ಮರಾಗಿರುವ ಯೋಧ ಔರಂಗಜೇಬ್‌ ಅವರ ಅಂತ್ಯಕ್ರಿಯೆ ಪುಲ್ವಾಮಾ ಜಿಲ್ಲೆಯಲ್ಲಿ ನಡೆದಿದೆ.

Advertisement

ಈ ನಡುವೆ ಶನಿವಾರ ರಂಜಾನ್‌ ದಿನವಾಗಿದ್ದರೂ ಕಣಿವೆ ರಾಜ್ಯದಲ್ಲಿ ಅಲ್ಲ ಲ್ಲಿ ಹಿಂಸಾಚಾರ ನಡೆ ದಿದ್ದು, ಇದರಲ್ಲಿ ಒಬ್ಬ ಪ್ರತಿಭಟನಾಕಾರ ಮೃತನಾಗಿದ್ದಾನೆ. ರಜೌರಿ ಸಮೀಪದಲ್ಲಿರುವ ಎಲ್‌ಒಸಿಯಲ್ಲಿ ಪಾಕಿಸ್ತಾನ ಸೈನಿಕರು ನಡೆಸಿದ ಗುಂಡಿನ ದಾಳಿಗೆ ಒಬ್ಬ ಯೋಧ ಹುತಾತ್ಮನಾಗಿದ್ದಾನೆ. ಸೊಪೂರ್‌, ಕುಪ್ವಾರಾಗಳಲ್ಲಿನ ಹಿಂಸಾಚಾರದಿಂದ ಸಾರ್ವಜನಿಕ ಆಸ್ತಿ ಪಾಸ್ತಿ ನಷ್ಟವಾಗಿದೆ. ಇದರ ಹೊರತಾಗಿಯೂ ಜಮ್ಮು ಮತ್ತು ಕಾಶ್ಮೀರದ ಇತರ ಭಾಗಗಳಲ್ಲಿ ಸಾಂಪ್ರದಾಯಿಕ ಕ್ರಮಗಳಿಂದ ರಂಜಾನ್‌ ಆಚರಿಸಲಾಗಿದೆ. ವಾಘಾ ಗಡಿಯಲ್ಲಿ ಭಾರತ-ಪಾಕಿಸ್ತಾನ ನಡುವೆ ಸಾಂಪ್ರದಾಯಿಕವಾಗಿ ನಡೆಯುವ ಸಿಹಿ ವಿನಿಮಯ ಕಾರ್ಯಕ್ರಮವೂ ನಡೆದಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next