ಮಾದನ ಹಿಪ್ಪರಗಿ: ಕಲಾವಿದ ತನ್ನ ಭವಿಷ್ಯ ನಿರ್ಮಿಸಿಕೊಳ್ಳಬೇಕಾದರೆ ಇತಿಹಾಸದ ಪರಿಜ್ಞಾನವಿರಬೇಕು ಎಂದು ದಿ ಐಡಿಯಲ್ ಫೈನ್ ಆರ್ಟ್ ಸೊಸೈಟಿ ಕಾರ್ಯದರ್ಶಿ ಪ್ರೊ| ವಿ.ಜಿ. ಅಂದಾನಿ ಅಭಿಪ್ರಾಯಪಟ್ಟರು. ನಿಂಬಾಳ ಗ್ರಾಮದ ಕಲಾವಿದ ದಿ| ಶಾಂತಲಿಂಗಪ್ಪ ಪಾಟೀಲ ಅವರ 135ನೇ ವರ್ಷದ ಸ್ಮರಣೆ ಅಂಗವಾಗಿ ದಿ ಐಡಿಯಲ್ ಫೈನ್ ಆರ್ಟ್ ಸೊಸೈಟಿ ಮತ್ತು ಜಿಪಂ ಸಂಯುಕ್ತಾಶ್ರಯದಲ್ಲಿ ನಡೆದ ವಿಶೇಷ ಅಂಚೆ ಲಕೋಟೆ ಬಿಡುಗಡೆ ಸಮಾರಂಭದಲ್ಲಿ ಅತಿಥಿಯಾಗಿ ಅವರು ಮಾತನಾಡಿದರು.
ಕಲಾವಿದ ಸದಾ ಕ್ರಿಯಾಶೀಲತೆಯಿಂದ ಇದ್ದಾಗ ಮಾತ್ರ ಕಲೆ ರೂಪುಗೊಳ್ಳಲು ಸಾಧ್ಯವಾಗುತ್ತದೆ. ದಿ| ಶಾಂತಲಿಂಗಪ್ಪ ಪಾಟೀಲ ಅವರು ಕಲಾಪ್ರತಿಭೆಯುಳ್ಳವರಾಗಿದ್ದರು. ಅವರ ಸವಿನೆನೆಪಿಗಾಗಿ ಅಂಚೆ ಇಲಾಖೆ ವಿಶೇಷ ಲಕೋಟೆ ಬಿಡುಗಡೆ ಮಾಡುತ್ತಿರುವುದು ಔಚಿತ್ಯವಾಗಿದೆ ಎಂದು ಹೇಳಿದರು.
ಅಂಚೆ ಲಕೋಟೆ ಬಿಡುಗಡೆ ಮಾಡಿ ಮಾತನಾಡಿದ ಕರ್ನಾಟಕ ಸರ್ಕಲ್ ಚೀಫ್ ಪೋಸ್ಟ್ ಮಾಸ್ಟರ್ ಜನರಲ್ ಡಾ| ಚಾರ್ಲಸ್ ಲೊಬೊ, ಕಲಾವಿದರ ವ್ಯಕ್ತಿತ್ವ ಗುರುತಿಸಿ ವಿಶೇಷ ಅಂಚೆ ಲಕೋಟೆ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು. ಉತ್ತರ ಕರ್ನಾಟಕ ವಲಯದ ಪೋಸ್ಟ್ ಮಾಸ್ಟರ್ ಜನರಲ್ ವೀಣಾ ಆರ್. ಶ್ರೀನಿವಾಸ, ನಿವೃತ್ತ ಪ್ರಾಚಾರ್ಯ ಎಸ್.ಎಸ್. ಪಾಗಾ ಮಾತನಾಡಿದರು.
ಶಾಂತಲಿಂಗೇಶ್ವರ ವಿರಕ್ತ ಮಠದ ಜಡೆಯ ಶಾಂತಲಿಂಗ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಜಿಪಂ ಅಧ್ಯಕ್ಷೆ ಸುವರ್ಣಾ ಹಣಮಂತರಾವ ಮಾಲಾಜಿ, ಜಿಪಂ ಸದಸ್ಯ ಗುರುಶಾಂತಪ್ಪ ಪಾಟೀಲ, ತಾಪಂ ಸದಸ್ಯ ಬಸವರಾಜ ಸಾಣಕ್, ಕಲಬುರಗಿ ಅಂಚೆ ಇಲಾಖೆ ಅಧಿಕಾರಿಗಳಾದ ಎನ್. ಪ್ರಕಾಶ, ಎ.ಆರ್. ಮುದಗಲ್,
-ಕಲಾವಿದರಾದ ಸತೀಶ ವಲ್ಲಾಪುರೆ, ಪ್ರಕಾಶ ಆಕಾಶ ತಡಕಲ್, ಸಂಗಮ್ಮ ಸಾಣಕ್, ನಿಂಬಾಳ ಗ್ರಾಪಂ ಅಧ್ಯಕ್ಷೆ ಮಹಾದೇವಿ ಬಸವಪಟ್ಟಣ, ನಂದಿನಿ ರಾಜಕುಮಾರ, ಶಾಂತಾ ಕಾಳಜಿ, ಇದ್ದರು. ವರ್ಣಾ ಪೂಜಾರಿ ಪ್ರಾಥಾನಾ ಗೀತೆ ಹಾಡಿದರು. ಹಣಮಂತ ಮಂತಟ್ಟಿ ನಿರೂಪಿಸಿದರು.