Advertisement

ರಾಜಕಾರಣಿಗಳ ಸಂಪತ್ತಿಗೆ ಹಿಡಿತವೇಕಿಲ್ಲ?: ಸು.ಕೋ.

07:00 AM Sep 07, 2017 | Team Udayavani |

ಹೊಸದಿಲ್ಲಿ: “ರಾಜಕೀಯ ನೇತಾರರ ಸಂಪತ್ತು ಹೆಚ್ಚಾಗುತ್ತಿದೆ. ಅದನ್ನು ನಿಯಂತ್ರಿಸುವ ಬಗ್ಗೆ ಯಾವುದೇ ಕ್ರಮಗಳು ಏಕಿಲ್ಲ’ ?

Advertisement

ಹೀಗೆಂದು ಕೇಂದ್ರ ಸರಕಾರಕ್ಕೆ ಬಿಸಿ ಮುಟ್ಟಿಸಿದ್ದು ಸುಪ್ರೀಂ ಕೋರ್ಟ್‌. ಈ ಬಗ್ಗೆ ಕೇಂದ್ರ ಯಾಕೆ ಮೌನ ವಹಿಸಿದೆ ಎಂದು ನ್ಯಾಯಮೂರ್ತಿ ಜೆ. ಚಲಮೇಶ್ವರ್‌ ಅವರನ್ನೊಳಗೊಂಡ ನ್ಯಾಯಪೀಠ ಪ್ರಶ್ನಿಸಿದೆ. ಚುನಾ ವಣೆಯಲ್ಲಿ ಹಣ ಬಲ ಹೆಚ್ಚಾಗುತ್ತಿದೆ. ಚುನಾವಣಾ ಸುಧಾರಣೆಯಾಗಬೇಕೆಂದು ಸರಕಾರವೇ ಹಲವು ಸಂದರ್ಭಗಳಲ್ಲಿ ವಾದಿಸುತ್ತಿದೆ. ಆದರೆ ರಾಜಕೀಯ ನೇತಾರರ ಸಂಪತ್ತು ವೃದ್ಧಿಯಾಗುತ್ತಿರುವ ಬಗ್ಗೆ ನಿಯಂತ್ರಣ ಹೇರದೆ ಮೌನವಾಗಿರುವುದು ಅಚ್ಚರಿ ತಂದಿದೆ ಎಂದು ನ್ಯಾ| ಚಲಮೇಶ್ವರ್‌ ಪ್ರಶ್ನಿಸಿದ್ದಾರೆ.

“ಇದುವೇ ಏನು ಭಾರತ ಸರಕಾರದ ನಿಲುವು? ಏನು ಕ್ರಮ ಕೈಗೊಂಡಿದ್ದೀರಿ? ಸೆ.12ರ ಒಳಗೆ  ಸರಕಾರ ಆದಾಯ ತೆರಿಗೆ ಇಲಾಖೆ ವತಿಯಿಂದ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು’ ಎಂದು ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಪಿ.ಎಸ್‌. ನರಸಿಂಹ ಅವರಿಗೆ ನ್ಯಾಯಪೀಠ ಸೂಚಿಸಿದೆ.

ಕೆಲವು ರಾಜಕಾರಣಿಗಳ ಸಂಪತ್ತು ಒಂದು ಚುನಾವಣೆಯಿಂದ ಮತ್ತೂಂದು ಚುನಾವಣೆಯ ಅವಧಿಯಲ್ಲಿ ಶೇ. 500 ಏರಿಕೆಯಾಗಿದೆ. ಅದರ ವಿರುದ್ಧ ಏಕೆ ಕ್ರಮವಿಲ್ಲವೆಂದು ಕೋರ್ಟ್‌ ಪ್ರಶ್ನಿಸಿದೆ. 

“ನಾವು ಕೇಳಿದ ಮಾಹಿತಿಯನ್ನಾದರೂ ಮಂಗಳ ವಾರ ಬೆಳಗ್ಗೆ 10.30ರ ಒಳಗಾಗಿ ಕೋರ್ಟ್‌ಗೆ ಸಲ್ಲಿಕೆ ಮಾಡಿ. ಅದನ್ನಾದರೂ ಮಾಡಲು ಸಾಧ್ಯವಿಲ್ಲವೇ?’ ಎಂದು ನ್ಯಾಯಮೂರ್ತಿ ಕಠಿನವಾಗಿಯೇ ಆಕ್ಷೇಪಿಸಿದ್ದಾರೆ.

Advertisement

ಅನಾಮಧೇಯ ಆದಾಯ ಮೂಲ: ಬಿಜೆಪಿ ಫ‌ಸ್ಟ್‌ , ಕಾಂಗ್ರೆಸ್‌ ಸೆಕೆಂಡ್‌
ಅನಾಮಧೇಯ ಮೂಲಗಳಿಂದ ಆದಾಯ ಪಡೆಯುವಲ್ಲಿ  ಬಿಜೆಪಿ ಮೊದಲ ಸ್ಥಾನದಲ್ಲಿದೆ. ಕಾಂಗ್ರೆಸ್‌ ಎರಡನೇ ಸ್ಥಾನದಲ್ಲಿದೆ. ದಿಲ್ಲಿಯಲ್ಲಿರುವ ಅಸೋಸಿಯೇಶನ್‌ ಫಾರ್‌ ಡೆಮಾಕ್ರಟಿಕ್‌ ರಿಫಾಮ್ಸ್‌ì ಬಿಡುಗಡೆ ಮಾಡಿರುವ ಮಾಹಿತಿಯಲ್ಲಿ ಈ ಅಂಶ ಉಲ್ಲೇಖೀಸಲಾಗಿದೆ. 2015-16ನೇ ಸಾಲಿನಲ್ಲಿ ಬಿಜೆಪಿಗೆ 461 ಕೋ. ರೂ. (ಶೇ. 81) ಮತ್ತು ಕಾಂಗ್ರೆಸ್‌ಗೆ 186 ಕೋ. ರೂ. (ಶೇ. 71) ಆದಾಯ ಬಂದಿದೆ. ಒಟ್ಟು  646.82 ಕೋಟಿ ರೂ. ಆದಾಯ ಬಂದಿದೆ ಎಂದು ಹೇಳಿದೆ.

2015-16ನೇ ಸಾಲಿನಲ್ಲಿ  ಬಿಜೆಪಿಗೆ 570.86 ಕೋಟಿ ರೂ. ಮತ್ತು ಕಾಂಗ್ರೆಸ್‌ಗೆ 261.56 ಕೋಟಿ ರೂ. ಆದಾಯ ಬಂದಿದೆ ಎಂದು ಘೋಷಿಸಿಕೊಂಡಿವೆ. ಕೇಂದ್ರ ಚುನಾವಣಾ ಆಯೋಗಕ್ಕೆ ಎರಡೂ ಪಕ್ಷಗಳು ನೀಡಿದ ಮಾಹಿತಿಯಲ್ಲಿ ಈ ಅಂಶಗಳು ಇವೆ. 

ಸಿಪಿಎಂ 107.48 ಕೋಟಿ ರೂ., ಬಿಎಸ್‌ಪಿ 47.39 ಕೋಟಿ ರೂ., ಟಿಎಂಸಿ 34.58 ಕೋಟಿ ರೂ., ಎನ್‌ಪಿಸಿ 9.14 ಕೋಟಿ ರೂ., ಮತ್ತು ಸಿಪಿಐ 2.18 ಕೋಟಿ ರೂ. ಆದಾಯ ಪಡೆದುಕೊಂಡಿವೆ.

Advertisement

Udayavani is now on Telegram. Click here to join our channel and stay updated with the latest news.

Next