Advertisement
ಸೆಪ್ಟಂಬರ್ 11, 2017ರಿಂದ ಕರ್ನಾಟಕ ಸರಕಾರವು ಬಿಡಿ ಸಿಗರೇಟ್‌ಗಳ ಮಾರಾಟವನ್ನು ನಿಷೇಧಿಸಿದೆ. ಈ ಕಾಯಿದೆಯು ಸೆಪ್ಟಂಬರ್ ಕೊನೆಯ ವಾರದಲ್ಲಿ ಜಾರಿಗೆ ಬಂದಿದೆ.
Related Articles
Advertisement
ಬಿಡಿ ಸಿಗರೇಟ್‌ಗಳನ್ನು ಮಾರುವ ಮೂಲಕ ಸಿಗರೇಟ್ ಪ್ಯಾಕ್ ಮೇಲೆ ವಿಧಿಸುವ ಹೆಚ್ಚಿನ ತೆರಿಗೆಯ ಉದ್ದೇಶವೂ ನಿಷ್ಪ್ರಯೋಜಕವಾಗುತ್ತಿದೆ. ಬಿಡಿ ಸಿಗರೇಟ್ ಮಾರಾಟದಿಂದ ಅಪ್ರಾಪ್ತ ವಯಸ್ಕರು ಧೂಮಪಾನ ಪ್ರಾರಂಭಿಸುವುದಕ್ಕೆ ಸಮೀಪ ಆಗುತ್ತಿದ್ದಾರೆ. ಕಾನೂನುಬಾಹಿರ ಸಿಗರೇಟ್‌ಗಳು ಈಗ ವ್ಯಾಪಕವಾಗಿವೆ. ಬಿಡಿ ಸಿಗರೇಟ್‌ಗಳ ನಿರ್ಬಂಧದಿಂದ ಆಗುವ ಪ್ರಯೋಜನವೇನೆಂದರೆ, ಸಿಗರೇಟ್ ಪ್ಯಾಕ್‌ಗಳು ಬಿಡಿ ಸಿಗರೇಟ್‌ಗಳಿಗಿಂತ ದುಬಾರಿಯಾಗಿವೆ; ಅದರಿಂದಾಗಿ ಹದಿಹರೆಯದವರ ಧೂಮಪಾನವನ್ನು ತಡೆಗಟ್ಟಬಹುದಾಗಿದೆ.
ರಾಜ್ಯ ತಂಬಾಕು ನಿಯಂತ್ರಣ ಘಟಕ ಮತ್ತು ಆರೋಗ್ಯ ಇಲಾಖೆ ಹಾಗೂ ಕುಟುಂಬ ಕಲ್ಯಾಣ ಇಲಾಖೆಗಳು ಕೇಂದ್ರದ ಮೆಟ್ರೋಲಜಿ ಆ್ಯಕ್ಟ್ ಪ್ರಕಾರ ಬಿಡಿ ಸಿಗರೇಟ್ ಮಾರಾಟವನ್ನು ನಿಷೇಧಿಸಬೇಕೆಂದು ಬಯಸಿದ್ದವು. ಈ ಕಾನೂನನ್ನು ಪಾಲಿಸದವರು ಕೋಟಾ³ ಕಾಯಿದೆಯ 20ನೇ ಸೆಕ್ಷನ್ ಪ್ರಕಾರ 1,000 ರೂ. ದಂಡ ಅಥವಾ ಒಂದು ವರ್ಷ ಸೆರೆವಾಸ ಅಥವಾ ಎರಡನ್ನೂ ಅನುಭವಿಸಬೇಕಾಗುತ್ತದೆ. ಈ ಕಾನೂನನ್ನು ಎರಡನೇ ಬಾರಿ ಉಲ್ಲಂ ಸಿದರೆ ಸೆರೆವಾಸ ಎರಡು ವರ್ಷಗಳ ವರೆಗೆ ಮತ್ತು ದಂಡದ ಮೊತ್ತ ಮೂರು ಸಾವಿರ ರೂಪಾಯಿವರೆಗೆ ಹೆಚ್ಚಾಗುತ್ತದೆ.
ಸಮುದಾಯ ವೈದ್ಯಕೀಯ ವಿಭಾಗ ಮತ್ತು ತಂಬಾಕು ನಿಯಂತ್ರಣ ಘಟಕದ ವತಿಯಿಂದ ಉಡುಪಿ ಜಿಲ್ಲೆಯಲ್ಲಿ ನಡೆಸಿದ ಅಧ್ಯಯನದಲ್ಲಿ ಬಿಡಿ ರೂಪದ ಸಿಗರೇಟ್ ಮಾರಾಟ ನಿಷೇಧದ ಕುರಿತಾಗಿ 155 ವ್ಯಾಪಾರಸ್ಥರು ಮತ್ತು 465 ಧೂಮಪಾನಿಗಳನ್ನು ಒಳಪಡಿಸಲಾಯಿತು. 5 ಶೈಕ್ಷಣಿಕ ವಲಯಗಳಾದ ಉಡುಪಿ, ಕುಂದಾಪುರ, ಬೈಂದೂರು, ಕಾರ್ಕಳ, ಬ್ರಹ್ಮಾವರ ವ್ಯಾಪ್ತಿಯಲ್ಲಿ ಈ ಅಧ್ಯಯನ ನಡೆಸಲಾಯಿತು.
ತರಬೇತಿ ಪಡೆದ ಸಂದರ್ಶಕರಿಂದ ಪೂರ್ವ ಪರೀಕ್ಷೆ ಪ್ರಶ್ನಾವಳಿಯ ಮುಖಾಂತರ ಬಿಡಿ ರೂಪದ ಸಿಗರೇಟ್ ಮಾರಾಟಗಾರರನ್ನು ಮತ್ತು ತಂಬಾಕು ಸೇವಿಸುವವರನ್ನು ಸಂದರ್ಶಿಸಲಾಯಿತು ಹಾಗೂ ಬಿಡಿ ರೂಪದ ಸಿಗರೇಟ್ ಮಾರಾಟ ನಿಷೇಧದ ಬಗ್ಗೆ ಅವರಿಗೆ ತಿಳಿದಿರುವ ಮಾಹಿತಿಯನ್ನು ಸಂದರ್ಶಕರು ಪಡೆದುಕೊಂಡರು. ಇದರಲ್ಲಿ ಕೇವಲ 78 (ಶೇ.50.3) ಮಾರಾಟಗಾರರು ಬಿಡಿ ರೂಪದ ಸಿಗರೇಟ್ ಮಾರುವುದರ ನಿಷೇಧದ ಬಗ್ಗೆ ತಿಳಿದಿದ್ದಾರೆ ಎನ್ನುವುದು ತಿಳಿದುಬಂತು.
ಈ ಅಧ್ಯಯನದ ಸಮೀಕ್ಷೆಯಲ್ಲಿ ಶೇ.86ರಷ್ಟು ಜನರು ಬಿಡಿ ರೂಪದ ಸಿಗರೇಟನ್ನು ಬಳಸುತ್ತಿದ್ದು, ಅದರಲ್ಲಿ ಶೇ.18 ಕಾಲೇಜಿನ ವಿದ್ಯಾರ್ಥಿಗಳಾಗಿದ್ದಾರೆ. ಧೂಮಪಾನಿಗಳ ಪ್ರಕಾರ ಬಿಡಿ ರೂಪದ ಸಿಗರೇಟ್ ಅವರಿಗೆ ಕಡಿಮೆ ವೆಚ್ಚದಲ್ಲಿ ಸಿಗುವುದರಿಂದ ಸಹಕಾರಿ ಆಗಿರುತ್ತದೆ.
ಈ ಅಧ್ಯಯನದ ಪ್ರಕಾರ ಬಿಡಿ ರೂಪದ ಸಿಗರೇಟ್ ಮಾರಾಟ ನಿಷೇಧದ ಬಗ್ಗೆ ಶೇ.50ಕ್ಕಿಂತ ಹೆಚ್ಚಿನ ಮಾರಾಟಗಾರರು ಮತ್ತು ಧೂಮಪಾನ ಸೇವಿಸುವವರಿಗೆ ಸರಿಯಾದ ಮಾಹಿತಿ ಇಲ್ಲ.ಶೇ.60ರಷ್ಟು ಜನರಿಗೆ ಮಾತ್ರ ಕಾನೂನು ಉಲ್ಲಂ ಸಿದರೆ ಅದು ಶಿಕ್ಷಾರ್ಹ ಅಪರಾಧ ಎನ್ನುವ ಬಗ್ಗೆ ಅರಿವಿರುತ್ತದೆ.ಕಾನೂನು ಸರಿಯಾಗಿ ಅಳವಡಿಕೆಯಾದಲ್ಲಿ ಶೇ.75ರಷ್ಟು ಮಾರಾಟಗಾರರು ಬಿಡಿ ರೂಪದ ಸಿಗರೇಟ್ ಮಾರಾಟ ಮಾಡುವ ನಿಷೇಧ ಕಾನೂನನ್ನು ಸರಿಯಾಗಿ ಅಳವಡಿಕೆ ಮಾಡಿಕೊಳ್ಳಬಹುದು.
ಈ ಅಧ್ಯಯನದ ಪ್ರಕಾರ, ಈ ಕಾನೂನು ಸರಿಯಾಗಿ ಅನುಷ್ಠಾನಗೊಂಡಲ್ಲಿ ಧೂಮಪಾನಿಗಳು ಸಿಗರೇಟ್ ಸೇವನೆಯನ್ನು ಬಿಡಲು ಮತ್ತು ಸಿಗರೇಟ್ ಸೇವನೆಯ ಪ್ರಮಾಣವನ್ನು ತಗ್ಗಿಸಲು ಸಹಕಾರಿಯಾಗಲಿದೆ.ಈ ನಿಟ್ಟಿನಲ್ಲಿ ಎಲ್ಲ ವ್ಯಾಪಾರಸ್ಥರು ಬಿಡಿ ರೂಪದ ಸಿಗರೇಟ್ ಮಾರಾಟ ನಿಷೇಧದ ಕಾನೂನನ್ನು ಪಾಲಿಸಿದರೆ ತಂಬಾಕು ನಿಯಂತ್ರಣಕ್ಕೆ ಸಹಕಾರಿಯಾಗಲಿದೆ.
– ಡಾ| ರೋಹಿತ್ ಭಾಗವತ್ಮತ್ತು
ಡಾ| ಮುರಳೀಧರ ಕುಲಕರ್ಣಿ
ಸಮುದಾಯ ವೈದ್ಯಕೀಯ ವಿಭಾಗ,
ಕೆಎಂಸಿ ಮಣಿಪಾಲ