Advertisement

ಗ್ರಹಣ ಇದೆಯೆಂದು ಮನೆ ಬಿಡಬೇಡಿ: ಬಸವ ಶ್ರೀ

12:32 PM Jul 28, 2018 | Team Udayavani |

ಚಿತ್ರದುರ್ಗ: ಗ್ರಹಣ ಇದೆ ಎಂದು ಮೌಡ್ಯ, ಅಂಧ ಶ್ರದ್ಧೆಯಿಂದ ಮನೆ ಬಿಡಬೇಡಿ. ಪ್ರಕೃತಿಯಲ್ಲಿ ನಡೆಯುವ ಬದಲಾವಣೆಗಳನ್ನು ವೈಜ್ಞಾನಿಕವಾಗಿ ನೋಡಿ ಎಂದು ಪಂಚಮಶಾಲಿ ಪೀಠದ ಬಸವಜಯಮೃತ್ಯುಂಜಯ ಸ್ವಾಮೀಜಿ ತಿಳಿಸಿದರು. ಇಲ್ಲಿನ ಭೋವಿಗುರುಪೀಠದ ಎಸ್‌ ಜೆಎಸ್‌ ಶಾಲೆಯಲ್ಲಿ ಶುಕ್ರವಾರ ನಡೆದ ಗುರು ಪೂರ್ಣಿಮೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಚಂದ್ರಗ್ರಹಣ ಪ್ರಕೃತಿಯಲ್ಲಿ ನಡೆಯುವ ಒಂದು ಬದಲಾವಣೆ. ವಿದ್ಯಾರ್ಥಿಗಳು ಮತ್ತು ಜನರು ಗ್ರಹಣವನ್ನು ವೈಜ್ಞಾನಿಕವಾಗಿ
ನೋಡಬೇಕು. ಊಟ-ನೀರು ಚೆಲ್ಲುವುದು, ಮನೆ ಬಿಟ್ಟು ಹೋಗುವಂತಹ ಮೌಢ್ಯಾಚಾರಣೆ ಬೇಡ ಎಂದರು.

ವ್ಯಾಸ ಮಹರ್ಪಿಯ ದಿನಾಚರಣೆ ಅಂಗವಾಗಿ ಗುರು ಪೂರ್ಣಿಮೆ ನಡೆಯುವುದು. ಗುರುಗಳಿಗೆ ವಿಶೇಷವಾಗಿ ಹೊಂದಿಸುವಂತಹ ಕಾರ್ಯಕ್ರಮ ಇದಾಗಿದ್ದು, ಎಸ್‌ಜೆಎಸ್‌ ಶಾಲೆಯ ವಿದ್ಯಾರ್ಥಿಗಳಿಗೆ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಗುರುವಾಗಿದ್ದು ಕೊಂಡು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. ಗುರುಗಳಿಗೆ ಭಕ್ತಿಯಿಂದ ಪೂಜೆ ಮಾಡಿದರಷ್ಟೆ ಸಾಲದು. ಅವರ ತತ್ವಾದರ್ಶಗಳನ್ನು ಅಳವಡಿಸಿಕೊಂಡು ಆಚರಿಸದಾಗಲೇ ಗುರುವಿಗೆ ಸಲ್ಲಿಸಿದ ನಿಜವಾದ ಭಕ್ತಿ. ತಂದೆ-ತಾಯಂದಿರನ್ನು ಅಗೌರವಿಸಿ ಅವರ
ವಿರುದ್ಧ ನಡೆದುಕೊಳ್ಳುವುದು, ಅವರ ತತ್ವ ಅಳವಡಿಸಿಕೊಳ್ಳದೆ ಇರುವುದು ವಿಪರ್ಯಾಸ ಎಂದು ಬೇಸರ ವ್ಯಕ್ತಪಡಿಸಿದರು.

ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಮಾತನಾಡಿ, ಅರಿವೇ ಗುರು ಎಂಬುದನ್ನು ಶರಣರ ತತ್ವದಲ್ಲಿ ಕಾಣುತ್ತೇವೆ. ಗುರುವಿನ ಸ್ಥಾನ ಶಾಶ್ವತ. ಭೌಗೋಳಿಕವಾಗಿ ವಾತಾವರಣದಲ್ಲಿ ನಡೆಯುವ ಗ್ರಹಣ ತಾತ್ಕಾಲಿಕ. ಮನುಷ್ಯನಿಗೆ ಭೌತಿಕ ಗ್ರಹಣ ಬಂದರೆ ಭಯೋತ್ಪಾದನೆ, ಭ್ರಷ್ಟಾಚಾರ, ಮೌಡ್ಯತೆ ಹೀಗೆ ಹಲವಾರು ನ್ಯೂನತೆಗಳಿಗೆ ಒಳಗಾಗುತ್ತಾನೆ. ಯಾರು ಸಹ ಭೌತಿಕ ಮೌಡ್ಯತೆಗೆ ಒಳಗಾಗಬಾರದು ಎಂದರು.

ಗ್ರಹಣ ಕ್ಷಣಿಕ, ಭೌತಿಕ ಗ್ರಹಣ ಧೀರ್ಘ‌ಕಾಲದ ವರೆಗೆ ಉಳಿಯುತ್ತದೆ. ಗುರು ದರ್ಶನವಾದರೆ ಭೌತಿಕ ಗ್ರಹಣದಿಂದ ದೂರವಾಗಿ ಜ್ಞಾನ ಪ್ರಾಪ್ತಿಯಾಗುತ್ತದೆ. ವ್ಯಾಸ ಮಹರ್ಷಿ ಹಿಂದುಳಿದ ವರ್ಗಕ್ಕೆ ಸೇರಿದವರು. ಅವರ ಹೆಸರಿನಲ್ಲಿ ಪೀಠ ಮಾಡಿಕೊಂಡ ಮೇಲ್ವರ್ಗದ ಅಕ್ಷರವಂಥ ಜ್ಞಾನಸ್ತರು ಆಷಾಢ ಮಾಸವನ್ನು ಅಶುಭ ಎಂದು ಬಿಂಬಿಸಿ ತಾವು ಶುಭ ಕಾರ್ಯಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಅಶುಭ ಎಂದು ಬಿಂಬಿಸಿವುದರಿಂದ ವಸ್ತುಗಳ ಬೆಲೆ ಅಗ್ಗವಾಗುತ್ತವೆ. ಅಂತಹ ಸಂದರ್ಭದಲ್ಲಿ ಶುಭ ಕಾರ್ಯಗಳನ್ನು ಮಾಡಿಕೊಳ್ಳುವುದರ
ಹಿಂದಿನ ಮರ್ಮ ತಿಳಿಯಬೇಕು ಎಂದರು.

Advertisement

ವ್ಯಾಸ ಹಿಂದುಳಿದ, ದಲಿತ, ಶೋಷಿತ ವರ್ಗಕ್ಕೆ ಸೇರಿದವರು. ಈ ಸಮುದಾಯಗಳು ಭೌತಿಕ ಗ್ರಹಣದಿಂದ ಹೊರಬಂದು
ಅಸಮಾನತೆ ಹೋಗಲಾಡಿಸಿದಾಗ ಮಾತ್ರ ವ್ಯಾಸರ ದಿನಾಚರಣೆಗೆ ಅರ್ಥ ಬರಲಿದೆ. ಚಂದ್ರ ಮತ್ತು ಸೂರ್ಯನ ಬೆಳಕನ್ನು ಹೆಚ್ಚು ಕಾಲ ತಡೆಹಿಡಿಯಲಾಗುವುದಿಲ್ಲ ಎಂದು ಹೇಳಿದರು. 

ಮಡಿವಾಳ ಗುರುಪೀಠದ ಶ್ರೀ ಬಸವ ಮಾಚಿದೇವ ಸ್ವಾಮೀಜಿ, ಶ್ರೀಮಠದ ಸಿಇಒ ಗೌನಹಳ್ಳಿ ಗೋವಿಂದಪ್ಪ, ಮುಖ್ಯಶಿಕ್ಷಕಿ ಛಾಯಾ, ಬೋಧಕ ಮತ್ತು ಬೋಧಕೇತರ ವರ್ಗ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next